ರೆಕಾರ್ಡ್ಸ್… ರೆಕಾರ್ಡ್ಸ್… ರೆಕಾರ್ಡ್ಸ್… ಕಿಂಗ್ ಕೊಹ್ಲಿ ಮುಂದಿದೆ 4 ರೆಕಾರ್ಡ್ಸ್

|

Updated on: Sep 17, 2024 | 3:08 PM

Virat Kohli Records: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭರ್ಜರಿ ದಾಖಲೆಗಳನ್ನು ನಿರ್ಮಿಸುವ ಅವಕಾಶ ವಿರಾಟ್ ಕೊಹ್ಲಿ ಮುಂದಿದೆ. ಅದರಲ್ಲೂ ಈ ಸರಣಿಯಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​ನಿಂದ 4 ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.

1 / 6
ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಸಾಗಿರುವ ವಿರಾಟ್ ಕೊಹ್ಲಿ (Virat Kohli) ಇದೀಗ ಮೂರು ಹೊಸ ದಾಖಲೆಗಳನ್ನು ಬರೆಯುವ ಹೊಸ್ತಿಲಲ್ಲಿದ್ದಾರೆ. ಆದರೆ ಇವು ಅಂತಿಂಥ ದಾಖಲೆಗಳಲ್ಲ. ಬದಲಾಗಿ ವಿಶ್ವ ದಾಖಲೆಗಳು ಎಂಬುದು ವಿಶೇಷ. ಆ ದಾಖಲೆಗಳಾವುವು ಎಂದು ನೋಡುವುದಾದರೆ...

2 / 6
27 ಸಾವಿರ ರನ್: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 27 ಸಾವಿರ ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಬೇಕಿರುವುದು ಕೇವಲ 58 ರನ್​ಗಳು ಮಾತ್ರ. ಚೆನ್ನೈನಲ್ಲಿ ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 58 ರನ್ ಕಲೆಹಾಕಿದರೆ, ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 27 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಸದ್ಯ ಈ ದಾಖಲೆ ಸಚಿನ್ ತೆಂಡೂಲ್ಕರ್ (623 ಇನಿಂಗ್ಸ್​) ಹೆಸರಿನಲ್ಲಿದೆ. ಇದೀಗ 591 ಇನಿಂಗ್ಸ್​ಗಳಲ್ಲಿ 26942 ರನ್ ಕಲೆಹಾಕಿರುವ ಕೊಹ್ಲಿ ಬ್ಯಾಟ್​ನಿಂದ ಈ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.

3 / 6
12 ಸಾವಿರ ರನ್: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತವರಿನಲ್ಲಿ 12 ಸಾವಿರ ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಕೇವಲ 11 ರನ್​ಗಳ ಅಗತ್ಯತೆಯಿದೆ. ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹನ್ನೊಂದು ಕಲೆಹಾಕಿದರೆ, ಈ ಸಾಧನೆ ಮಾಡಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಸಚಿನ್ ತೆಂಡೂಲ್ಕರ್ (14192), ರಿಕಿ ಪಾಂಟಿಂಗ್ (13117), ಜಾಕ್ಸ್ ಕಾಲಿಸ್ (12305) ಮತ್ತು ಕುಮಾರ ಸಂಗಕ್ಕಾರ (12043) ಮಾತ್ರ ಈ ಸಾಧನೆ ಮಾಡಿದ್ದಾರೆ.

4 / 6
9 ಸಾವಿರ ರನ್: ಟೆಸ್ಟ್ ಕ್ರಿಕೆಟ್​ನಲ್ಲಿ 9 ಸಾವಿರ ರನ್​ ಪೂರೈಸಲು ವಿರಾಟ್ ಕೊಹ್ಲಿ ಕೇವಲ 152 ರನ್​ಗಳನ್ನು ಮಾತ್ರ ಪೂರೈಸಬೇಕಿದೆ. ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 152 ರನ್​ಗಳಿಸಿದರೆ, ಟೆಸ್ಟ್​ನಲ್ಲಿ 9000+ ರನ್​ ಕಲೆಹಾಕಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (15921), ರಾಹುಲ್ ದ್ರಾವಿಡ್ (13288) ಮತ್ತು ಸುನಿಲ್ ಗವಾಸ್ಕರ್ (10122) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

5 / 6
30 ಶತಕಗಳ ದಾಖಲೆ: ಟೆಸ್ಟ್ ಕ್ರಿಕೆಟ್​ನಲ್ಲಿ 30 ಸೆಂಚುರಿ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿರಾಟ್ ಕೊಹ್ಲಿಗೆ ಒಂದು ಶತಕದ ಅವಶ್ಯಕತೆಯಿದೆ. ಈಗಾಗಲೇ 29 ಸೆಂಚುರಿ ಸಿಡಿಸಿರುವ ಕೊಹ್ಲಿ ಬಾಂಗ್ಲಾದೇಶ್ ವಿರುದ್ಧ ಶತಕ ಬಾರಿಸಿದರೆ, 30 ಸೆಂಚುರಿಗಳ ಸಾಧನೆ ಮಾಡಿದ ವಿಶ್ವದ 16ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹಾಗೆಯೇ ಶತಕಗಳ ಸರದಾರರ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್ (29 ಶತಕ) ಅವರನ್ನು ಹಿಂದಿಕ್ಕುವ ಅವಕಾಶ ಕೂಡ ಕಿಂಗ್ ಕೊಹ್ಲಿ ಮುಂದಿದೆ.

6 / 6
ಅದರಂತೆ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್​ನಿಂದ 4 ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು. ಈ ದಾಖಲೆಗಳಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವ ರೆಕಾರ್ಡ್ ನಿರ್ಮಾಣವಾಗಲಿದೆ ಎಂಬುದನ್ನು ಕಾದು ನೋಡೋಣ.