ಒಂದೇ ಒಂದು ರನ್ ನೀಡದೆ 7 ವಿಕೆಟ್; ವಿಶ್ವ ದಾಖಲೆ ಬರೆದ 17 ವರ್ಷದ ಬೌಲರ್..!
World Record: 17ರ ಹರೆಯದ ರೋಹ್ಮಾಲಿಯಾ 3.2 ಓವರ್ ಬೌಲ್ ಮಾಡಿ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಕ್ರಿಕೆಟ್ನಲ್ಲಿ ಒಬ್ಬ ಬೌಲರ್ ಏಳು ವಿಕೆಟ್ ಕಬಳಿಸುವುದು ಸಾಮಾನ್ಯ. ಆದರೆ ಒಂದೇ ಒಂದು ರನ್ ಬಿಟ್ಟುಕೊಡದೆ ಈ ಸಾಧನೆ ಮಾಡಿರುವುದು ಕ್ರಿಕೆಟ್ನಲ್ಲಿ ಅಪರೂಪದ ಕ್ಷಣವಾಗಿದೆ.
1 / 5
ಬುಧವಾರ ನಡೆದ ಇಂಡೋನೇಷ್ಯಾ ಮತ್ತು ಮಂಗೋಲಿಯಾ ಮಹಿಳಾ ತಂಡಗಳ ನಡುವೆ ನಡೆದ 5ನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವಿಶ್ವದಾಖಲೆ ಸೃಷ್ಟಿಯಾಗಿದೆ. ಇಂಡೋನೇಷ್ಯಾದ ಬೌಲರ್ ರೊಹ್ಮಾಲಿಯಾ ಇತಿಹಾಸ ಸೃಷ್ಟಿಸಿದ್ದಾರೆ.
2 / 5
17ರ ಹರೆಯದ ರೋಹ್ಮಾಲಿಯಾ 3.2 ಓವರ್ ಬೌಲ್ ಮಾಡಿ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಕ್ರಿಕೆಟ್ನಲ್ಲಿ ಒಬ್ಬ ಬೌಲರ್ ಏಳು ವಿಕೆಟ್ ಕಬಳಿಸುವುದು ಸಾಮಾನ್ಯ. ಆದರೆ ಒಂದೇ ಒಂದು ರನ್ ಬಿಟ್ಟುಕೊಡದೆ ಈ ಸಾಧನೆ ಮಾಡಿರುವುದು ಕ್ರಿಕೆಟ್ನಲ್ಲಿ ಅಪರೂಪದ ಕ್ಷಣವಾಗಿದೆ.
3 / 5
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆಯನ್ನು ಕ್ರಿಕೆಟ್ ಶಿಶು ಇಂಡೋನೇಷ್ಯಾದ ಬೌಲರ್ ಮಾಡಿರುವುದು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ದಿಗ್ಗಜ ಆಟಗಾರರಿಗೂ ಸಾಧ್ಯವಾಗದ ಈ ಕೆಲಸವನ್ನು ಇಂಡೋನೇಷ್ಯಾದ ರೋಹ್ಮಾಲಿಯಾ ಮಾಡಿದ್ದಾರೆ.
4 / 5
ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ತಂಡದ ನಂದಾ ಸಕಾರಿ (44 ಎಸೆತಗಳಲ್ಲಿ 61) ಅದ್ಭುತ ಬ್ಯಾಟಿಂಗ್ ನಡೆಸಿದರು.
5 / 5
ಆ ಬಳಿಕ ಚೇಸಿಂಗ್ ಆರಂಭಿಸಿದ ಮಂಗೋಲಿಯಾ ತಂಡವನ್ನು ರೊಹ್ಮಾಲಿಯಾ ಕಟ್ಟಿಹಾಕಿದರು. ಅವರ ದಾಳಿಗೆ ನಲುಗಿದ ಎದುರಾಳಿ ತಂಡದ ಒಬ್ಬ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. ತಂಡದ ಪರ ಸೆಂಡುರೆನ್ (7) ಅಧಿಕ ಸ್ಕೋರರ್ ಎನಿಸಿಕೊಂಡರು. ಬೌಲಿಂಗ್ನಲ್ಲಿ ಮಿಂಚಿದ ರೋಹ್ಮಾಲಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.