Ashes 2023: ರೋಹಿತ್ ದಾಖಲೆ ಉಡೀಸ್; ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಸ್ಟೀವ್ ಸ್ಮಿತ್..!
Steve Smith Century: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 32ನೇ ಶತಕ ಸಿಡಿಸಿ ಮಿಂಚಿದ್ದಾರೆ.
1 / 8
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 32ನೇ ಶತಕ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್ ಆರಂಭದ ಮೊದಲ ದಿನ 85 ರನ್ ಬಾರಿಸಿ ಅಜೇಯರಾಗುಳಿದಿದ್ದ ಸ್ಮಿತ್, ಎರಡನೇ ದಿನ ತಮ್ಮ ಸ್ಕೋರ್ಗೆ 15 ರನ್ ಸೇರಿಸುವ ಮೂಲಕ ಶತಕ ಪೂರೈಸಿದರು.
2 / 8
ವಾಸ್ತವವಾಗಿ ಸ್ಟೀವ್ ಸ್ಮಿತ್ ಈ ಹಿಂದೆ ನಡೆದ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 16 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 6 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಲಾರ್ಡ್ಸ್‌ನಲ್ಲಿ ಲಯ ಕಂಡುಕೊಂಡ ಸ್ಮಿತ್ 110 ರನ್ಗಳ ದಾಖಲೆ ಇನ್ನಿಂಗ್ಸ್ ಆಡಿದರು. ಈ ಶತಕದೊಂದಿಗೆ ಅನೇಕ ದಾಖಲೆಗಳನ್ನು ಬರೆದರು.
3 / 8
ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ವೇಗವಾಗಿ 32 ಶತಕಗಳನ್ನು ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಸ್ಮಿತ್ ಕೇವಲ 174ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದಾರೆ. ಸ್ಮಿತ್ಗೂ ಮುನ್ನ 176 ಇನ್ನಿಂಗ್ಸ್‌ಗಳಲ್ಲಿ 34 ಶತಕ ಸಿಡಿಸಿದ್ದ ರಿಕಿ ಪಾಂಟಿಂಗ್ ಅವರ ಹೆಸರಲ್ಲಿ ಈ ದಾಖಲೆ ಇತ್ತು.
4 / 8
ಈ ಶತಕದೊಂದಿಗೆ ಆ್ಯಶಸ್‌ನಲ್ಲಿ ಸ್ಟೀವ್ ಸ್ಮಿತ್ ತಮ್ಮ 12 ನೇ ಶತಕವನ್ನು ಪೂರ್ಣಗೊಳಿಸಿದ್ದಂತಾಗಿದೆ. ಇದರೊಂದಿಗೆ ಆ್ಯಶಸ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಸ್ಮಿತ್, ಜಾಕ್ ಹಾಬ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಆ್ಯಶಸ್‌ನಲ್ಲಿ 19 ಶತಕ ಬಾರಿಸಿರುವ ಬ್ರಾಡ್‌ಮನ್ ಅವರ ಹೆಸರಿನಲ್ಲಿ ಈ ದಾಖಲೆ ಇದೆ.
5 / 8
ಲಾರ್ಡ್ಸ್‌ನಲ್ಲಿ ಶತಕ ಬಾರಿಸುವುದರೊಂದಿಗೆ ಸ್ಮಿತ್, ಇಂಗ್ಲೆಂಡ್‌ನಲ್ಲಿ ತಮ್ಮ 8 ನೇ ಟೆಸ್ಟ್ ಶತಕವನ್ನು ಪೂರೈಸಿದರು. ಈ ಮೂಲಕ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಎರಡನೇ ಯಶಸ್ವಿ ವಿದೇಶಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ 11 ಶತಕ ಬಾರಿಸಿರುವ ಬ್ರಾಡ್‌ಮನ್ ಮೊದಲ ಸ್ಥಾನದಲ್ಲಿದ್ದಾರೆ.
6 / 8
ಅಲ್ಲದೆ ಪ್ರಸ್ತುತ ಸಕ್ರೀಯ ಕ್ರಿಕೆಟಿಗರಲ್ಲಿ ಸ್ಟೀವ್ ಸ್ಮಿತ್ ಅತಿ ಹೆಚ್ಚು ಟೆಸ್ಟ್ (32) ಶತಕಗಳನ್ನು ಬಾರಿಸಿದ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ, ಟೆಸ್ಟ್ ಶತಕಗಳ ವಿಷಯದಲ್ಲಿ ಸ್ಟೀವ್ ವಾ ಅವರನ್ನು ಸರಿಗಟ್ಟಿದ್ದಾರೆ. ಸ್ಮಿತ್ರನ್ನು ಹೊರತುಪಡಿಸಿದರೆ, ಆಸೀಸ್ ಪರ ಅತಿ ಹೆಚ್ಚು ಶತಕ ಸಿಡಿಸಿದವರಲ್ಲಿ 41 ಶತಕ ಬಾರಿಸಿರುವ ರಿಕಿ ಪಾಂಟಿಂಗ್ ಇದ್ದಾರೆ.
7 / 8
ಹಾಗೆಯೇ ಸಕ್ರಿಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯ ಶತಕಗಳನ್ನು ದಾಖಲಿಸಿದವರ ಪಟ್ಟಿಯಲ್ಲಿ ಸ್ಮಿತ್ ನಾಲ್ಕನೇ ಸ್ಥಾನಕ್ಕೇರುವುದರೊಂದಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಲಾರ್ಡ್ಸ್‌ನಲ್ಲಿ ಸ್ಮಿತ್ ತಮ್ಮ 44ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರೆ (ಟೆಸ್ಟ್‌ಗಳಲ್ಲಿ 32 ಮತ್ತು ಏಕದಿನದಲ್ಲಿ 12), ರೋಹಿತ್ ಇದುವರೆಗೆ 43 ಅಂತರರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದಾರೆ.
8 / 8
ಮೊದಲ ಟೆಸ್ಟ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಇದೀಗ ಎರಡನೇ ಟೆಸ್ಟ್ನಲ್ಲಿ ಸ್ಟೀವ್ ಸ್ಮಿತ್ ಶತಕದ ಆಧಾರದ ಮೇಲೆ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಬಾರಿಸಿದೆ. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 278 ರನ್ ಕಲೆಹಾಕಿದೆ.
Published On - 7:19 am, Fri, 30 June 23