IND vs WI: ಐಪಿಎಲ್ ವೇಳೆ ನಿಯಮ ಉಲ್ಲಂಘನೆ; ವಿಂಡೀಸ್ ಪ್ರವಾಸದಿಂದ 4 ಆಟಗಾರರಿಗೆ ಗೇಟ್​ಪಾಸ್..!

IND vs WI: ಐಪಿಎಲ್ ಫ್ರಾಂಚೈಸಿಗಳು ನೀಡಿದ ದೂರಿನ ಮೇರೆಗೆ ಬಿಸಿಸಿಐ, ಈ ಯುವ ಆಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಪೃಥ್ವಿಶಂಕರ
|

Updated on:Jun 30, 2023 | 8:47 AM

ಸದ್ಯ ವೆಸ್ಟ್ ಪ್ರವಾಸಕ್ಕೆ ಭಾರತ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಈ ಎರಡೂ ಸರಣಿಗಳು ಮುಗಿದ ಬಳಿಕ ಆರಂಭವಾಗಬೇಕಿರುವ 5 ಪಂದ್ಯಗಳಿಗೆ ಬಲಿಷ್ಠ ಯುವ ಪಡೆಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಬಿಸಿಸಿಐ ಈ ಬಾರಿ ಐಪಿಎಲ್ ಸ್ಟಾರ್ ಆಟಗಾರರಿಗೆ ಮಣೆಹಾಕುವ ಸಾಧ್ಯತೆ ಇದೆ.

1 / 7
ಆದರೆ ಬಿಸಿಸಿಐ ಟಿ20 ತಂಡವನ್ನು ಆಯ್ಕೆ ಮಾಡುವ ಮುನ್ನವೇ ಐಪಿಎಲ್​ನಲ್ಲಿ ಆಡಿದ ಸ್ಟಾರ್ ಯುವ ಆಟಗಾರರಿಗೆ ನಡುಕ ಶುರುವಾಗಿದೆ. ಇದಕ್ಕೆ ಕಾರಣವೂ ಇದ್ದು, ಐಪಿಎಲ್ ಫ್ರಾಂಚೈಸಿಗಳು ನೀಡಿದ ದೂರಿನ ಮೇರೆಗೆ ಬಿಸಿಸಿಐ, ಈ ಯುವ ಆಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ.

2 / 7
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಐಪಿಎಲ್ ಮಂಡಳಿ ಕೆಲವು ನಿಯಮಗಳನ್ನು ರೂಪಿಸಿತ್ತು. ಅದರಲ್ಲಿ ತಂಡದ ಆಟಗಾರರು ಫ್ರಾಂಚೈಸಿಯ ಗಮನಕ್ಕೆ ತರದೆ ಹೋಟೆಲ್ ರೂಮಿನಿಂದ ಎಲ್ಲಿಗೂ ತೆರಳುವಂತಿಲ್ಲ ಎಂಬ ನಿಯಮ ಕೂಡ ಸೇರಿತ್ತು. ಆಟಗಾರರನ್ನು ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಮಂಡಳಿ ಈ ನಿಯಮ ಜಾರಿ ಮಾಡಿತ್ತು.

3 / 7
ಆದರೆ ಇದೀಗ ಐಪಿಎಲ್​ನ 4 ಪ್ರಾಂಚೈಸಿಗಳು ಐಪಿಎಲ್ ಮಂಡಳಿಗೆ ದೂರು ನೀಡಿದ್ದು, ಈ ದೂರಿನಲ್ಲಿ ತಂಡದ ಆಟಗಾರರು ಫ್ರಾಂಚೈಸಿಗೆ ಮಾಹಿತಿ ನೀಡದೆ ತಂಡ ತಂಗಿದ್ದ ರೂಮಿನಿಂದ ಹೊರಹೋಗಿದ್ದರು ಎಂದು ಆರೋಪಿಸಿವೆ. ಇದೀಗ ಐಪಿಎಲ್ ನಿಯಮ ಮುರಿದ ಆ ಆಟಗಾರರ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಲಿದೆ ಎಂದು ವರದಿಯಾಗಿದೆ.

4 / 7
ವರದಿಯ ಪ್ರಕಾರ ಐಪಿಎಲ್ ನಿಯಮ ಮುರಿದ ಆಟಗಾರರು ಉತ್ತರದ ಫ್ರಾಂಚೈಸಿಗಳಿಗೆ ಸೇರಿದವರು ಎಂಬುದು ತಿಳಿದು ಬಂದಿದೆ. ಅಂದರೆ, ಆರೋಪ ಹೊತ್ತಿರುವ ಆಟಗಾರರು ಲಕ್ನೋ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದವರಾಗಿದ್ದಾರೆ ಎಂದು ತಿಳಿದು ಬಂದಿದೆ.

5 / 7
ಒಟ್ಟು ನಾಲ್ವರು ಆಟಗಾರರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇದುವರೆಗೆ ಆ ನಾಲ್ವರು ಆಟಗಾರರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ಇನ್ನು  ಈ ಆಟಗಾರರು ಯಾವ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದರು ಎಂಬುದು ಕೂಡ ತಿಳಿದುಬಂದಿಲ್ಲ. ಪೂರ್ಣ ತನಿಖೆಯ ಬಳಿಕ ಆರೋಪ ಸಾಭೀತಾದರೆ ಈ ನಾಲ್ವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲು ಬಿಸಿಸಿಐ ಹಿಂಜರಿಯುವುದಿಲ್ಲ.

6 / 7
ಆದರೆ ಈ ನಾಲ್ವರು ಆಟಗಾರರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನಪಡೆಯುವವರಿದ್ದರು ಎಂದು ತಿಳಿದುಬಂದಿದೆ. ಆದರೀಗ ನಿಯಮ ಉಲ್ಲಂಘಿಸಿರುವ ಈ ಆಟಗಾರರಿಗೆ ವಿಂಡೀಸ್ ಪ್ರವಾಸದ ಭಾಗ್ಯ ದೊರೆಯುವುದು ಕಷ್ಟಕರವಾಗಿದೆ.

7 / 7

Published On - 8:40 am, Fri, 30 June 23

Follow us
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು

ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​

ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ

ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