Coffee: ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸುವುದು ಹೇಗೆ?
ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ನಿಮ್ಮ ಕಾಫಿಯನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಕೆಲವು ಸಲಹೆಗಳು ಇಲ್ಲಿವೆ. ಈ ರೀತಿ ಮಾಡಿದರೆ ಕಾಫಿಯಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಅದಕ್ಕಾಗಿ 8 ಟಿಪ್ಸ್ ಇಲ್ಲಿವೆ.
1 / 10
ಕಾಫಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ನಿಮ್ಮ ಕಾಫಿಯಿಂದ ನಿಮ್ಮ ಆರೋಗ್ಯಕ್ಕೆ ಇನ್ನಷ್ಟು ಉಪಯೋಗಗಳು ಆಗಬೇಕೆಂದರೆ ಕಾಫಿಯ ಸೇವನೆಯಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇಲ್ಲವಾದರೆ ಕಾಫಿಯಿಂದ ಅಡ್ಡಪರಿಣಾಮಗಳು ಉಂಟಾಗಬಹುದು.
2 / 10
ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ನಿಮ್ಮ ಕಾಫಿಯನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಕೆಲವು ಸಲಹೆಗಳು ಇಲ್ಲಿವೆ. ಈ ರೀತಿ ಮಾಡಿದರೆ ಕಾಫಿಯಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಅದಕ್ಕಾಗಿ 8 ಟಿಪ್ಸ್ ಇಲ್ಲಿವೆ.
3 / 10
ಮಧ್ಯಾಹ್ನ 2 ಗಂಟೆಯ ನಂತರ ಕೆಫೀನ್ ಸೇವಿಸಬೇಡಿ. ಕೆಫೀನ್ ಒಂದು ಉತ್ತೇಜಕವಾಗಿದೆ. ಇದು ಕಾಫಿ ಜನಪ್ರಿಯವಾಗಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಆದರೆ ನೀವು ತಡವಾಗಿ ಕಾಫಿ ಕುಡಿದರೆ ಅದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಹೀಗಾಗಿ, ಮಧ್ಯಾಹ್ನ 2-3 ಗಂಟೆಯ ನಂತರ ಕಾಫಿಯನ್ನು ಕುಡಿಯದಿರುವುದು ಉತ್ತಮ.
4 / 10
ನಿಮ್ಮ ಕಾಫಿಗೆ ಸಕ್ಕರೆ ಹಾಕಿಕೊಂಡು ಕುಡಿಯಬೇಡಿ. ಕಾಫಿ ಆರೋಗ್ಯಕರವಾಗಿದ್ದರೂ ಕೆಲವೊಮ್ಮೆ ಅದು ಹಾನಿಕಾರಕವೂ ಆಗಬಹುದು. ಕೆಲವರು ಕಾಫಿಗೆ ವಿಪರೀತ ಸಕ್ಕರೆ ಹಾಕಿಕೊಂಡು ಕುಡಿಯುತ್ತಾರೆ. ಸಕ್ಕರೆ ಸೇವಿಸಿದರೆ ಸ್ಥೂಲಕಾಯತೆ ಮತ್ತು ಮಧುಮೇಹದಂತಹ ಎಲ್ಲಾ ರೀತಿಯ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸಕ್ಕರೆ ಹಾಕದೆ ಕಾಫಿ ಕುಡಿಯಿರಿ.
5 / 10
ಗುಣಮಟ್ಟದ ಬ್ರ್ಯಾಂಡ್ ಕಾಫಿ ಪುಡಿಯನ್ನು ಆಯ್ಕೆ ಮಾಡಿಕೊಳ್ಳಿ. ಕಾಫಿಯ ಗುಣಮಟ್ಟವು ಅದರ ಸಂಸ್ಕರಣಾ ವಿಧಾನ ಮತ್ತು ಕಾಫಿ ಬೀಜಗಳನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದರ ಆಧಾರದ ಮೇಲೆ ಬದಲಾಗುತ್ತದೆ. ಹೀಗಾಗಿ, ಸಾವಯವ ಕಾಫಿ ಬೀಜಗಳನ್ನು ಖರೀದಿಸುವುದು ಉತ್ತಮ.
6 / 10
ಅತಿಯಾಗಿ ಕಾಫಿ ಕುಡಿಯಬೇಡಿ. ಮಿತಿಮೀರಿದ ಕೆಫೀನ್ ಸೇವನೆಯು ವಿವಿಧ ಪ್ರತಿಕೂಲ ಅಡ್ಡ ಪರಿಣಾಮಗಳನ್ನು ಬೀರಬಹುದು. ಹಿತಮಿತವಾಗಿ ಅಂದರೆ ದಿನಕ್ಕೆ 2 ಕಪ್ ಮಾತ್ರ ಕಾಫಿ ಸೇವಿಸಿ.
7 / 10
ನಿಮ್ಮ ಕಾಫಿಗೆ ಸ್ವಲ್ಪ ದಾಲ್ಚಿನ್ನಿ ಸೇರಿಸಿ ಕುಡಿದರೆ ಇನ್ನಷ್ಟು ಆರೋಗ್ಯಕರವಾಗಿರುತ್ತದೆ. ದಾಲ್ಚಿನ್ನಿ ಒಂದು ಟೇಸ್ಟಿ ಮಸಾಲೆಯಾಗಿದ್ದು ಅದು ಕಾಫಿಯ ಪರಿಮಳದೊಂದಿಗೆ ವಿಶೇಷವಾಗಿ ಚೆನ್ನಾಗಿ ಮಿಶ್ರಣವಾಗುತ್ತದೆ. ದಾಲ್ಚಿನ್ನಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ.
8 / 10
ಕಡಿಮೆ ಕೊಬ್ಬಿನ ಮತ್ತು ಕೃತಕ ಕ್ರೀಮರ್‌ಗಳನ್ನು ಬಳಸಬೇಡಿ. ಸಂಪೂರ್ಣ ನೈಸರ್ಗಿಕ ಆಹಾರಗಳು ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಕ್ರೀಮರ್ ಬದಲಿಗೆ ನಿಮ್ಮ ಕಾಫಿಗೆ ಸ್ವಲ್ಪ ಕೊಬ್ಬಿನ ಕೆನೆ ಸೇರಿಸಬಹುದು.
9 / 10
ನಿಮ್ಮ ಕಾಫಿಗೆ ಸ್ವಲ್ಪ ಕೋಕೋ ಸೇರಿಸಿ ಕುಡಿಯಿರಿ. ಕೋಕೋವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ಸುವಾಸನೆಗಾಗಿ ನಿಮ್ಮ ಕಾಫಿಗೆ ಕೊಕೊ ಪುಡಿಯನ್ನು ಸೇರಿಸಲು ಪ್ರಯತ್ನಿಸಿ.
10 / 10
ಪೇಪರ್ ಫಿಲ್ಟರ್ ಬಳಸಿ ನಿಮ್ಮ ಕಾಫಿಯನ್ನು ತಯಾರಿಸಿ. ಕುದಿಸಿದ ಕಾಫಿಯು ಕೆಫೆಸ್ಟೋಲ್ ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಡೈಟರ್ಪೀನ್ ಆಗಿದೆ. ಹೀಗಾಗಿ, ಪೇಪರ್ ಫಿಲ್ಟರ್ ಅನ್ನು ಮಾತ್ರ ಬಳಸಿ.