ಅಪರೂಪದ ಫೋಟೋಗಳನ್ನು ಪೋಸ್ಟ್ ಮಾಡಿ ಕೊಹ್ಲಿಗೆ ಶುಭಾಶಯ ತಿಳಿಸಿದ ಮಡದಿ ಅನುಷ್ಕಾ: ಫೋಟೋ ನೋಡಿ
TV9 Web | Updated By: ಪೃಥ್ವಿಶಂಕರ
Updated on:
Nov 05, 2022 | 12:50 PM
Happy Birthday Virat Kohli: ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಅಂತಹ ಅಭಿಮಾನಿಗಳಲ್ಲಿ ಅವರ ಮಡದಿ ಅನುಷ್ಕಾ ಕೂಡ ಸೇರಿದ್ದಾರೆ.
1 / 5
ಇಂದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಹುಟ್ಟುಹಬ್ಬ. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಹೆಸರು ಮಾಡಿದ ಕೀರ್ತಿ ಕಿಂಗ್ ಕೊಹ್ಲಿಗೆ ಸಲ್ಲಬೇಕಾಗುತ್ತದೆ. 15ರ ಹರೆಯದಲ್ಲಿ ಕ್ರಿಕೆಟ್‌ಗೆ ಕಾಲಿಟ್ಟ ಕೊಹ್ಲಿ ಅಜಾನುಬಾಹುವಾಗಿ ಬೆಳೆದು ಕೆಲವೇ ವರ್ಷಗಳಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ.
2 / 5
ಟೀಂ ಇಂಡಿಯಾಗೆ ಹಲವು ಮಹತ್ವದ ವಿಜಯಗಳನ್ನು ನೀಡುವ ಮೂಲಕ ಅತ್ಯುತ್ತಮ ನಾಯಕ ಎಂಬ ಹೆಸರು ಗಳಿಸಿದ್ದ ಕೊಹ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ ಎಂಬ ಕೊರಗೊಂದನ್ನು ಬಿಟ್ಟರೆ ಇನ್ನುಳಿದಂತೆ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಹಲವು ಮಹತ್ವದ ಮೈಲಿಗಲ್ಲು ಸಾಧಿಸಿದೆ.
3 / 5
ಇಂದು (ಶನಿವಾರ) 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕೊಹ್ಲಿಗೆ ಆಟಗಾರರ ಜೊತೆಗೆ ಅಭಿಮಾನಿಗಳು ಸಹ ಶುಭಾಶಯ ಕೋರಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಅಂತಹ ಅಭಿಮಾನಿಗಳಲ್ಲಿ ಅವರ ಮಡದಿ ಅನುಷ್ಕಾ ಕೂಡ ಸೇರಿದ್ದಾರೆ.
4 / 5
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪತಿ ವಿರಾಟ್‌ಗೆ ಹುಟ್ಟುಹಬ್ಬ ಹಬ್ಬದ ಶುಭಾಶಯ ತಿಳಿಸಿರುವ ಅನುಷ್ಕಾ, ಕೊಹ್ಲಿಯ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 'ನನ್ನ ಪ್ರೀತಿ ಇಂದು ನಿನ್ನ ಹುಟ್ಟುಹಬ್ಬ. ಅದಕ್ಕಾಗಿಯೇ ನಾನು ನಿಮ್ಮ ಬೆಸ್ಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಹಾಕಿರುವ ಕೊಹ್ಲಿಯ ಅಪರೂಪದ ಫೋಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ.
5 / 5
ಏತನ್ಮಧ್ಯೆ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಡಿಸೆಂಬರ್ 11, 2017 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮುದ್ದಾದ ಜೋಡಿಗೆ ವಮಿಕಾ ಎನ್ನುವ ಹೆಣ್ಣು ಮಗು ಇರುವುದು ಈಗ ಹಳೆಯ ವಿಚಾರ. ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದ ಅನುಷ್ಕಾ ಈಗ ಮರಳಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
Published On - 12:47 pm, Sat, 5 November 22