Couple: ಗಂಡ-ಹೆಂಡತಿ ಇಬ್ಬರೂ ಆ ವಿಷಯದಲ್ಲಿ ವೀಕ್ ಆದಿರಾ? ಈ ಐದಾರು ಪದಾರ್ಥ ತೆಗೆದುಕೊಂಡು ವೃದ್ಧಿಸಿಕೊಳ್ಳಬಹುದು ನೋಡಿ
ಜನ ಇತ್ತೀಚೆಗೆ ನಾನಾ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಪುರುಷರು, ಮಹಿಳೆಯರು ಒಳಗೊಂಡಿರುವ (ಲಿಬಿಡೋ-ಪ್ರೇರಿತ) ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದಾಗ್ಯೂ ಅಂತಹವರು ನೈಸರ್ಗಿಕ ಕಾಮೋದ್ದೀಪನಗಳನ್ನು ಪ್ರಯತ್ನಿಸುವ ಮೂಲಕ ಬಯಕೆಗಳನ್ನು ಹೆಚ್ಚಿಸಿಕೊಳ್ಳಬಹುದು.
1 / 8
ಜನ ಇತ್ತೀಚೆಗೆ ನಾನಾ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಪುರುಷರು, ಮಹಿಳೆಯರು ಒಳಗೊಂಡಿರುವ (ಲಿಬಿಡೋ-ಪ್ರೇರಿತ) ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದಾಗ್ಯೂ ಅಂತಹವರು ನೈಸರ್ಗಿಕ ಕಾಮೋದ್ದೀಪನಗಳನ್ನು ಪ್ರಯತ್ನಿಸುವ ಮೂಲಕ ಬಯಕೆಗಳನ್ನು ಹೆಚ್ಚಿಸಿಕೊಳ್ಳಬಹುದು. ನೈಸರ್ಗಿಕವಾದ ಕಾಮೋದ್ದೀಪನಗಳನ್ನು ಪ್ರಯತ್ನಿಸುವುದರ ಮೂಲಕ ನಿಮ್ಮ ಬಯಕೆಗಳನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಹಲವು ಸಮಸ್ಯೆಗಳಿಂದ ಹೊರಬರಬಹುದು.
2 / 8
ಆಹಾರದಷ್ಟೇ ಪ್ರಧಾನ ಲೈಂಗಿಕ ಕಾಮ ತೃಷೆ. ಇದು ಎಲ್ಲ ಜೀವಿಗಳಲ್ಲೂ ಅತ್ಯಂತ ಪ್ರಮುಖವಾದವು. ಇವು ಮಹಿಳೆಯರು, ಪುರುಷರಲ್ಲಿ ಕಾಮೋದ್ದೀಪನ, ಬಯಕೆಗಳನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಗುರುತಿಸುತ್ತಿದ್ದಾರೆ.
3 / 8
ಲಿಬಿಡೋ-ಬೂಸ್ಟಿಂಗ್ ವೈಜ್ಞಾನಿಕವಾಗಿ ಸಾಕ್ಷ್ಯಗಳೊಂದಿಗೆ ನಿರೂಪಿತವಾದ ಕೆಲವು ಪದಾರ್ಥಗಳು ಅಡುಗೆಮನೆಯಲ್ಲಿಯೇ ಇವೆ.. ಈ ಸಮಸ್ಯೆಯಿಂದ ಬಳಲುತ್ತಿರುವವರು ಅಸಡ್ಡೆ/ ಆತಂಕ ಭಯ ಪಡಬೇಕಾದ ಅಗತ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ, ಕೆಲವು ಪದಾರ್ಥಗಳು ಪಾನೀಯಗಳನ್ನು ತೆಗೆದುಕೊಳ್ಳುವುದರಿಂದ ಸಾಮರ್ಥ್ಯವು ಹೆಚ್ಚಿದೆ ಎಂದು ತಜ್ಞರು ಸೂಚಿಸುತ್ತಾರೆ. ಅವು ಯಾವುವು ತಿಳಿದುಕೊಳ್ಳೋಣ..
4 / 8
ಮೆಂತ್ಯ: ಮೆಂತ್ಯೆ ಕಾಳು ಯಾವಾಗಿನಿಂದಲೋ ನಮ್ಮ ದೇಶೀ ಆಹಾರದಲ್ಲಿ ಪ್ರಧಾನ ಸ್ಥಾನ ಪಡೆದಿವೆ. ಆಯುರ್ವೇದದಲ್ಲಿ ಇವುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಆಂಟಿ ಇನ್ಫ್ಲಮೆಟರಿ, ಲಿಬಿಡೋ-ಬೂಸ್ಟಿಂಗ್‌ಗಾಗಿ ಉಪಯುಕ್ತವಾಗಿದೆ.. US ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್, ಕೊರಿಯನ್ ಜರ್ನಲ್ ಆಫ್ ಫುಡ್ ಸೈನ್ಸ್ ಮತ್ತು ತಂತ್ರಜ್ಞಾನದ ಅಧ್ಯಯನಗಳಿಂದ ತಿಳಿದುಬಂದಿದೆ. ಮೆಂತ್ಯೆ ಕಾಳು ಸೆಕ್ಸ್ ಹಾರ್ಮೋನುಗಳು ಈಸ್ಟ್ರೋಜೆನ್, ಟೆಸ್ಟೋರಾನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದೆ.
