ಬರೋಬ್ಬರಿ 15 ಸಿಕ್ಸ್​: ಶರವೇಗದ ಸೆಂಚುರಿ ಸಿಡಿಸಿದ ಅಭಿಷೇಕ್

Updated on: Jun 22, 2025 | 1:31 PM

Bundelkhand Bulls vs Jabalpur Royal Lions: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ  ಬುಂದೇಲ್‌ಖಂಡ್ ಬುಲ್ಸ್ ತಂಡವು ಅಭಿಷೇಕ್ ಪಾಠಕ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿದೆ. ಈ ಗುರಿಯನ್ನು ಬೆನ್ನತ್ತಿದ ಜಬಲ್ಪುರ್ ರಾಯಲ್ ಲಯನ್ಸ್ 227 ರನ್​ಗಳಿಸಿ ಆಲೌಟ್ ಆಯಿತು.

1 / 6
ಮಧ್ಯಪ್ರದೇಶ ಟಿ20 ಲೀಗ್​ನಲ್ಲಿ (MPL 2025) ಶರವೇಗದ ಸೆಂಚುರಿ ಸಿಡಿಸಿ ಅಭಿಷೇಕ್ ಪಾಠಕ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗ್ವಾಲಿಯರ್​ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಟೂರ್ನಿಯ 18ನೇ ಪಂದ್ಯದಲ್ಲಿ ಬುಂದೇಲ್‌ಖಂಡ್ ಬುಲ್ಸ್ ಮತ್ತು ಜಬಲ್ಪುರ್ ರಾಯಲ್ ಲಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಮಧ್ಯಪ್ರದೇಶ ಟಿ20 ಲೀಗ್​ನಲ್ಲಿ (MPL 2025) ಶರವೇಗದ ಸೆಂಚುರಿ ಸಿಡಿಸಿ ಅಭಿಷೇಕ್ ಪಾಠಕ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗ್ವಾಲಿಯರ್​ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಟೂರ್ನಿಯ 18ನೇ ಪಂದ್ಯದಲ್ಲಿ ಬುಂದೇಲ್‌ಖಂಡ್ ಬುಲ್ಸ್ ಮತ್ತು ಜಬಲ್ಪುರ್ ರಾಯಲ್ ಲಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

2 / 6

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬುಂದೇಲ್‌ಖಂಡ್ ಬುಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಪಾಠಕ್ ಸ್ಪೋಟಕ ಇನಿಂಗ್ಸ್ ಆಡಿದರು. ಮೊದಲ ಓವರ್​ನಿಂದಲೇ ಹೊಡಿಬಡಿ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಅಭಿಷೇಕ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಕೇವಲ 33 ಎಸೆತಗಳಲ್ಲಿ ಅಭಿಷೇಕ್ ಪಾಠಕ್ ಬ್ಯಾಟ್​ನಿಂದ ಶತಕ ಮೂಡಿಬಂತು. ಇದು ಮಧ್ಯಪ್ರದೇಶ ಟಿ20 ಲೀಗ್​ನಲ್ಲಿ ಮೂಡಿಬಂದ ಅತೀ ವೇಗದ ಶತಕ ಎಂಬುದು ವಿಶೇಷ. ಹಾಗೆಯೇ ಭಾರತೀಯ ಬ್ಯಾಟರ್​ ಕಡೆಯಿಂದ ಮೂಡಿಬಂದ 4ನೇ ವೇಗದ ಟಿ20 ಸೆಂಚುರಿಯಾಗಿದೆ.

3 / 6

ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್​ನ ದಾಖಲೆ ಅಭಿಷೇಕ್ ಶರ್ಮಾ ಹಾಗೂ ಉರ್ವಿಲ್ ಪಟೇಲ್ ಹೆಸರಿನಲ್ಲಿದೆ. ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಪರ ಕಣಕ್ಕಿಳಿದಿದ್ದ ಉರ್ವಿಲ್ ಪಟೇಲ್ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಆ ಬಳಿಕ ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಸರಿಗಟ್ಟಿದ್ದರು.

4 / 6

2024 ರಲ್ಲಿ ನಡೆದ ಸೈಯ್ಯದ್ ಮುಷ್ತಾಲ್ ಅಲಿ ಟೂರ್ನಿಯಲ್ಲಿ ಪಂಜಾಬ್ ಪರ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ, ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ 11 ಸಿಕ್ಸ್​ಗಳೊಂದಿಗೆ ಶತಕ ಪೂರೈಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಉರ್ವಿಲ್ ಪಟೇಲ್ ದಾಖಲೆಯನ್ನು ಅಭಿಷೇಕ್ ಶರ್ಮಾ ಸರಿಗಟ್ಟಿದರು.

5 / 6

ಇದಕ್ಕೂ ಮುನ್ನ 2018 ರಲ್ಲಿ ದೆಹಲಿ ರಾಜ್ಯ ತಂಡದ ಪರ ಕಣಕ್ಕಿಳಿದಿದ್ದ ರಿಷಭ್ ಪಂತ್ 32 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇದೀಗ ಮಧ್ಯಪ್ರದೇಶ ಟಿ20 ಲೀಗ್​ನಲ್ಲಿ 33 ಎಸೆತಗಳಲ್ಲಿ ಶರವೇಗದ ಸೆಂಚುರಿ ಸಿಡಿಸಿ ಅಭಿಷೇಕ್ ಪಾಠಕ್ ಕೂಡ ಈ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ 4ನೇ ಭಾರತೀಯ ಎನಿಸಿಕೊಂಡಿದ್ದಾರೆ.

6 / 6

ಇನ್ನು ಈ ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ ಅಭಿಷೇಕ್ ಪಾಠಕ್ 15 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 133 ರನ್ ಬಾರಿಸಿದರು. ಈ ಸ್ಫೋಟಕ ಶತಕದ ನೆರವಿನೊಂದಿಗೆ ಬುಂದೇಲ್‌ಖಂಡ್ ಬುಲ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಜಬಲ್ಪುರ್ ರಾಯಲ್ ಲಯನ್ಸ್ ತಂಡವು 19.1 ಓವರ್​ಗಳಲ್ಲಿ 227 ರನ್​ಗಳಿಸಿ ಆಲೌಟ್ ಆಗುವ ಮೂಲಕ 19 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.

Loading...
Unable to load recommendations.
Follow Us