T20 World Cup 2022: ಟಿ20 ವಿಶ್ವಕಪ್‌ನಲ್ಲಿ ಗೇಮ್ ಚೇಂಜರ್ ಆಗಲಿರುವ ಐವರು ಸ್ಪಿನ್ನರ್‌ಗಳಿವರು
TV9 Web | Updated By: Digi Tech Desk
Updated on:
Apr 04, 2023 | 4:24 PM
ಟಿ20 ವಿಶ್ವಕಪ್‌ಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಅಕ್ಟೋಬರ್ 16 ರಿಂದ ಟೂರ್ನಮೆಂಟ್ ಆರಂಭವಾಗಲಿದ್ದು, ನವೆಂಬರ್ 14 ರಂದು ಫೈನಲ್ ನಡೆಯಲಿದೆ. ಹೀಗಾಗಿ ಈಗಾಗಲೇ ಎಲ್ಲಾ ತಂಡಗಳು ಈ ಟೂರ್ನಿಗಾಗಿ ಸಕಲ ತಯಾರಿ ಆರಂಭಿಸಿವೆ. ಇದರೊಂದಿಗೆ ಪ್ರತಿ ತಂಡದಲ್ಲಿರುವ ಗೇಮ್ ಛೆಂಜರ್ಗಳ ಬಗ್ಗೆಯೂ ಟಾಕ್ ಶುರುವಾಗಿದೆ. ಅದರಲ್ಲೂ ತಮ್ಮ ಮ್ಯಾಜಿಕಲ್ ಸ್ಪಿನ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಪ್ರಮುಖ ಸ್ಪಿನ್ನರ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಹೀಗಿದೆ.
1 / 6
ಟಿ20 ವಿಶ್ವಕಪ್‌ಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಅಕ್ಟೋಬರ್ 16 ರಿಂದ ಟೂರ್ನಮೆಂಟ್ ಆರಂಭವಾಗಲಿದ್ದು, ನವೆಂಬರ್ 14 ರಂದು ಫೈನಲ್ ನಡೆಯಲಿದೆ. ಹೀಗಾಗಿ ಈಗಾಗಲೇ ಎಲ್ಲಾ ತಂಡಗಳು ಈ ಟೂರ್ನಿಗಾಗಿ ಸಕಲ ತಯಾರಿ ಆರಂಭಿಸಿವೆ. ಇದರೊಂದಿಗೆ ಪ್ರತಿ ತಂಡದಲ್ಲಿರುವ ಗೇಮ್ ಛೆಂಜರ್ಗಳ ಬಗ್ಗೆಯೂ ಟಾಕ್ ಶುರುವಾಗಿದೆ. ಅದರಲ್ಲೂ ತಮ್ಮ ಮ್ಯಾಜಿಕಲ್ ಸ್ಪಿನ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಪ್ರಮುಖ ಸ್ಪಿನ್ನರ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಹೀಗಿದೆ.
2 / 6
ಯುಜ್ವೇಂದ್ರ ಚಹಲ್ - ತಮ್ಮ ಸ್ಪಿನ್ ಮ್ಯಾಜಿಕ್ನಿಂದ ಎಂತಹ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವ ಸಾಮಥ್ಯ್ರ ಹೊಂದಿರುವ ಚಹಲ್, ಹಲವು ನಿರ್ಣಾಯಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಬ್ಯಾಟರ್ಗಳ ಲೆಕ್ಕ ಚುಪ್ತ ಮಾಡುವ ಚಹಲ್ಗೆ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆ ನೀಡಲಾಗಿದೆ.
3 / 6
ರಶೀದ್ ಖಾನ್ (ಅಫ್ಘಾನಿಸ್ತಾನ): ರಶೀದ್ ಖಾನ್ ಸದ್ಯಕ್ಕೆ ವಿಶ್ವದ ಅತ್ಯುತ್ತಮ ಸ್ಪಿನ್ನರ್ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಫ್ಘಾನಿಸ್ತಾನದ ಈ ಆಟಗಾರ ಯಾವುದೇ ಪಿಚ್‌ನಲ್ಲಿ ಆಟವನ್ನು ತಿರುಗಿಸುವ ಶಕ್ತಿಯನ್ನು ಹೊಂದಿದ್ದಾರೆ. ರಶೀದ್ 71 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6.25ರ ಎಕಾನಮಿ ದರದಲ್ಲಿ 118 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೆಚ್ಚು ಸ್ಪಿನ್ ಇಲ್ಲದೆ ವಿಕೆಟ್-ಟು-ವಿಕೆಟ್ ಎಸೆತಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವುದು ರಶೀದ್ ಕೈಚಳಕವಾಗಿದೆ.
