ICC World Cup 2023: ಏಕದಿನ ಕ್ರಿಕೆಟ್​ನ ಏಳು ಅದ್ಭುತ ಆಟಗಾರರು..!

| Updated By: ಝಾಹಿರ್ ಯೂಸುಫ್

Updated on: Sep 30, 2023 | 3:56 PM

ODI World Cup 2023: ಏಕದಿನ ವಿಶ್ವಕಪ್​ ಟೂರ್ನಿಯ ನೇರ ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ ಈ ಬಾರಿಯ ಏಕದಿನ ವಿಶ್ವಕಪ್​ನ 7 ಅದ್ಭುತ ಆಟಗಾರರನ್ನು ಹೆಸರಿಸಿದ್ದಾರೆ. ಈ ಆಟಗಾರರಲ್ಲಿ ಇಬ್ಬರು ಭಾರತೀಯರು ಕಾಣಿಸಿಕೊಂಡಿರುವುದು ವಿಶೇಷ. ಏಕದಿನ ಕ್ರಿಕೆಟ್​ನ ಏಳು ಅದ್ಭುತ ಆಟಗಾರರು ಯಾರೆಲ್ಲಾ ಎಂದು ನೋಡೋಣ...

1 / 9
ಏಕದಿನ ವಿಶ್ವಕಪ್ ಕ್ರಿಕೆಟ್​ ಕ್ರೇಝ್ ಕಾವೇರುತ್ತಿದೆ. ಅಕ್ಟೋಬರ್ 5 ರಿಂದ ಶುರುವಾಗಲಿರುವ 10 ತಂಡಗಳ ನಡುವಣ ಕ್ರಿಕೆಟ್ ಕದನಕ್ಕಾಗಿ ಈಗಾಗಲೇ ಎಲ್ಲಾ ತಂಡಗಳು ಭಾರತಕ್ಕೆ ಬಂದಿಳಿದಿದೆ. ಅಲ್ಲದೆ ಅಭ್ಯಾಸ ಪಂದ್ಯಗಳ ಮೂಲಕ ಪೂರ್ವಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ.

2 / 9
ಇತ್ತ ಈ ಟೂರ್ನಿಯ ನೇರ ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿರುವ 7 ಅದ್ಭುತ ಆಟಗಾರರನ್ನು ಹೆಸರಿಸಿದ್ದಾರೆ. ಈ ಆಟಗಾರರಲ್ಲಿ ಇಬ್ಬರು ಭಾರತೀಯರು ಕಾಣಿಸಿಕೊಂಡಿರುವುದು ವಿಶೇಷ. ಹಾಗಿದ್ರೆ ಏಕದಿನ ಕ್ರಿಕೆಟ್​ನ ಏಳು ಅದ್ಭುತ ಆಟಗಾರರು ಯಾರೆಲ್ಲಾ ಎಂದು ನೋಡೋಣ...

3 / 9
1- ವಿರಾಟ್ ಕೊಹ್ಲಿ (ಭಾರತ): ಟೀಮ್ ಇಂಡಿಯಾದ ಚೇಸಿಂಗ್ ಮಾಸ್ಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಈ ಬಾರಿ ಏಕದಿನ ವಿಶ್ವಕಪ್​ ಗೆದ್ದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಏಕೆಂದರೆ ಅದ್ಭುತ ಫಾರ್ಮ್​ನಲ್ಲಿರುವ ಕೊಹ್ಲಿ ಈಗಾಗಲೇ ಏಕದಿನ ಕ್ರಿಕೆಟ್​ನ ಟಾಪ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಕೊಹ್ಲಿ ಇದುವರೆಗೆ ಏಕದಿನ ಕ್ರಿಕೆಟ್​ನಲ್ಲಿ 57.38 ರ ಸರಾಸರಿಯಲ್ಲಿ ಒಟ್ಟು 13950 ರನ್ ಪೇರಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್​ನಲ್ಲೂ ಕಿಂಗ್ ಕೊಹ್ಲಿ ಕಡೆಯಿಂದ ಅದ್ಭುತ ಪ್ರದರ್ಶನ ನಿರೀಕ್ಷಿಸಬಹುದು.

