Alishan Sharafu: 28 ಸಿಕ್ಸ್, 16 ಫೋರ್: ಹೊಸ ಇತಿಹಾಸ ಬರೆದ ಅಲಿಶಾನ್
TV9 Web | Updated By: ಝಾಹಿರ್ ಯೂಸುಫ್
Updated on:
May 01, 2024 | 8:52 AM
Alishan Sharafu: ಅಲಿಶಾನ್ ಶರಫು ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕೆಕೆಆರ್ ಮಾಲೀಕತ್ವದ ಅಬುಧಾಬಿ ನೈಟ್ ರೈಡರ್ಸ್ ತಂಡದಲ್ಲಿದ್ದಾರೆ. ಕಳೆದ ಸೀಸನ್ನಲ್ಲೂ ಅಬುಧಾಬಿ ಪರ ಕಣಕ್ಕಿಳಿದಿದ್ದ ಅಲಿಶಾನ್ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದಿದ್ದರು. ಇದೀಗ ಏಕದಿನ ಟೂರ್ನಿಯಲ್ಲಿ ದ್ವಿಶತಕ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
1 / 6
ಯುಎಇ ತಂಡದ ಯುವ ದಾಂಡಿಗ ಅಲಿಶಾನ್ ಶರಫು (Alishan Sharafu) ಲೀಸ್ಟ್ ಎ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 28 ಸಿಕ್ಸ್, 16 ಫೋರ್ಗಳೊಂದಿಗೆ 281 ರನ್ ಸಿಡಿಸುವ ಮೂಲಕ ಎಂಬುದು ವಿಶೇಷ.
2 / 6
ಯುಎಇನಲ್ಲಿ ನಡೆಯುತ್ತಿರುವ ಡಿ50 ಟೂರ್ನಿಯ 5 ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಎಮಿರೇಟ್ಸ್ ಬ್ಲೂಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ಪರ ಆರಂಭಿಕ ಆಟಗಾರ ಅಲಿಶಾನ್ ಶರಫು ಸ್ಪೋಟಕ ಇನಿಂಗ್ಸ್ ಆಡಿದರು.
3 / 6
146 ಎಸೆತಗಳನ್ನು ಎದುರಿಸಿದ ಅಲಿಶಾನ್ 28 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 281 ರನ್ ಬಾರಿಸಿದರು. ಈ ಮೂಲಕ ಲೀಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.
4 / 6
ಇದಕ್ಕೂ ಮುನ್ನ ಈ ದಾಖಲೆ ಭಾರತದ ಎನ್ ಜಗದೀಸನ್ ಹೆಸರಿನಲ್ಲಿತ್ತು. 2022 ರಲ್ಲಿ ಅರುಣಾಚಲ ವಿರುದ್ಧದ ಪಂದ್ಯದಲ್ಲಿ ತಮಿಳುನಾಡು ಪರ ಕಣಕ್ಕಿಳಿದ ಜಗದೀಸನ್ 141 ಎಸೆತಗಳಲ್ಲಿ 277 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು.
5 / 6
ಇದೀಗ ಎಮಿರೇಟ್ಸ್ ಬ್ಲೂಸ್ ವಿರುದ್ಧದ ಪಂದ್ಯದಲ್ಲಿ 281 ರನ್ ಸಿಡಿಸುವ ಮೂಲಕ ಅಲಿಶಾನ್ ಶರಫು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಲೀಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
6 / 6
ಇನ್ನು ಅಲಿಶಾನ್ ಅವರ ದ್ವಿಶತಕದ ನೆರವಿನಿಂದ ಈ ಪಂದ್ಯದಲ್ಲಿ ಅಬುಧಾಬಿ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 499 ರನ್ ಕಲೆಹಾಕಿತು. 500 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಎಮಿರೇಟ್ಸ್ ಬ್ಲೂಸ್ 213 ರನ್ಗಳಿಗೆ ಆಲೌಟ್ ಆಗುವ ಮೂಲಕ 286 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.