4 / 6
ಆದಿಲ್ ರಶೀದ್ (ಇಂಗ್ಲೆಂಡ್): ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಆದಿಲ್ ರಶೀದ್ ಇಲ್ಲದೆ ಆಂಗ್ಲರ ತಂಡ ಅಪೂರ್ಣವಾಗುವುದರಲ್ಲಿ ಅನುಮಾನವಿಲ್ಲ. ರಶೀದ್ ಕಡಿಮೆ ಸ್ವರೂಪದಲ್ಲಿ ಮ್ಯಾಚ್ ವಿನ್ನರ್ ಆಗಿರುವ ಅನೇಕ ನಿದರ್ಶನಗಳಿವೆ. ಪಾಕಿಸ್ತಾನಿ ಮೂಲದ 34 ವರ್ಷದ ಸ್ಪಿನ್ನರ್ ಇಂಗ್ಲೆಂಡ್ ಪರ 76 ಪಂದ್ಯಗಳಲ್ಲಿ 7.35 ಎಕಾನಮಿ ದರದಲ್ಲಿ 83 ವಿಕೆಟ್ ಪಡೆದಿದ್ದಾರೆ.
5 / 6
ಆಡಮ್ ಝಂಪಾ (ಆಸ್ಟ್ರೇಲಿಯಾ): ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯದ ವೈಟ್ ಬಾಲ್ ಕ್ರಿಕೆಟ್ನಲ್ಲಿ ಪ್ರಮುಖ ಸ್ಪಿನ್ನರ್ ಎನಿಸಿಕೊಂಡಿದ್ದ ಝಂಪಾ ಬ್ಯಾಟ್ಸ್ಮನ್ಗಳ ಆಲೋಚನೆಯನ್ನು ಬುಡಮೇಲು ಮಾಡುವುದರಲ್ಲಿ ನಿಪುಣರು. ಝಂಪಾ ತನ್ನ ವೇಗ ಮತ್ತು ವ್ಯತ್ಯಾಸಗಳಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಕೊಡುತ್ತಾರೆ. 2021ರಲ್ಲಿ ಆಸ್ಟ್ರೇಲಿಯದ ಮೊದಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಝಂಪಾ 7 ಪಂದ್ಯಗಳಲ್ಲಿ 5.81ರ ರನ್ರೇಟ್ನಲ್ಲಿ 13 ವಿಕೆಟ್ ಪಡೆದು ಎರಡನೇ ಸ್ಥಾನ ಪಡೆದರು.
6 / 6
ಮೊಹಮ್ಮದ್ ನವಾಜ್ (ಪಾಕಿಸ್ತಾನ): ನವಾಜ್ ಕಡಿಮೆ ಮಾದರಿಯಲ್ಲಿ ಪಾಕ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಈ 28 ವರ್ಷದ ಸ್ಪಿನ್ನರ್ ಪಾಕಿಸ್ತಾನ ಪರ ಆಡಿರುವ 36 T20I ಪಂದ್ಯಗಳಲ್ಲಿ 33 ವಿಕೆಟ್ಗಳನ್ನು ಪಡೆದಿದ್ದಾರೆ. ಜೊತೆಗೆ 6.95ರ ಎಕಾನಮಿಯೊಂದಿಗೆ ಬೌಲಿಂಗ್ ಮಾಡಿದ ಈ ಸ್ಪಿನ್ ಮಾಸ್ಟರ್ ಏಷ್ಯಾಕಪ್ನಲ್ಲೂ ಬ್ಯಾಟ್ ಮೂಲಕ ತಮ್ಮ ಸಾಮರ್ಥ್ಯ ತೋರಿದ್ದಾರೆ.
Published On - 8:09 pm, Thu, 29 September 22