5 / 8
ಪಿಸ್ತಾ ಬೀಜಗಳು: ಪಿಸ್ತಾ ಬೀಜಗಳಲ್ಲಿ ಹಲವು ಪೌಷ್ಟಿಕಾಂಶಗಳು ಇವೆ. ಇದರಲ್ಲಿ ಮುಖ್ಯವಾಗಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿವೆ. ಪಿಸ್ತಾ ಬೀಜಗಳು ರಕ್ತದೊತ್ತಡವನ್ನು ಕಡಿಮೆಗೊಳಿಸುವುದರ ಜೊತೆಗೆ ಹೃದಯ ತೊಂದರೆ ಅಪಾಯದಿಂದ ಕಾಪಾಡುತ್ತದೆ. ಹೃದಯ ಸ್ತಂಭನದಿಂದ ಬಳಲುತ್ತಿರುವವರು ಸುಧಾರಣೆಗಾಗಿ ಪಿಸ್ತಾ ತಿನ್ನಬಹುದು ಎಂದು ಡಾಕ್ಟರುಗಳು ಸೂಚಿಸುತ್ತಾರೆ. ಪಿಸ್ತಾ ಡಯಟ್, ಪಿಸ್ತಾ ನೀರು ಲೈಂಗಿಕ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂಬುದು ನಿರೂಪಿತವಾಗಿದೆ.
6 / 8
ದಾಳಿಂಬೆ: ದಾಳಿಂಬೆ ಹಣ್ಣಿನಲ್ಲಿ ಹಲವು ಪೌಷ್ಟಿಕಾಂಶಗಳು ಇವೆ. ದಾಳಿಂಬೆ ತಿನ್ನುವುದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಬಹುದು. ದಾಳಿಂಬೆ ಹಣ್ಣು ತಿನ್ನುವುದರಿಂದ ಸಂತಾನೋತ್ಪತ್ತಿ ಸಮೃದ್ಧಿಗೆ ನೆರವಾಗುತ್ತದೆ. ಎಡಿನ್‌ಬರ್ಗ್‌ನಲ್ಲಿರುವ ಕ್ವೀನ್ ಮಾರ್ಗರೆಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ದಾಳಿಂಬೆ ಜ್ಯೂಸ್ ಕ್ರಮಬದ್ಧವಾಗಿ ತೆಗೆದುಕೊಳ್ಳುವುದರಿಂದ ಒತ್ತಡದ ಹಾರ್ಮೋನುಗಳಾದ ಕಾರ್ಟಿಸಾಲ್ ಕಡಿಮೆಯಾಗುವುದು ಅಧ್ಯಯಯನದಿಂದ ತಿಳಿದುಬಂದಿದೆ. ಒತ್ತಡದ ಹಾರ್ಮೋನುಗಳ ಪ್ರಭಾವವನ್ನು ಕಡಿಮೆಗೊಳಿಸುವುದರ ಜೊತೆ ಜೊತೆಗೆ ಅದು ಲಿಬಿಡೋ-ಬೂಸ್ಟಿಂಗ್ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಎಂದು ನಿರೂಪಿತವಾಗಿದೆ.
7 / 8
ಕೇಸರಿ ಹೂ: ಕೇಸರಿ ಹೂವನ್ನು ಹಾಲು ಮತ್ತು ಕೆಲ ಸಿಹಿ ಪದಾರ್ಥಗಳಲ್ಲಿ ಸೇರಿಸಿಕೊಂಡು ಕುಡಿಯುತ್ತಾರೆ. ಇದು ಸುವಾಸನೆ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಕುಂಕುಮ ಹೂವು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಒತ್ತಡ, ಆತಂಕ ಸಹ ಕಡಿಮೆ ಮಾಡುತ್ತದೆ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಎರಡು ಅಧ್ಯಯನಗಳಲ್ಲಿ ನಾಲ್ಕು ವಾರಗಳವರೆಗೆ ಪ್ರತಿದಿನ 30 ಮಿ.ಗ್ರಾಂ. ಕೇಸರಿ ಹೂ ತಿನ್ನುವ ಪುರುಷರು ಲೈಂಗಿಕ ಸಾಮರ್ಥ್ಯವನ್ನು ಸುಧಾರಿಸಿಕೊಲ್ಳುವಲ್ಲಿ ಯಶಸ್ಸು ಕಾಣುತ್ತಾರೆ ಎಂಬುದು ಸದೃಢಪಟ್ಟಿದೆ.
8 / 8
ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣನ್ನು ನೈಸರ್ಗಿಕ ವಯಾಗ್ರಾ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಬೇಸಿಗೆಯಲ್ಲಿ ಅಧಿಕವಾಗಿ ದೊರೆಯುವ ಕಲ್ಲಂಗಡಿ ಹಣ್ಣು ಸೆವನೆಯೊಂದಿಗೆ ಲೈಂಗಿಕ ಶಕ್ತಿಯು ಹೆಚ್ಚಾಗುತ್ತದೆ. US ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ ಕಲ್ಲಂಗಡಿ ಹಣ್ಣು ಎಂಬುದು ಸಿಟ್ರುಲ್ಲೈನ್ ಅಥವಾ ಅಮೈನೋ ಆಮ್ಲಗಳ ಪರಿಣಾಮಕಾರಿ ಮೂಲ. ಫೈಟೋನ್ಯೂಟ್ರಿಯಂಟ್ ಸಿಟ್ರುಲಿನ್ ರಕ್ತ ನಾಳಗಳನ್ನು ಸಡಿಲಗೊಳಿಸುತ್ತದೆ ಎಂಬುದರ ವಿವರವೂ ಇದರಲ್ಲಿ ಲಭ್ಯವಿದೆ. ಇದರಿಂದ ಲೈಂಗಿಕ ಜೀವನ ಆನಂದಮಯವಾಗಿ ಬದಲಾಗುತ್ತದೆ. ಲೈಂಗಿಕ ಶಕ್ತಿಗಾಗಿ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಸಹ ತಿನ್ನಬಹುದು ಎನ್ನುತ್ತಾರೆ.