IPL 2024: RCB ಟಾಪ್-5 ಆಟಗಾರರು ಕನ್ಫರ್ಮ್
TV9 Web | Updated By: ಝಾಹಿರ್ ಯೂಸುಫ್
Updated on:
Dec 19, 2023 | 11:14 AM
IPL 2024 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಹರಾಜು ಪ್ರಕ್ರಿಯೆ ನಾಳೆ (ಡಿ.19) ನಡೆಯಲಿದೆ. ದುಬೈನ ಕೋಕಾಕೋಲಾ ಅರೇನಾದಲ್ಲಿ ಜರುಗಲಿರುವ ಈ ಆಕ್ಷನ್ ಪ್ರಕ್ರಿಯೆಯಲ್ಲಿ ಒಟ್ಟು 333 ಆಟಗಾರರು ಹೆಸರನ್ನು ಹರಾಜು ಕೂಗಲಾಗುತ್ತದೆ. ಇವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿರುವ ಟಾಪ್-5 ಆಟಗಾರರು ಯಾರೆಂಬುದು ಬಹಿರಂಗವಾಗಿದೆ. ಅದು ಕೂಡ ಐಪಿಎಲ್ ಹರಾಜಿಗೂ ಮುನ್ನ ಎಂಬುದು ವಿಶೇಷ.
2 / 8
ಆರ್ಸಿಬಿ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ನೂತನ ಕೋಚ್ ಆ್ಯಂಡಿ ಫ್ಲವರ್ ಈ ಬಾರಿ ಕೂಡ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಳೆದ ಸೀಸನ್ನಲ್ಲಿನ ಆರಂಭಿಕರನ್ನೇ ಮುಂದುವರೆಸಲು ನಿರ್ಧರಿಸಿದ್ದಾರೆ.
3 / 8
ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಯುವ ಬಲಗೈ ದಾಂಡಿಗ ರಜತ್ ಪಾಟಿದಾರ್ ಕಣಕ್ಕಿಳಿಯಲಿದ್ದಾರೆ. ಪಾಟಿದಾರ್ 2022 ರಲ್ಲಿ ಆರ್ಸಿಬಿ ಪರ 3ನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನೇ ಮುಂದುವರೆಸಲು ಕೋಚ್ ಆ್ಯಂಡಿ ಫ್ಲವರ್ ಬಯಸಿದ್ದಾರೆ.
4 / 8
ಇನ್ನು ನಾಲ್ಕನೇ ಕ್ರಮಾಂಕ ಗ್ಲೆನ್ ಮ್ಯಾಕ್ಸ್ವೆಲ್ಗೆ ಖಾಯಂ. ಹೊಡಿಬಡಿ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮ್ಯಾಕ್ಸಿಯನ್ನು ಈ ಬಾರಿ ಕೂಡ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವುದಾಗಿ ಫ್ಲವರ್ ತಿಳಿಸಿದ್ದಾರೆ.
5 / 8
ಹಾಗೆಯೇ 5ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಆಟಗಾರ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯಲಿದ್ದಾರೆ. ಆರ್ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಗ್ರೀನ್ ವೇಗದ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದರ ಜೊತೆಗೆ ಸ್ಪೋಟಕ ಇನಿಂಗ್ಸ್ ಆಡಬಲ್ಲ ಆಟಗಾರ.
6 / 8
ಹೀಗಾಗಿ ಕ್ಯಾಮರೋನ್ ಗ್ರೀಕ್ ಕೂಡ ಆರ್ಸಿಬಿ ತಂಡದ ಟಾಪ್-5ಕಾಣಿಸಿಕೊಳ್ಳಲಿದ್ದಾರೆ ಎಂದು ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.
7 / 8
ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ಒಟ್ಟು 19 ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಹರಾಜಿನ ಮೂಲಕ ಆರ್ಸಿಬಿಗೆ 6 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಅದರಂತೆ ಐಪಿಎಲ್ ಸೀಸನ್ 17 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುವ ಹೊಸ ಆಟಗಾರರು ಯಾರು ಎಂಬುದು ಇಂದು (ಡಿ.19) ನಿರ್ಧಾರವಾಗಲಿದೆ.
8 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.