Updated on: Dec 25, 2022 | 7:49 PM
ಆಯುರ್ವೇದದಲ್ಲಿ ಲವಂಗಕ್ಕೆ ವಿಶೇಷ ಸ್ಥಾನವಿದೆ. ಇದನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸಲಾಗುತ್ತಿದೆ. ಏಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಕೇವಲ ಅಡುಗೆಯಲ್ಲಿ ಮಾತ್ರದಲ್ಲದೇ ಮಾನವನ ಆರೋಗ್ಯವನ್ನು ರಕ್ಷಿಸುವ ಕೆಲಸ ಮಾಡುತ್ತದೆ.
ಲವಂಗದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಕಾರ್ಬೋಹೈಡ್ರೇಟ್‌ಗಳು, ಹೈಡ್ರಾಲಿಕ್ ಆಮ್ಲ, ವಿಟಮಿನ್ ಎ, ಮ್ಯಾಂಗನೀಸ್ ಮುಂತಾದ ಪೋಷಕಾಂಶಗಳಿವೆ. ಇದು ನಮ್ಮ ದೇಹಕ್ಕೆ ತುಂಬಾ ಉಪಯುಕ್ತವಾಗಿವೆ. ಲವಂಗವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಲವಂಗವನ್ನು ಸೌಂದರ್ಯವರ್ಧಕಗಳಲ್ಲಿ, ಔಷಧ ಮತ್ತು ಕೃಷಿ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ ಲವಂಗವನ್ನು ದಿನಕ್ಕೆ ಮೂರು ಬಾರಿ ಊಟದ ನಂತರ ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಊಟದ ನಂತರ ಲವಂಗವನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಮತ್ತು ಕರುಳನ್ನು ಶುದ್ಧಗೊಳಿಸುತ್ತದೆ.
ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಲವಂಗವೂ ಪ್ರಮುಖ ಪಾತ್ರ ವಹಿಸುತ್ತದೆ. ಲವಂಗವನ್ನು ತಿನ್ನುವುದರಿಂದ ವಯೋಸಹಜ ಮೂಳೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಹಲ್ಲಿನ ಸಮಸ್ಯೆ, ವಸಡಿನ ಸಮಸ್ಯೆ, ಬಾಯಿ ದುರ್ವಾಸನೆ ನಿವಾರಣೆ ಮಾಡುತ್ತದೆ.