RCB ಗೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ ABD
Ab De Villiers: ಸೌತ್ ಆಫ್ರಿಕಾ ಪರ 479 ಇನಿಂಗ್ಸ್ ಆಡಿರುವ ಎಬಿ ಡಿವಿಲಿಯರ್ಸ್ 47 ಶತಕ ಹಾಗೂ 108 ಅರ್ಧಶತಕಗಳೊಂದಿಗೆ ಒಟ್ಟು 19864 ರನ್ ಕಲೆಹಾಕಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಇದೀಗ ಎಬಿಡಿಗೆ ಹಾಲ್ ಆಫ್ ಫೇಮ್ ಗೌರವ ಸಂದಿದೆ.
1 / 6
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ. ಈ ಗೌರವದೊಂದಿಗೆ ಎಬಿಡಿಗೆ ಹಾಲ್ ಆಫ್ ಫೇಮ್ ಕ್ಯಾಪ್ ಅನ್ನು ಕಳುಹಿಸಿಕೊಟ್ಟಿದ್ದಾರೆ.
2 / 6
ಈ ಗೌರವ ಸೂಚಕದ ಫೋಟೋವನ್ನು ಎಬಿ ಡಿವಿಲಿಯರ್ಸ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಪ್ರತಿಕ್ರಿಯಿಸಿ ಅಭಿನಂದನೆ ಸಲ್ಲಿಸಿದ್ದರು.
3 / 6
ಅದರಲ್ಲೂ ಆರ್ಸಿಬಿ ಫ್ರಾಂಚೈಸಿಯು, ಗೌರವಗಳು ಬರುತ್ತವೆ ಹೋಗುತ್ತವೆ, ಆದರೆ ಈ ಫ್ರೇಮ್ ಶಾಶ್ವತವಾಗಿ ಉಳಿಯುತ್ತದೆ' ಎಂದು ಬರೆದು ಎಬಿಡಿ ಅವರ ಹಾಲ್ ಅಫ್ ಫೇಮ್ ಗೌರವದ ಫೋಟೋ ಹಂಚಿಕೊಂಡಿದ್ದರು.
4 / 6
ಈ ಫೋಟೋಗೆ ಖುದ್ದು ಎಬಿಡಿ ಪ್ರತಿಕ್ರಿಯಿಸಿದ್ದಾರೆ. ಅದು ಕೂಡ ಕನ್ನಡದಲ್ಲಿ ಎಂಬುದು ವಿಶೇಷ. ಆರ್ಸಿಬಿ ಹಂಚಿಕೊಂಡಿದ್ದ ಫೋಟೋಗೆ ಎಬಿ ಡಿವಿಲಿಯರ್ಸ್ "ಧನ್ಯವಾದಗಳು" ಎಂದು ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿ ಕನ್ನಡಿಗರ ಮನಗೆದ್ದಿದ್ದಾರೆ.
5 / 6
ಇದೀಗ ಆರ್ಸಿಬಿ ತಂಡದ ಮಾಜಿ ಆಟಗಾರನ ಕನ್ನಡ ಪ್ರೀತಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮತ್ತೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವಂತೆ ಅನೇಕ ಅಭಿಮಾನಿಗಳು ಎಬಿಡಿ ಅವರಲ್ಲಿ ಮನವಿ ಮಾಡಿದ್ದಾರೆ.
6 / 6
2011 ರಲ್ಲಿ RCB ಸೇರಿದ್ದ ಎಬಿ ಡಿವಿಲಿಯರ್ಸ್ ಸತತ 11 ಸೀಸನ್ಗಳಲ್ಲಿ ತಂಡದ ಭಾಗವಾಗಿದ್ದರು. ಅಲ್ಲದೆ RCB ಪರ 157 ಪಂದ್ಯಗಳಲ್ಲಿ 4522 ರನ್ ಗಳಿಸಿದ್ದಾರೆ. ಈ ಮೂಲಕ ಆರ್ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ನೀಡಿರುವ ಎಬಿಡಿ ಮುಂಬರುವ ದಿನಗಳಲ್ಲಿ ಆರ್ಸಿಬಿ ತಂಡದ ಸಿಬ್ಬಂದಿ ವರ್ಗಗಳ ಭಾಗವಾದರೂ ಅಚ್ಚರಿಪಡಬೇಕಿಲ್ಲ.