Ambati Rayudu Retirement: ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು
Ambati Rayudu Retirement: ಐಪಿಎಲ್ ಫೈನಲ್ ಗೆದ್ದ 1 ದಿನದ ಬಳಿಕ ಮತ್ತೊಂದು ನಿರ್ಧಾರ ಪ್ರಕಟಿಸಿರುವ ಅಂಬಟಿ ರಾಯುಡು, ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿಯಾಗುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
1 / 7
ಐಪಿಎಲ್-2023ರ ಪ್ರಶಸ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಫೈನಲ್ ಪಂದ್ಯಕ್ಕೂ ಮುನ್ನು ಐಪಿಎಲ್ಗೆ ವಿದಾಯ ಹೇಳಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಫೈನಲ್ ಗೆದ್ದ 1 ದಿನದ ಬಳಿಕ ಮತ್ತೊಂದು ನಿರ್ಧಾರ ಪ್ರಕಟಿಸಿರುವ ಅಂಬಟಿ ರಾಯುಡು ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿಯಾಗುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
2 / 7
ಸೋಮವಾರ ನಡೆದ ಐಪಿಎಲ್-2023 ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ರಾಯುಡು ಎಂಟು ಎಸೆತಗಳಲ್ಲಿ 19 ರನ್ ಗಳಿಸಿ ಚೆನ್ನೈ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ಕರೆತಂದಿದ್ದರು.
3 / 7
ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳ ಪಡ ಆಡಿರುವ ರಾಯಡು ಆರು ಬಾರಿ ಐಪಿಎಲ್ ಗೆದ್ದಿರುವ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಪರ ತಲಾ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
4 / 7
ಟೀಂ ಇಂಡಿಯಾ ಪರ 55 ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 47.05 ಸರಾಸರಿಯಲ್ಲಿ 1694 ರನ್ ಬಾರಿಸಿದ್ದಾರೆ. ಔಟಾಗದೆ 124 ರನ್ ಬಾರಿಸಿರುವುದು ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮೂರು ಶತಕ ಮತ್ತು 10 ಅರ್ಧಶತಕಗಳನ್ನು ಬಾರಿಸಿರುವ ರಾಯುಡು ಟೀಂ ಇಂಡಿಯಾ ಪರ ಆರು ಟಿ20 ಪಂದ್ಯಗಳನ್ನು ಆಡಿ 42 ರನ್ ಸಿಡಿಸಿದ್ದಾರೆ.
5 / 7
ಇನ್ನು ದೇಶಿ ಕ್ರಿಕೆಟ್‌ನಲ್ಲಿ 97 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರಾಯುಡು 45.56 ರ ಸರಾಸರಿಯಲ್ಲಿ 16 ಶತಕ ಮತ್ತು 34 ಅರ್ಧಶತಕಗಳನೊಳಗೊಂಡಂತೆ 6,151 ರನ್ ಬಾರಿಸಿದ್ದಾರೆ. 178 ಲಿಸ್ಟ್-ಎ ಕ್ರಿಕೆಟ್ ಪಂದ್ಯಗಳಲ್ಲಿ ಐದು ಶತಕ ಸೇರಿದಂತೆ 40 ರ ಸರಾಸರಿಯಲ್ಲಿ 5,607 ರನ್ ಬಾರಿಸಿದ್ದಾರೆ.
6 / 7
2010-2017 ರವರೆಗೆ 114 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಯಡು 126.16 ಸ್ಟ್ರೈಕ್ ರೇಟ್ ಹಾಗೂ 27.15 ರ ಸರಾಸರಿಯಲ್ಲಿ 14 ಅರ್ಧ ಶತಕಗಳೊಂದಿಗೆ 2,416 ರನ್ ಬಾರಿಸಿದ್ದರು. ಔಟಾಗದೆ 81* ಬಾರಿಸಿದ್ದು ಅವರ ಅತ್ಯಧಿಕ ರನ್ ಆಗಿತ್ತು.
7 / 7
ಆದರೆ ಇದೀಗ ಬಿಸಿಸಿಐ ಅಂತಹ ಯಾವುದೇ ಹೊಸ ನಿಯಮವನ್ನು ಜಾರಿಗೊಳಿಸಿಲ್ಲ. ಹೀಗಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೂಲಕ ಹೊಸ ಇನಿಂಗ್ಸ್ ಆರಂಭಿಸಲು ಅಂಬಾಟಿ ರಾಯುಡು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.