AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಕ್​ಮ್ಯಾನ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಪಾಕ್ ದಾಂಡಿಗ

South Africa vs Pakistan: ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಪಾಕಿಸ್ತಾನ್ ತಂಡ 3-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನಲ್ಲಿ ಪಾಕ್ ಆಟಗಾರ ಅಬ್ದುಲ್ಲಾ ಶಫೀಕ್ ಅವರ ಕೊಡುಗೆ ಶೂನ್ಯ ಎಂಬುದು ವಿಶೇಷ. ಅಂದರೆ ಮೂರು ಪಂದ್ಯಗಳಲ್ಲೂ ಅಬ್ದುಲ್ಲಾ ಸೊನ್ನೆ ಸುತ್ತುವ ಮೂಲಕ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 23, 2024 | 8:54 AM

Share
ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ್ ತಂಡದ ದಾಂಡಿಗ ಅಬ್ದುಲ್ಲಾ ಶಫೀಕ್ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಕೂಡ 53 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡದ ಕಳಪೆ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.

1 / 5
ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅಬ್ದುಲ್ಲಾ ಶಫೀಕ್, ದ್ವಿತೀಯ ಪಂದ್ಯದಲ್ಲೂ ಝೀರೋಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಜೋಹಾನ್ಸ್​ಬರ್ಗ್​​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕಗಿಸೊ ರಬಾಡ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

2 / 5
ಈ ಮೂರು ಸೊನ್ನೆಗಳೊಂದಿಗೆ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಸೊನ್ನೆ ಸುತ್ತಿದ ವಿಶ್ವದ ಮೊದಲ ಬ್ಯಾಟರ್ ಎಂಬ ಅನಗತ್ಯ ದಾಖಲೆಯೊಂದು ಅಬ್ದುಲ್ಲಾ ಶಫೀಕ್ ಪಾಲಾಯಿತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನು ಪಾಕ್ ದಾಂಡಿಗ ತನ್ನದಾಗಿಸಿಕೊಂಡರು.

3 / 5
ಕುತೂಹಲಕಾರಿ ವಿಷಯ ಎಂದರೆ ಟಿ20 ಕ್ರಿಕೆಟ್​ನಲ್ಲಿ ಸತತವಾಗಿ ಅತ್ಯಧಿಕ ಬಾರಿ ಸೊನ್ನೆಗೆ ಔಟಾದ ಬ್ಯಾಟರ್ ಎಂಬ ಕಳಪೆ ದಾಖಲೆ ಕೂಡ ಅಬ್ದುಲ್ಲಾ ಶಫೀಕ್ ಹೆಸರಿನಲ್ಲಿದೆ. 2023 ರಲ್ಲಿ ಸತತವಾಗಿ 4 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಈ ಬೇಡದ ದಾಖಲೆ ಬರೆದಿದ್ದರು.

4 / 5
ಈ ಕಳಪೆ ದಾಖಲೆಯೊಂದಿಗೆ ಇದೀಗ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶೂನ್ಯಕ್ಕೆ ಔಟಾದ ವಿಶ್ವದ ಮೊದಲ ಬ್ಯಾಟರ್ ಎಂಬ ಅಪಖ್ಯಾತಿಯನ್ನು ಅಬ್ದುಲ್ಲಾ ಶಫೀಕ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಇದೀಗ ಪಾಕ್ ಆಟಗಾರನನ್ನು ಡಕ್​ಮ್ಯಾನ್ ಎಂದು ಟ್ರೋಲ್ ಮಾಡಲಾಗುತ್ತಿದೆ.

5 / 5