
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಲಾರ್ಡ್ಸ್ ಟೆಸ್ಟ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಟೀವ್ ಸ್ಮಿತ್ ಮೊದಲ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳನ್ನು ಒಳಗೊಂಡಂತೆ 110 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡ 34 ರನ್ ಗಳಿಸಿದರು.

ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ಬೌಂಡರಿಗಳನ್ನು ಪೂರೈಸಿದ ದಾಖಲೆಯನ್ನು ಸ್ಟೀವ್ ಸ್ಮಿತ್ ಬರೆದರು. ಸ್ಮಿತ್ ತಮ್ಮ 99 ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಒಟ್ಟಾರೆ ಸ್ಮಿತ್ ಖಾತೆಯಲ್ಲಿ 1004 ಬೌಂಡರಿಗಳು ಜಮಾಗೊಂಡಿವೆ.

ಸದ್ಯ ಭಾರತದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 950 ಬೌಂಡರಿಗಳನ್ನು ಬಾರಿಸಿದ್ದು, ಸ್ಮಿತ್ ನಂತರ ಸಾವಿರ ಬೌಂಡರಿಗಳ ಸನಿಹದಲ್ಲಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಟಾಪ್ 5 ಆಟಗಾರರನ್ನು ನೋಡುವುದಾದರೆ..

ಸಚಿನ್ ತೆಂಡೂಲ್ಕರ್- 2058 ಬೌಂಡರಿಗಳು

ರಾಹುಲ್ ದ್ರಾವಿಡ್- 1654 ಬೌಂಡರಿಗಳು

ಬ್ರಿಯಾನ್ ಲಾರಾ- 1559 ಕ್ವಾಡ್‌ಗಳು

ರಿಕಿ ಪಾಂಟಿಂಗ್- 1509 ಬೌಂಡರಿಗಳು

ಕುಮಾರ ಸಂಗಕ್ಕಾರ- 1491 ಬೌಂಡರಿಗಳು