MLC: ಭಾರತ ಕ್ರಿಕೆಟ್ಗೆ ಗುಡ್ಬೈ ಹೇಳಿ ವಿದೇಶಿ ಲೀಗ್ಗಳತ್ತ ಮುಖ ಮಾಡಿದ ಸಿಎಸ್ಕೆ ಸೂಪರ್ಸ್ಟಾರ್..!
MLC: 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬಟಿ ರಾಯುಡು, ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
1 / 7
16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬಟಿ ರಾಯುಡು, ತಂಡವನ್ನು ಚಾಂಪಿಯನ್ ಮಾಡಿದ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ತಮ್ಮ ನಿರ್ಧಾರ ಬದಲಿಸಿರುವ ರಾಯುಡು ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
2 / 7
ವಾಸ್ತವವಾಗಿ ಐಪಿಎಲ್ ನಂತರ ರಾಯುಡು ಅವರು ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದಾಗಿ ಹೇಳಿದ್ದರು. ಇದೀಗ ರಾಯುಡು ಅಮೆರಿಕದ ಟಿ20 ಲೀಗ್ ಮೇಜರ್ ಲೀಗ್ ಕ್ರಿಕೆಟ್ ಮೊದಲ ಆವೃತ್ತಿಯಲ್ಲಿ ಆಡಲು ನಿರ್ಧರಿಸಿದ್ದಾರೆ.
3 / 7
ರಾಯುಡು ಈ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಫ್ರಾಂಚೈಸಿ ತಂಡವಾದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ ಎಂದು ಟೆಕ್ಸಾಸ್ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದೆ. ಈ ಲೀಗ್‌ನ ಮೊದಲ ಸೀಸನ್‌ನಲ್ಲಿ ಆರು ತಂಡಗಳು ಆಡಲಿದ್ದು, ಮೊದಲ ಸೀಸನ್ ಜುಲೈ 13 ರಿಂದ 31 ರವರೆಗೆ ನಡೆಯಲಿದೆ.
4 / 7
ರಾಯುಡು ಹೊರತುಪಡಿಸಿ, ಚೆನ್ನೈ ಸೂಪರ್ ಕಿಂಗ್ಸ್‌ನ ಇತರ ಕೆಲವು ಆಟಗಾರರು ಈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲಿ ಡೆವೊನ್ ಕಾನ್ವೇ ಹೆಸರೂ ಸೇರಿದೆ. ಅವರಲ್ಲದೆ ನ್ಯೂಜಿಲೆಂಡ್‌ನ ಮತ್ತೊಬ್ಬ ಆಟಗಾರ ಮಿಚೆಲ್ ಸ್ಯಾಂಟ್ನರ್ ಕೂಡ ಆಡಲಿದ್ದಾರೆ. ಈ ತಂಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಕೂಡ ಆಡಲಿದ್ದಾರೆ. ಡೇವಿಡ್ ಮಿಲ್ಲರ್ ಕೂಡ ಟೆಕ್ಸಾಸ್ ಪರ ಆಡಲಿದ್ದಾರೆ.
5 / 7
ಈ ತಂಡವು ತನ್ನ ಮೊದಲ ಪಂದ್ಯವನ್ನು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಚೆನ್ನೈ ಮತ್ತು ಕೋಲ್ಕತ್ತಾ ಅಲ್ಲದೆ, ಮುಂಬೈ ಮತ್ತು ದೆಹಲಿಯ ಐಪಿಎಲ್ ಫ್ರಾಂಚೈಸಿಗಳು ಈ ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿವೆ.
6 / 7
ಇನ್ನು ಐಪಿಎಲ್ನಲ್ಲಿ ಸಿಎಸ್ಕೆ ಪರ ಮೂರು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ರಾಯುಡು, 2018, 2021 ಮತ್ತು 2023 ರಲ್ಲಿ ಐಪಿಎಲ್ ಗೆದ್ದಾಗ ರಾಯುಡು ಚೆನ್ನೈ ತಂಡದ ಭಾಗವಾಗಿದ್ದರು. ಈ ವರ್ಷ ಅವರು ಐಪಿಎಲ್ ಮತ್ತು ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಈಗ ವಿದೇಶಿ ಲೀಗ್‌ಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲಿದ್ದಾರೆ.
7 / 7
ಈ ಲೀಗ್‌ನಲ್ಲಿ ಟೆಕ್ಸಾಸ್ ತಂಡವು ತನ್ನ ಮೊದಲ ಪಂದ್ಯವನ್ನು ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಇದರ ನಂತರ, ಜುಲೈ 16 ರಂದು ವಾಷಿಂಗ್ಟನ್ ಫ್ರೀಡಮ್ ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಆ ಬಳಿಕ ಮೂರನೇ ಪಂದ್ಯದಲ್ಲಿ ಜುಲೈ 17 ರಂದು, MAI ನ್ಯೂಯಾರ್ಕ್ ತಂಡವನ್ನು ಎದುರಿಸಲಿದೆ. ಜುಲೈ 21 ರಂದು ಸಿಯಾಟಲ್ ಓರ್ಕಾಸ್ ತಂಡವನ್ನು ಎದುರಿಸಲಿದೆ. ಮೂರು ದಿನಗಳ ನಂತರ ಅಂದರೆ ಜುಲೈ 24 ರಂದು ಈ ತಂಡ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧ ಮೈದಾನಕ್ಕಿಳಿಯಲಿದೆ.
Published On - 3:17 pm, Fri, 16 June 23