ಟೀಮ್ ಇಂಡಿಯಾ ಪರ ಸತತ 4 ಸಿಕ್ಸ್ ಸಿಡಿಸಿದ್ದು ಮೂವರು ಬ್ಯಾಟರ್ಗಳು ಮಾತ್ರ..!
TV9 Web | Updated By: ಝಾಹಿರ್ ಯೂಸುಫ್
Updated on:
Sep 25, 2023 | 3:28 PM
Team India: ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 72 ರನ್ ಬಾರಿಸಿದ್ದರು. ಈ 6 ಸಿಕ್ಸ್ಗಳಲ್ಲಿ 4 ಸಿಕ್ಸರ್ಗಳು ಒಂದೇ ಓವರ್ನಲ್ಲಿ ಮೂಡಿಬಂದಿದ್ದು ವಿಶೇಷ.
1 / 6
ಇಂದೋರ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 99 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ (105) ಹಾಗೂ ಶುಭ್ಮನ್ ಗಿಲ್ (104) ಶತಕ ಬಾರಿಸಿದರೆ, ಕೆಎಲ್ ರಾಹುಲ್ (52) ಹಾಗೂ ಸೂರ್ಯಕುಮಾರ್ ಯಾದವ್ (72) ಅರ್ಧಶತಕ ಸಿಡಿಸಿ ಮಿಂಚಿದ್ದರು.
2 / 6
ಅದರಲ್ಲೂ ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 72 ರನ್ ಬಾರಿಸಿದ್ದರು. ಈ 6 ಸಿಕ್ಸ್ಗಳಲ್ಲಿ 4 ಸಿಕ್ಸರ್ಗಳು ಒಂದೇ ಓವರ್ನಲ್ಲಿ ಮೂಡಿಬಂದಿದ್ದು ವಿಶೇಷ.
3 / 6
ಅಂದರೆ ಕ್ಯಾಮರೋನ್ ಗ್ರೀನ್ ಎಸೆದ 44ನೇ ಓವರ್ನ ಮೊದಲ 4 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಕ್ ಟು ಬ್ಯಾಕ್ ಸಿಕ್ಸ್ಗಳನ್ನು ಸಿಡಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಒಂದೇ ಓವರ್ನಲ್ಲಿ ಸತತ 4 ಸಿಕ್ಸ್ಗಳನ್ನು ಬಾರಿಸಿದ 3ನೇ ಭಾರತೀಯ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಸಾಧನೆ ಮಾಡಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
4 / 6
1- ಝಹೀರ್ ಖಾನ್: ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರ ಒಂದೇ ಓವರ್ನಲ್ಲಿ ಸತತ 4 ಸಿಕ್ಸ್ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಝಹೀರ್ ಖಾನ್. 2000 ರಲ್ಲಿ ಝಿಂಬಾಬ್ವೆಯ ಹೆನ್ರಿ ಒಲೊಂಗಾ ಓವರ್ನಲ್ಲಿ ಝಹೀರ್ ಖಾನ್ ಬ್ಯಾಕ್ ಟು ಬ್ಯಾಕ್ 4 ಸಿಕ್ಸರ್ಗಳನ್ನು ಬಾರಿಸಿ ದಾಖಲೆ ಬರೆದಿದ್ದರು.
5 / 6
2- ರೋಹಿತ್ ಶರ್ಮಾ: ಝಹೀರ್ ಖಾನ್ ಬಳಿಕ ಈ ಸಾಧನೆ ಮಾಡಿದ್ದು ರೋಹಿತ್ ಶರ್ಮಾ. 2017 ರಲ್ಲಿ ಶ್ರೀಲಂಕಾದ ಸುರಂಗ ಲಕ್ಮಲ್ ಓವರ್ನಲ್ಲಿ ಹಿಟ್ಮ್ಯಾನ್ ಸತತ 4 ಸಿಕ್ಸ್ಗಳನ್ನು ಸಿಡಿಸಿದ್ದರು.
6 / 6
3- ಸೂರ್ಯಕುಮಾರ್ ಯಾದವ್: 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಎಸೆತಗಳಲ್ಲಿ ಸತತ ಸಿಕ್ಸ್ಗಳನ್ನು ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ.