Basavaraj Bommai Birthday: ಸಿಎಂ ಬಸವರಾಜ ಬೊಮ್ಮಾಯಿಗೆ 62ನೇ ಹುಟ್ಟುಹಬ್ಬದ ಸಂಭ್ರಮ; ಗೋಪೂಜೆ ಮೂಲಕ ಸರಳ ಆಚರಣೆ

Edited By: ಆಯೇಷಾ ಬಾನು

Updated on: Jan 28, 2022 | 12:28 PM

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಿಎಂ ಬವರಾಜ ಬೊಮ್ಮಾಯಿ 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಇಂದಿಗೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 6 ತಿಂಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಜೀರೋ ಟ್ರಾಫಿಕ್ ವ್ಯವಸ್ಥೆ ತ್ಯಜಿಸಿ, ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಹೂ ಗುಚ್ಚ ಬೇಡ ಕನ್ನಡ ಪುಸ್ತಕ ನೀಡಿ ಎಂಬ ಆದೇಶದಿಂದ ಜನಮನ ಗೆದ್ದಿರುವ ಸಿಎಂ ಬೊಮ್ಮಾಯಿ ಇಂದು ಆರ್ಟಿ ನಗರದ ತಮ್ಮ ನಿವಾಸದಲ್ಲಿ ಗೋಪೂಜೆ ಮಾಡುವ ಮೂಲಕ ಸರಳ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

1 / 6
ತಮ್ಮ ಹುಟ್ಟುಹಬ್ಬ ಹಿನ್ನೆಲೆ ಸಿಎಂ ಬೊಮ್ಮಾಯಿ ಆರ್ಟಿ ನಗರದ ನಿವಾಸದಲ್ಲಿ ಕುಟುಂಬ ಸದಸ್ಯರ ಜೊತೆಯಲ್ಲಿ ಗೋಪೂಜೆ ಮಾಡಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ತಮ್ಮ ಹುಟ್ಟುಹಬ್ಬ ಹಿನ್ನೆಲೆ ಸಿಎಂ ಬೊಮ್ಮಾಯಿ ಆರ್ಟಿ ನಗರದ ನಿವಾಸದಲ್ಲಿ ಕುಟುಂಬ ಸದಸ್ಯರ ಜೊತೆಯಲ್ಲಿ ಗೋಪೂಜೆ ಮಾಡಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

2 / 6

ಯಾವುದೇ ರೀತಿಯ ಬಿಗ್ ಸೆಲೆಬ್ರೇಷನ್ ಇಲ್ಲದೆ ಸಾಂಪ್ರದಾಯಿಕವಾಗಿ ಗೋಪೂಜೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಬೊಮ್ಮಾಯಿ

3 / 6

ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋ ಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ.

4 / 6

ಗೋ ಮಾತೆಗೆ ಪೂಜೆ ಸಲ್ಲಿಸಿ ಅದಕ್ಕೆ ಬೆಲ್ಲ ತಿನ್ನಿಸುತ್ತಿರುವ ಸಿಎಂ ಬೊಮ್ಮಾಯಿ, ಚಿತ್ರದಲ್ಲಿ ಸಿಎಂ ಬೊಮ್ಮಾಯಿ ಅವರ ಪತ್ನಿ ಹಾಗೂ ಕುಟುಂಬಸ್ಥರಿದ್ದಾರೆ.

5 / 6

ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೋತ್ಥಾನ ಗೋಶಾಲೆಯ 11 ಹಸುಗಳನ್ನು ಆಜೀವನ ದತ್ತು ಸ್ವೀಕಾರ ಮಾಡಿ, ಗೋಮಾತೆಯ ಸೇವೆಯ ಪವಿತ್ರಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕುಟುಂಬದ ಸದಸ್ಯರೊಂದಿಗೆ ಗೋಪೂಜೆ ನೆರವೇರಿಸಿದ ಸಿಎಂ

6 / 6

ಗೋ ಮಾತೆ ಹೊಂದಿಗೆ ಬೊಮ್ಮಾಯಿ ದಂಪತಿ

Published On - 12:26 pm, Fri, 28 January 22

TV9 Web

TV9 Kannada

Read More
Loading...
Unable to load recommendations.
Follow Us