- Kannada News Photo gallery Cricket photos Arun Jaitley Stadium Pitch Report A Big Test for RCB on unpredictable pitch: What is Duplessis master plan?
DC vs RCB: ಊಹಿಸಲಾಗದ ದೆಹಲಿ ಪಿಚ್ನಲ್ಲಿ ಆರ್ಸಿಬಿಗೆ ಅಗ್ನಿಪರೀಕ್ಷೆ: ಫಾಫ್ ಮಾಡಿರುವ ಮಾಸ್ಟರ್ ಪ್ಲಾನ್ ಏನು?
Arun Jaitley Stadium Pitch: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಿಚ್ ಹೇಗಿರುತ್ತೆ ಎಂದು ಹೇಳಲಾಗದ ಕ್ರೀಡಾಂಗಣದಲ್ಲಿ ಫಾಫ್ ಪಡೆ ಅಗ್ನಿಪರೀಕ್ಷೆಗೆ ಇಳಿಯುತ್ತಿದೆ.
Updated on:May 06, 2023 | 10:01 AM

ಫಾಪ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಪಿಚ್ ಹೇಗಿರುತ್ತೆ ಎಂದು ಹೇಳಲಾಗದ ಕ್ರೀಡಾಂಗಣದಲ್ಲಿ ಆರ್ಸಿಬಿ ಇಂದು ಅಗ್ನಿಪರೀಕ್ಷೆಗೆ ಇಳಿಯುತ್ತಿದೆ. ಮೈನಸ್ ರನ್ರೇಟ್ನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಗೆಲ್ಲ ಬೇಕಾದ ಒತ್ತಡದಲ್ಲಿದೆ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಒಟ್ಟು 81 ಐಪಿಎಲ್ ಪಂದ್ಯಗಳು ನಡೆದಿದೆ. ಈ ಬಾರಿ 4 ಪಂದ್ಯಗಳು ಜರುಗಿದ್ದು ಇದರಲ್ಲಿ ಟಾರ್ಗೆಟ್ ಬೆನ್ನಟ್ಟಿದ ತಂಡ ಮೂರು ಮತ್ತು ಮೊದಲ ಬ್ಯಾಟ್ ಮಾಡಿದ ತಂಡ ಒಂದು ಪಂದ್ಯವನ್ನು ಗೆದ್ದಿದೆ. 120 ರಿಂದ 190 ರನ್ ವರೆಗೆ ಇಲ್ಲಿ ಕಲೆಹಾಕಬಹುದು.

ಇದು ನಿಧಾನಗತಿಯ ಪಿಚ್ ಆಗಿದ್ದು ತುಂಬಾ ಹತ್ತರಿದಲ್ಲಿ ಬೌಂಡರಿ ಗೆರೆ ಇದೆ. ಹೀಗಾಗಿ ಫೋರ್-ಸಿಕ್ಸರ್ಗಳ ಮಳೆ ಸುರಿಯುವುದು ಖಚಿತ. ಮೊದಲು ಬ್ಯಾಟ್ ಮಾಡಿದ ತಂಡ 180 ರನ್ ಕಲೆಹಾಕಿದರೆ ಎದುರಾಳಿಗೆ ದೊಡ್ಡ ಟಾರ್ಗೆಟ್ ಎನ್ನಬಹುದು. ಯಾಕೆಂದರೆ ಪಂದ್ಯ ಸಾಗುತ್ತ ಪಿಚ್ ನಿಧಾನವಾಗಲಿದೆ. ಸ್ಪಿನ್ನರ್ಗಳು ಹೆಚ್ಚು ಪರಿಣಾಮಕಾರಿ ಆಗಿ ಗೋಚರಿಸಲಿದ್ದಾರೆ.

ಈ ಮೈದಾನದಲ್ಲಿ ಸರಸಾರಿ ಮೊತ್ತ 164 ಆಗಿದೆ. ಗರಿಷ್ಠ ಸ್ಕೋರ್ 231 ರನ್ ಕಲೆಹಾಕಿದ್ದರೆ 66 ರನ್ ಕನಿಷ್ಠ ಆಗಿದೆ. ಇನ್ನು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುವ ಕಾರಣ ಆರ್ಸಿಬಿ ವನಿಂದು ಹಸರಂಗ ಹಾಗೂ ಕರ್ಣ್ ಶರ್ಮಾ ಇಬ್ಬರು ಸ್ಪಿನ್ನರ್ಗಳನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಹಾಕುವ ಪ್ಲಾನ್ ಮಾಡಿಕೊಳ್ಳಬಹುದು.

ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ಕೇದರ್ ಜಾಧವ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
Published On - 10:00 am, Sat, 6 May 23



















