
ವಿಜಯ್ ಹಜಾರೆ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಭಾನುವಾರದಿಂದ ಶುರುವಾಗಲಿದೆ. ಅದರಂತೆ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡವು ರಾಜಸ್ಥಾನ್ ವಿರುದ್ದ ಆಡಲಿದೆ. ಆದರೆ ಈ ಪಂದ್ಯಕ್ಕೂ ಕರ್ನಾಟಕ ತಂಡಕ್ಕೆ ಮೂವರು ಸ್ಟಾರ್ ಆಟಗಾರರು ಸೇರ್ಪಡೆಯಾಗಿದ್ದಾರೆ.

ಹೌದು, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನವೇ ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಹಾಗೂ ಪ್ರಸಿದ್ಧ್ ಕೃಷ್ಣ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ.

ಈ ಹಿಂದೆ ಭಾರತ ಎ ತಂಡದಲ್ಲಿದ್ದ ಈ ಮೂವರು ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಿಂದ ಹಿಂತಿರುಗಿದ್ದು, ಹೀಗಾಗಿ ಈ ಮೂವರು ತಂಡವನ್ನು ಸೇರಿಸಿಕೊಂಡಿದ್ದಾರೆ. ಹೀಗಾಗಿ ರಾಜಸ್ಥಾನ್ ವಿರುದ್ದದ ಪಂದ್ಯದಲ್ಲಿ ಈ ಮೂವರು ಕಣಕ್ಕಿಳಿಯುವುದು ಬಹುತೇಕ ಖಚಿತ.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಾಲ್ ವಿರುದ್ದ ಸೋತಿದ್ದ ಕರ್ನಾಟಕ ತಂಡವು ಇದೀಗ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್, ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಹಾಗೂ ವೇಗಿ ಪ್ರಸಿದ್ಧ್ ಕೃಷ್ಣರ ಆಗಮನದೊಂದಿಗೆ ನಿರ್ಣಾಯಕ ಹಂತದಲ್ಲಿ ಮತ್ತಷ್ಟು ಬಲಿಷ್ಠವಾಗಿದೆ.

ಕರ್ನಾಟಕ ತಂಡ ಹೀಗಿದೆ: ಮನೀಷ್ ಪಾಂಡೆ (ನಾಯಕ) , ರೋಹನ್ ಕದಮ್ , ರವಿಕುಮಾರ್ ಸಮರ್ಥ್ , ಕರುಣ್ ನಾಯರ್ , ಕೆ ಸಿದ್ಧಾರ್ಥ್ , ಅಭಿನವ್ ಮನೋಹರ್ , ಡಿ ನಿಶ್ಚಲ್ , ಶರತ್ ಬಿ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಜಗದೀಶ್ ಸುಚಿತ್ , ಶ್ರೇಯಸ್ ಗೋಪಾಲ್ , ಕೆಸಿ ಕಾರ್ಯಪ್ಪ , ರಿತೇಶ್ ಭಟ್ಕಳ್ , ಪ್ರವೀಣ್ ದುಬೆ , ವಿದ್ಯಾಧರ್ ಪಾಟೀಲ್ , ವಿ ಕೌಶಿಕ್ , ಪ್ರತೀಕ್ ಜೈನ್ , ದರ್ಶನ್ ಎಂಬಿ , ವಿ ವೈಶಾಖ್ , ವಿ ಮುರಳೀಧರ್. ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಹಾಗೂ ಪ್ರಸಿದ್ಧ್ ಕೃಷ್ಣ.