AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕೇವಲ 10 ರನ್ ಬಾರಿಸಲು 1 ಕೋಟಿ ರೂ. ಸಂಭಾವನೆ ಪಡೆದ ಇಂಗ್ಲೆಂಡ್ ಆಟಗಾರ..!

IPL 2023: ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕನನ್ನು 1 ಕೋಟಿ ರೂ. ನೀಡಿ ಖರೀದಿಸಿದ್ದ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸ್ ಅವರಿಗೆ ಅವಕಾಶ ನೀಡಿದ್ದು ಕೇವಲ 3 ಪಂದ್ಯಗಳಲ್ಲಿ ಮಾತ್ರ.

ಪೃಥ್ವಿಶಂಕರ
|

Updated on: May 31, 2023 | 12:07 PM

Share
ಈ ಬಾರಿಯ ಐಪಿಎಲ್​ನಲ್ಲಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತನ್ನ ಹೋರಾಟವನ್ನು ಲೀಗ್​ನಲ್ಲಿಯೇ ಕೊನೆಗೊಳಿಸಿತು. ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟಿಗರಿದ್ದರೂ ಈ ಬಾರಿ ಕಪ್ ಗೆಲ್ಲಲು ರಾಜಸ್ಥಾನ್​ಗೆ ಸಾಧ್ಯವಾಗಲಿಲ್ಲ.

1 / 6
ಕಳೆದ ಬಾರಿ ಫೈನಲ್​ಗೇರಿದ್ದ ರಾಜಸ್ಥಾನ್ ಈ ಬಾರಿ ಪ್ಲೇ ಆಫ್​ಗೂ ಎಂಟ್ರಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ವಿದೇಶಿ ಆಟಗಾರರ ವೈಫಲ್ಯ. ಕಳೆದ ಬಾರಿ ಅಬ್ಬರಿಸಿದ್ದ ಬಟ್ಲರ್ ಈ ಬಾರಿ 5 ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಹೆಟ್ಮಾಯಿರ್ ಕೂಡ ಸದ್ದು ಮಾಡಲಿಲ್ಲ.

2 / 6
ಇದು ಬ್ಯಾಟಿಂಗ್ ವಿಭಾಗದ ಕತೆಯಾದರೆ, ಬೌಲಿಂಗ್​ನಲ್ಲಿ ಬೌಲ್ಟ್ ಉತ್ತಮ ಪ್ರದರ್ಶನ ನೀಡಿದರು. ಆದರೆ ಇಂಜುರಿ ಸಮಸ್ಯೆಗೆ ರಾಜಸ್ಥಾನ್​ಗೆ ದುಬಾರಿಯಾಯಿತು. ಝಂಪಾ ಕೂಡ ಸದ್ದು ಮಾಡಲಿಲ್ಲ. ಈ ನಾಲ್ವರನ್ನು ಹೊರತುಪಡಿಸಿ ರಾಜಸ್ಥಾನ್ ತಂಡದಲ್ಲಿ ಪ್ರಮುಖ ವಿದೇಶಿ ಆಟಗಾರರಿದ್ದರೂ ಅವರಿಗೆ ಹೆಚ್ಚಿನ ಅವಕಾಶ ಸಿಗದೆ, ಅವರು ಬೆಂಚ್ ಕಾದಿದ್ದೆ ಬಂತು. ಅವರಲ್ಲಿ ಪ್ರಮುಖರು ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್.

3 / 6
ಐಪಿಎಲ್ 2023 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜೋ ರೂಟ್ ಅವರನ್ನು ಫ್ರಾಂಚೈಸಿ 1 ಕೋಟಿ ರೂ.ಗೆ ಖರೀದಿಸಿತ್ತು. ಆಸಕ್ತಿ, ಅನುಭವ ಮತ್ತು ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ರೂಟ್ ಅವರಿಗೆ ರಾಜಸ್ಥಾನ ತಂಡ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಲಿಲ್ಲ.

4 / 6
ಮೊದಲಾರ್ಧದ ಐಪಿಎಲ್​ನಲ್ಲಿ ಆಡುವ ಅವಕಾಶ ಪಡೆಯದ ರೂಟ್ ಐಪಿಎಲ್‌ನ ಎರಡನೇ ಹಂತದಲ್ಲಿ 3 ಪಂದ್ಯಗಳಿಗೆ ಆಡುವ ಅವಕಾಶ ಪಡೆದುಕೊಂಡರು. ಈ ಮೂರು ಪಂದ್ಯಗಳಲ್ಲಿ ಅವರಿಗೆ ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಕೇವಲ 10 ರನ್ ಮಾತ್ರ ಬಾರಿಸಿದ್ದರು.

5 / 6
ಇನ್ನು ಜೋ ರೂಟ್ ಅವರ ಟಿ20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು 32 ಟಿ20 ಪಂದ್ಯಗಳಲ್ಲಿ 35.72 ರ ಸರಾಸರಿಯಲ್ಲಿ 126.31 ರ ಸ್ಟ್ರೈಕ್ ರೇಟ್‌ನೊಂದಿಗೆ 893 ರನ್ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಬೌಲಿಂಗ್​ನಲ್ಲಿ ರೂಟ್ 6 ವಿಕೆಟ್ ಕೂಡ ಪಡೆದಿದ್ದಾರೆ.

6 / 6
Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ

ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್

ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್

ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ

ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ

ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ

ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್

ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್

ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