Ashes 2023: ಸತತ 100 ಪಂದ್ಯ: ವಿಶ್ವ ದಾಖಲೆ ನಿರ್ಮಿಸಿದ ನಾಥನ್ ಲಿಯಾನ್
TV9 Web | Updated By: ಝಾಹಿರ್ ಯೂಸುಫ್
Updated on:
Jun 28, 2023 | 7:27 PM
Nathan Lyon Record: ಕೇವಲ ಐವರು ಬ್ಯಾಟರ್ಗಳು ಮಾತ್ರ ಟೆಸ್ಟ್ ಕ್ರಿಕೆಟ್ನಲ್ಲಿ ಸತತ 100+ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಕೂಡ ಇರುವುದು ವಿಶೇಷ.
1 / 9
Ashes 2023: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
2 / 9
ಈ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸತತ 100 ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ನಾಥನ್ ಲಿಯಾನ್ ಸೇರ್ಪಡೆಯಾದರು. ಅದರಲ್ಲೂ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು.
3 / 9
ಇದಕ್ಕೂ ಮುನ್ನ ಕೇವಲ ಐವರು ಬ್ಯಾಟರ್ಗಳು ಮಾತ್ರ ಟೆಸ್ಟ್ ಕ್ರಿಕೆಟ್ನಲ್ಲಿ ಸತತ 100+ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಕೂಡ ಇರುವುದು ವಿಶೇಷ. ಟೆಸ್ಟ್ ಕ್ರಿಕೆಟ್ನಲ್ಲಿ ಸತತ 100 ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
4 / 9
1- ಅಲಿಸ್ಟರ್ ಕುಕ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ 2006 ರಿಂದ 2018 ರವರೆಗೆ ಸತತ 159 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಂದರೆ ಸತತವಾಗಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಅಲಿಸ್ಟರ್ ಕುಕ್ ಹೆಸರಿನಲ್ಲಿದೆ.
5 / 9
2- ಅಲ್ಲನ್ ಬಾರ್ಡರ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯನ ಅಲ್ಲನ್ ಬಾರ್ಡರ್ 1979 ಹಾಗೂ 1994 ರ ನಡುವೆ ಸತತವಾಗಿ 153 ಟೆಸ್ಟ್ ಪಂದ್ಯಗಳನ್ನಾಡಿದ್ದರು.
6 / 9
3- ಮಾರ್ಕ್ ವಾ: ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಆಟಗಾರ ಮಾರ್ಕ್ ವಾ 1993 ಹಾಗೂ 2002ರ ನಡುವೆ ಸತತ 107 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
7 / 9
4- ಸುನಿಲ್ ಗವಾಸ್ಕರ್: ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ ಏಕೈಕ ಆಟಗಾರ ಸುನಿಲ್ ಗವಾಸ್ಕರ್. 1975 ರಿಂದ 1987 ರವರೆಗೆ ಗವಾಸ್ಕರ್ ಸತತ 106 ಟೆಸ್ಟ್ ಪಂದ್ಯಗಳನ್ನಾಡಿದ್ದರು.
8 / 9
5- ಬ್ರೆಂಡನ್ ಮೆಕಲಂ: ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಂ, 2004-2016ರ ನಡುವೆ ಸತತ 101 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
9 / 9
6- ನಾಥನ್ ಲಿಯಾನ್: 2013 ರಿಂದ 2023ರವರೆಗೆ ಸತತವಾಗಿ 100 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಆಸ್ಟ್ರೇಲಿಯನ್ ಸ್ಪಿನ್ನರ್ ನಾಥನ್ ಲಿಯಾನ್ ಇದೀಗ ಈ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.