ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ ದಂಪತಿ
TV9 Web | Updated By: ಆಯೇಷಾ ಬಾನು
Updated on:
Jul 20, 2022 | 5:10 PM
ರಾಜ್ಯದಲ್ಲಿ ಮಳೆ ಅಬ್ಬರ ಜೋರಾದ ಹಿನ್ನೆಲೆ ನದಿಗಳು ಉಕ್ಕಿ ಹರಿದಿದ್ದು ಡ್ಯಾಂಗಳು ಭರ್ತಿಯಾಗಿವೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪತ್ನಿ ಜೊತೆ ಇಂದು ಮಂಡ್ಯದ ಕೆಆರ್ಎಸ್ ಮತ್ತು ಮೈಸೂರಿನ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.
1 / 6
ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸುವ ಹಿನ್ನೆಲೆ ಕೆಆರ್ಎಸ್ ಜಲಾಶಯ ಹೂಗಳಿಂದ ಕಂಗೊಳಿಸುತಿತ್ತು.
2 / 6
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಮೊದಲಿಗೆ ಹೂಗಳನ್ನು ಅರ್ಪಿಸಿದರು.
3 / 6
ಕೆಆರ್ಎಸ್ ಜಲಾಶಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಪತ್ನಿ ಚೆನ್ನಮ್ಮ ಜೊತೆ ಬಾಗಿನ ಅರ್ಪಿಸಿದರು.
4 / 6
ಸಚಿವರಾದ ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಕಾರಜೋಳ, ನಾರಾಯಣಗೌಡ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್ ಉಪಸ್ಥಿತರಿದ್ದರು. ಎಂಎಲ್ಸಿಗಳಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ ಭಾಗಿಯಾಗಿದ್ದರು.
5 / 6
ಬಾಗಿನ ಅರ್ಪಿಸಿದ ನಂತರ ಕೆಆರ್ಎಸ್ ಅಣೆಕಟ್ಟು ಕೆಳಭಾಗದಲ್ಲಿರುವ ಕಾವೇರಿ ಮಾತೆ ವಿಗ್ರಹಕ್ಕೆ ಸಿಎಂ ಬೊಮ್ಮಾಯಿ ಪೂಜೆ ಸಲ್ಲಿಸಿದರು.
6 / 6
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೂ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟು ಬಾಗಿನ ಅರ್ಪಿಸಿದ್ದಾರೆ.