ಐಪಿಎಲ್ನಲ್ಲಿ ಆರ್ಸಿಬಿ, ಪುಣೆ ವಾರಿಯರ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಸಿಎಸ್ಕೆ ಪರ ಒಟ್ಟು 205 ಪಂದ್ಯಗಳನ್ನಾಡಿರುವ ಉತ್ತಪ್ಪ 27 ಅರ್ಧಶತಕದೊಂದಿಗೆ 4952 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಕೆಕೆಆರ್ 2014 ರಲ್ಲಿ ಚಾಂಪಿಯನ್ ಆಗಿದ್ದ ವೇಳೆ ಉತ್ತಪ್ಪ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಆದರೆ ಇದೇ ವರ್ಷ ಸೆಪ್ಟೆಂಬರ್ನಲ್ಲಿ ನಿವೃತ್ತಿ ಘೋಷಿಸಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಇದೀಗ ತಿಂಗಳುಗಳ ಅಂತರದಲ್ಲಿ ಮನಸು ಬದಲಿಸಿ ಹೊಸ ಲೀಗ್‌ನಲ್ಲಿ ಬ್ಯಾಟ್ ಬೀಸಲು ಮುಂದಾಗಿರುವುದು ವಿಶೇಷ.