Happy Birthday: ಇಂದು ಟೀಂ ಇಂಡಿಯಾದ 6 ಕ್ರಿಕೆಟಿಗರ ಜನ್ಮದಿನ
Happy Birthday: ಡಿಸೆಂಬರ್ 6 ರಂದು ಭಾರತೀಯ ಕ್ರಿಕೆಟ್ ತಂಡದ ಆರು ಆಟಗಾರರು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಕರುಣ್ ನಾಯರ್, ಆರ್.ಪಿ. ಸಿಂಗ್ ಮತ್ತು ಸುಯೇಶ್ ಪ್ರಭುದೇಸಾಯಿ ಈ ಆಟಗಾರರಲ್ಲಿ ಸೇರಿದ್ದಾರೆ. ಬುಮ್ರಾ ಮತ್ತು ಜಡೇಜಾ ಆಸ್ಟ್ರೇಲಿಯಾದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
1 / 8
ಡಿಸೆಂಬರ್ 6 ರಂದು ಭಾರತೀಯ ಕ್ರಿಕೆಟ್ಗೆ ಬಹಳ ವಿಶೇಷವಾದ ದಿನವಾಗಿದೆ. ಏಕೆಂದರೆ ಈ ದಿನದಂದು ಟೀಂ ಇಂಡಿಯಾದ 6 ಆಟಗಾರರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ 6 ಕ್ರಿಕೆಟಿಗರಲ್ಲಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕರುಣ್ ನಾಯರ್, ಆರ್ಪಿ ಸಿಂಗ್ ಮತ್ತು ಯುವ ಕ್ರಿಕೆಟಿಗ ಸುಯೇಶ್ ಪ್ರಭುದೇಸಾಯಿ ಕೂಡ ಸೇರಿದ್ದಾರೆ.
2 / 8
ಈ ಬಾರಿ ಬುಮ್ರಾ ಅವರ ಹುಟ್ಟುಹಬ್ಬ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿದ್ದು, ಸರ್ ಜಡೇಜಾ ಕೂಡ ಜೊತೆಯಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಇತ್ತ ಐಪಿಎಲ್ ಹರಾಜಿನಲ್ಲಿ 26.75 ಕೋಟಿ ರೂ. ಪಡೆದಿರುವ ಶ್ರೇಯಸ್ ಅಯ್ಯರ್ಗೆ ಈ ಜನ್ಮದಿನ ಬಹಳ ವಿಶೇಷವಾಗಿದ್ದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ ದಾಖಲೆ ಹೊಂದಿರುವ ಕನ್ನಡಿಗ ಕರುಣ್ ನಾಯರ್ ಕೂಡ ಈ ದಿನ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
3 / 8
ಪರ್ತ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ ಜಸ್ಪ್ರೀತ್ ಬುಮ್ರಾ ಈ ಬಾರಿ ಕಾಂಗರೂ ನೆಲದಲ್ಲಿ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ತಂಡದ ನಾಯಕತ್ವವಹಿಸಿದ್ದ ಬುಮ್ರಾ 8 ವಿಕೆಟ್ ಪಡೆದು ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
4 / 8
ಟೀಂ ಇಂಡಿಯಾ ಜೊತೆಗೆ ಆಸ್ಟ್ರೇಲಿಯಾದಲ್ಲಿರುವ ರವೀಂದ್ರ ಜಡೇಜಾ ಕೂಡ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಜಡೇಜಾಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಗುವ ಭರವಸೆಯಲ್ಲಿದ್ದ ಜಡೇಜಾಗೆ ಮತ್ತೆ ನಿರಾಸೆಯಾಗಿದೆ.
5 / 8
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 26.75 ಕೋಟಿ ರೂಪಾಯಿ ಪಡೆದ ಶ್ರೇಯಸ್ ಅಯ್ಯರ್ ಅವರ ಜನ್ಮದಿನವೂ ಕೂಡ ಇಂದೇ ಆಗಿದ್ದು ಅಯ್ಯರ್, ತಮ್ಮ 30ನೇ ಜನ್ಮದಿನವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಅಯ್ಯರ್ ಬ್ಯಾಟ್ ನಿಂದ ಸದ್ದು ಮಾಡುತ್ತಿದ್ದು, ಟೀಂ ಇಂಡಿಯಾದಲ್ಲಿ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.
6 / 8
ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಆರ್‌ಪಿ ಸಿಂಗ್ ಕೂಡ ಡಿಸೆಂಬರ್ 6 ರಂದು ತಮ್ಮ 39ನೇ ಜನ್ಮ ದಿನವನ್ನು ಆಚರಿಸಿಕೊಳ್ಳಲಿದ್ದಾರೆ. 2007ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಆರ್ಪಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.
7 / 8
ಈ ನಾಲ್ವರ ಜೊತೆಗೆ ಕನ್ನಡಿಗ ಕರುಣ್ ನಾಯರ್ ಕೂಡ 34ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಟ್ರಿಪಲ್ ಸೆಂಚುರಿ ಸಿಡಿಸಿದ್ದ ಕರುಣ್ ನಾಯರ್ಗೆ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಮೆಗಾ ಹರಾಜಿನಲ್ಲಿ ಕರುಣ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
8 / 8
ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರೊಂದಿಗೆ ದೇಶೀ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಿರುವ ಸುಯೇಶ್ ಪ್ರಭುದೇಸಾಯಿ ಕೂಡ ಇಂದು ತಮ್ಮ 28ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಸುಯೇಶ್ಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಅವರು ಐಪಿಎಲ್‌ನಲ್ಲಿ ಆರ್ಸಿಬಿ ಪರ ಕೆಲವು ಪಂದ್ಯಗಳನ್ನಾಡಿದ್ದರು.