IPL 2023: RCB, CSK ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿದ 3 ಆಟಗಾರರು ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Jun 01, 2023 | 9:21 PM
IPL 2023 Kannada: ಐಪಿಎಲ್ನ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಸಿಎಸ್ಕೆ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 3ನೇ ಸ್ಥಾನ ಅಲಂಕರಿಸಿದೆ. ಆದರೆ ಆರ್ಸಿಬಿ ತಂಡವು 7ನೇ ಸ್ಥಾನದಲ್ಲಿದೆ.
1 / 6
IPL 2023: ಐಪಿಎಲ್ ಸೀಸನ್ ಸೀಸನ್ 16 ರಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
2 / 6
ಇದರೊಂದಿಗೆ ಐಪಿಎಲ್ನಲ್ಲಿ 5 ಬಾರಿ ಚಾಂಪಿಯನ್ ಆಗಿ ದಾಖಲೆ ಬರೆದಿದ್ದ ಮುಂಬೈ ಇಂಡಿಯನ್ಸ್ ರೆಕಾರ್ಡ್ ಅನ್ನು ಸಿಎಸ್ಕೆ ಸರಿಗಟ್ಟಿದೆ. ಈ ಮೂಲಕ ಬಲಿಷ್ಠ ಎರಡು ತಂಡಗಳು ಟ್ರೋಫಿ ಗೆಲ್ಲುವ ವಿಷಯದಲ್ಲಿ ಸಮಬಲ ಸಾಧಿಸಿದೆ.
3 / 6
ಇತ್ತ ಎರಡು ತಂಡಗಳು 5 ಬಾರಿ ಚಾಂಪಿಯನ್ಸ್ ಆಗಿ ದಾಖಲೆ ಬರೆದಿದ್ದರೆ, ಮತ್ತೊಂದೆಡೆ ಆರ್ಸಿಬಿ ಈ ಬಾರಿ ಕೂಡ ನಿರಾಸೆ ಮೂಡಿಸಿದೆ. ವಿಶೇಷ ಎಂದರೆ ಕಳೆದ 15 ಸೀಸನ್ಗಳಲ್ಲಿ ಈ ಮೂರೂ ತಂಡಗಳ ಪರ ಕೆಲವೇ ಕೆಲವು ಆಟಗಾರರು ಕಣಕ್ಕಿಳಿದಿದ್ದಾರೆ. ಅಂದರೆ ಆರ್ಸಿಬಿ, ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿದ ಮೂರು ಆಟಗಾರರ ಪರಿಚಯ ಇಲ್ಲಿದೆ.
4 / 6
1- ಟಿಮ್ ಸೌಥಿ: ನ್ಯೂಜಿಲೆಂಡ್ ಆಟಗಾರ ಟಿಮ್ ಸೌಥಿ 2011 ರಲ್ಲಿ ಸಿಎಸ್ಕೆ ಪರ ಆಡಿದ್ದರು. ಇದಾದ ಬಳಿಕ 2016 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಇನ್ನು 2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ಪರ ಕೂಡ ಆಡಿದ್ದರು. ಪ್ರಸ್ತುತ ಅವರು ಕೆಕೆಆರ್ ತಂಡದ ಭಾಗವಾಗಿದ್ದಾರೆ.
5 / 6
2- ಪಾರ್ಥೀವ್ ಪಟೇಲ್: 2010 ರಲ್ಲಿ ಸಿಎಸ್ಕೆ ತಂಡದಲ್ಲಿ ಕಾಣಿಸಿಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್, 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಇನ್ನು 2018 ರಲ್ಲಿ ಆರ್ಸಿಬಿ ಪರ ಆಡುವ ಮೂಲಕ ಮೂರು ಪ್ರಮುಖ ಫ್ರಾಂಚೈಸಿಗಳ ಪರ ಆಡಿದ ಪಟ್ಟಿಗೆ ಸೇರ್ಪಡೆಯಾಗಿದ್ದರು.
6 / 6
3- ರಾಬಿನ್ ಉತ್ತಪ್ಪ: 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ರಾಬಿನ್ ಉತ್ತಪ್ಪ, 2010 ರಲ್ಲಿ ಆರ್ಸಿಬಿ ಪರ ಬ್ಯಾಟ್ ಬೀಸಿದ್ದರು. ಇನ್ನು 2022 ರಲ್ಲಿ ಸಿಎಸ್ಕೆ ಕಣಕ್ಕಿಳಿದು ಭರ್ಜರಿ ಪ್ರದರ್ಶನದೊಂದಿಗೆ ಐಪಿಎಲ್ಗೆ ವಿದಾಯ ಹೇಳಿದ್ದರು.