
ಭಾರತ ಒಂದು ಕ್ರಿಕೆಟ್ ಧರ್ಮ ದೇಶ. ಹಲವಾರು ಜಾತಿ ಧರ್ಮಗಳು ಕೂಡಿರುವ ಭಾರತದಲ್ಲಿ ಕ್ರಿಕೆಟ್ ವಿಚಾರ ಬಂದಾಗ ಮಾತ್ರ ಎಲ್ಲರೂ ಒಗ್ಗಟ್ಟಾಗಿ ಬಿಡುತ್ತಾರೆ. ಇದರಿಂದಲೇ ಏನೋ ಕೇವಲ ಒಂದು ಇನ್ನಿಂಗ್ಸ್ನಲ್ಲಿ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗನಿಗೆ ರಾತ್ರೋರಾತ್ರಿ ಕೋಟ್ಯಾಂತರ ಅಭಿಮಾನಿಗಳು ಹುಟ್ಟಿಕೊಂಡುಬಿಡುತ್ತಾರೆ. ಅದರಲ್ಲಂತೂ ಐಸಿಸಿ ಟೂರ್ನಿಗಳಲ್ಲಿ ಅಥವಾ ಇತರೆ ಟೂರ್ನಿಗಳಲ್ಲಿ ಯಾರೂ ಮರೆಯದಂತಹ ಇನ್ನಿಂಗ್ಸ್ ಆಡುವ ಕ್ರಿಕೆಟಿಗನಿಗೆ ಅಭಿಮಾನಿಗಳು ದೇವರ ಸ್ಥಾನವನ್ನೇ ನೀಡಿಬಿಡುತ್ತಾರೆ. ಇದರೊಂದಿಗೆ ಭಾರತ ಸರ್ಕಾರ ಕೂಡ ಅವರ ಸಾಧನೆಯನ್ನು ನೆನೆದು ಸರ್ಕಾರಿ ನೌಕರಿ ನೀಡಿ ಗೌರವಿಸುತ್ತದೆ. ತಮ್ಮ ಅದ್ಭುತ ಪ್ರದರ್ಶನದಿಂದ ಸರ್ಕಾರಿ ನೌಕರಿ ಪಡೆದ ಟೀಂ ಇಂಡಿಯಾದ 7 ಕ್ರಿಕೆಟಿಗರು ಯಾರು ಎಂಬುದನ್ನು ಈಗ ನೋಡೋಣ

ಕೆಎಲ್ ರಾಹುಲ್ - ಕರ್ನಾಟಕದಲ್ಲಿ ಕ್ರಿಕೆಟ್ ಆರಂಭಿಸಿ, ಈಗ ಟೀಂ ಇಂಡಿಯಾದ ಉಪನಾಯಕನಾಗಿರುವ ಕೆ ಎಲ್ ರಾಹುಲ್, ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಕ್ರಿಕೆಟ್ನಲ್ಲಿ ತೋರಿದ ಪ್ರದರ್ಶನಕ್ಕಾಗಿ ಅವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಂದರೆ ಆರ್‌ಬಿಐನಲ್ಲಿ ಸಹಾಯಕ ವ್ಯವಸ್ಥಾಪಕ ವನ್ನು ನೀಡಲಾಗಿದೆ.

ಯುಜ್ವೇಂದ್ರ ಚಹಲ್ - ತಮ್ಮ ಸ್ಪಿನ್ ಮ್ಯಾಜಿಕ್ನಿಂದ ಎಂತಹ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವ ಸಾಮಥ್ಯ್ರ ಹೊಂದಿರುವ ಚಹಲ್, ಹಲವು ನಿರ್ಣಾಯಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಬ್ಯಾಟರ್ಗಳ ಲೆಕ್ಕ ಚುಪ್ತ ಮಾಡುವ ಚಹಲ್ಗೆ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆ ನೀಡಲಾಗಿದೆ.

ಉಮೇಶ್ ಯಾದವ್- ಟೀಂ ಇಂಡಿಯಾದ ವೇಗದ ಬೌಲರ್ ಆಗಿರುವ ಉಮೇಶ್ ಯಾದವ್ಗೆ, ಕೆಎಲ್ ರಾಹುಲ್ ಅವರಂತೆ ಆರ್‌ಬಿಐನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆ ನೀಡಲಾಗಿದೆ.

ಎಂಎಸ್ ಧೋನಿ- ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಕ್ಕೆ ಗೆಲ್ಲಿಸಿಕೊಟ್ಟಿರುವ ಐಸಿಸಿ ಪ್ರಶಸ್ತಿಗಳನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇಂತಹ ಧೋನಿ, ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದಾರೆ.

ಜೋಗಿಂದರ್ ಶರ್ಮಾ- 2007 ರಲ್ಲಿ ಭಾರತದ T20 ವಿಶ್ವಕಪ್ ವಿಜಯದ ಹೀರೋಗಳಲ್ಲಿ ಒಬ್ಬರಾದ ಜೋಗಿಂದರ್ ಶರ್ಮಾ ಅವರು ಈಗ ಕ್ರಿಕೆಟ್‌ನಿಂದ ದೂರವಿದ್ದು, ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್ - ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.

ಕಪಿಲ್ ದೇವ್- ಭಾರತವನ್ನು ಮೊದಲ ಬಾರಿಗೆ ODI ವಿಶ್ವ ಚಾಂಪಿಯನ್ ಮಾಡಿದ ಕ್ಯಾಪ್ಟನ್ ಕಪಿಲ್ ದೇವ್, ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.