4 / 9
2- ಬಾಬರ್ ಆಝಂ (ಪಾಕಿಸ್ತಾನ್): ಪಾಕಿಸ್ತಾನ್ ತಂಡವು ನಾಯಕ ಬಾಬರ್ ಆಝಂ ಮೇಲೆ ಹೆಚ್ಚು ಅವಲಂಭಿತವಾಗಿದೆ. ಏಕೆಂದರೆ ಪಾಕ್ ಪರ 108 ಏಕದಿನ ಪಂದ್ಯಗಳನ್ನಾಡಿರುವ ಬಾಬರ್ ಒಟ್ಟು 6069 ರನ್ ಬಾರಿಸಿ ಪ್ರಸ್ತುತ ತಂಡದ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

5 / 9
3- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭ ಸ್ಟೀವ್ ಸ್ಮಿತ್. ಏಕೆಂದರೆ ಆಸೀಸ್ ಪರ 145	ಪಂದ್ಯಗಳನ್ನಾಡಿರುವ ಸ್ಮಿತ್ 5765 ರನ್ ಕಲೆಹಾಕಿದ್ದಾರೆ. ಹೀಗಾಗಿ ಈ ಬಾರಿ ಕೂಡ ಆಸ್ಟ್ರೇಲಿಯಾ ತಂಡ ಸ್ಮಿತ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಅನ್ನು ನೆಚ್ಚಿಕೊಂಡಿರಲಿದೆ.

6 / 9
4- ರೋಹಿತ್ ಶರ್ಮಾ (ಭಾರತ): ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಸಿಡಿಲಬ್ಬರದ ಆರಂಭ ಭಾರತ ತಂಡಕ್ಕೆ ಅತ್ಯವಶ್ಯಕ. ಏಕೆಂದರೆ ಮೊದಲ ಹತ್ತು ಓವರ್​ಗಳಲ್ಲೇ ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಹಿಟ್​ಮ್ಯಾನ್​ಗಿದೆ. ಅಲ್ಲದೆ ಇದುವರೆಗೆ 251 ಏಕದಿನ ಪಂದ್ಯಗಳಿಂದ 11170 ರನ್ ಕಲೆಹಾಕಿ ಒನ್​ಡೇ ಕ್ರಿಕೆಟ್​ನ ಟಾಪ್ ಸ್ಕೋರರ್​ ಎನಿಸಿಕೊಂಡಿದ್ದಾರೆ. ಹೀಗಾಗಿ ಈ ಸಲ ಕೂಡ ರೋಹಿತ್​ ಶರ್ಮಾರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷಿಸಬಹುದು.

7 / 9
5- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್): ನ್ಯೂಝಿಲೆಂಡ್ ತಂಡವು ನಾಯಕ ಕೇನ್ ವಿಲಿಯಮ್ಸನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್​ ಅನ್ನು ನೆಚ್ಚಿಕೊಂಡಿರಲಿದೆ. ಏಕೆಂದರೆ ಕಿವೀಸ್ ಪರ 161 ಏಕದಿನ ಪಂದ್ಯಗಳನ್ನಾಡಿರುವ ವಿಲಿಯಮ್ಸನ್ 6555 ರನ್​ ಪೇರಿಸಿದ್ದಾರೆ. ಅಲ್ಲದೆ ಪ್ರಸ್ತುತ ತಂಡದ ಟಾಪ್ ಸ್ಕೋರರ್ ಆಗಿ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

8 / 9
6- ಜೋ ರೂಟ್ (ಇಂಗ್ಲೆಂಡ್): ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಜೋ ರೂಟ್ ಜವಾಬ್ದಾರಿಯುತ ಆಟಗಾರ. ಯಾವುದೇ ಸಂದರ್ಭದಲ್ಲೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬ್ಯಾಟರ್. ಏಕೆಂದರೆ ಇಂಗ್ಲೆಂಡ್ ಪರ 162 ಏಕದಿನ ಪಂದ್ಯಗಳನ್ನಾಡಿರುವ ರೂಟ್ 7204 ರನ್ ಕಲೆಹಾಕಿದ್ದಾರೆ. ಹಾಗಾಗಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕ ಬಲಿಷ್ಠತೆಯು ರೂಟ್ ಅವರ ಫಾರ್ಮ್ ಮೇಲೆ ಅವಲಂಭಿತವಾಗಿದೆ.

9 / 9
7- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ತಂಡಕ್ಕೆ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಸ್ಪೋಟಕ ಆರಂಭ ಅನಿವಾರ್ಯ ಎಂದರೆ ತಪ್ಪಾಗಲಾರದು. ಏಕೆಂದರೆ ಆಸ್ಟ್ರೇಲಿಯಾ ಪರ 150 ಏಕದಿನ ಪಂದ್ಯಗಳನ್ನಾಡಿರುವ ವಾರ್ನರ್ ಇದುವರೆಗೆ 6633 ರನ್ ಪೇರಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್​ನಲ್ಲೂ ಅನುಭವಿ ಆರಂಭಿಕನ್ನು ಆಸ್ಟ್ರೇಲಿಯಾ ತಂಡ ನೆಚ್ಚಿಕೊಂಡಿದೆ.

Published On - 3:56 pm, Sat, 30 September 23