R Ashwin: ಸ್ಟೋಕ್ಸ್ನ ಔಟ್ ಮಾಡಿ, ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಅಶ್ವಿನ್
TV9 Web | Updated By: ಝಾಹಿರ್ ಯೂಸುಫ್
Updated on:
Jan 27, 2024 | 3:29 PM
India vs England 1st Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಯ ಮೂಲಕ ಕಪಿಲ್ ದೇವ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
1 / 7
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್ಗಳಿಗೆ ಕಟ್ಟಿಹಾಕಿದ ಭಾರತ ತಂಡವು 436 ರನ್ ಬಾರಿಸಿ 190 ರನ್ಗಳ ಮುನ್ನಡೆ ಸಾಧಿಸಿತು.
2 / 7
ಇದಾದ ಬಳಿಕ ಶುರುವಾದ ಇಂಗ್ಲೆಂಡ್ ತಂಡದ ದ್ವಿತೀಯ ಇನಿಂಗ್ಸ್ನಲ್ಲೂ ಟೀಮ್ ಇಂಡಿಯಾ ಬೌಲರ್ಗಳು ಪರಾಕ್ರಮ ಮೆರೆದರು. ಪರಿಣಾಮ 180 ರನ್ಗಳಿಸುಷ್ಟರಲ್ಲಿ ಇಂಗ್ಲೆಂಡ್ ತಂಡವು ಅಗ್ರ ಕ್ರಮಾಂಕದ 5 ವಿಕೆಟ್ಗಳನ್ನು ಕಳೆದುಕೊಂಡಿತು. ಇದರಲ್ಲಿ ನಾಯಕ ಬೆನ್ ಸ್ಟೋಕ್ಸ್ ಕೂಡ ಸೇರಿದ್ದರು.
3 / 7
ಮೊದಲ ಇನಿಂಗ್ಸ್ನಲ್ಲಿ 70 ರನ್ ಬಾರಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಬೆನ್ ಸ್ಟೋಕ್ಸ್ (6) ಅವರನ್ನು ಈ ಬಾರಿ ಅಶ್ವಿನ್ ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಬೆನ್ ಸ್ಟೋಕ್ಸ್ರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಹಿರಿಮೆ ರವಿಚಂದ್ರನ್ ಅಶ್ವಿನ್ ಪಾಲಾಯಿತು.
4 / 7
ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾದರು. ಅದು ಕೂಡ ಟೀಮ್ ಇಂಡಿಯಾ ಲೆಜೆಂಡ್ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
5 / 7
ಕಪಿಲ್ ದೇವ್ ಪಾಕಿಸ್ತಾನ್ ಆಟಗಾರ ಮುದಸ್ಸರ್ ನಝರ್ ಅವರನ್ನು ಒಟ್ಟು 12 ಬಾರಿ ಔಟ್ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ.
6 / 7
ಬೆನ್ ಸ್ಟೋಕ್ಸ್ಗೆ ಇದುವರೆಗೆ 624 ಎಸೆತಗಳನ್ನು ಎಸೆದಿರುವ ರವಿಚಂದ್ರನ್ ಅಶ್ವಿನ್ ಒಟ್ಟು 12 ಬಾರಿ ಔಟ್ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬನೇ ಆಟಗಾರನನ್ನು ಅತೀ ಹೆಚ್ಚು ಬಾರಿ ಔಟ್ ಭಾರತೀಯ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
7 / 7
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬನೇ ಬ್ಯಾಟರ್ನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ವಿಶ್ವ ದಾಖಲೆ ಇರುವುದು ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾಥ್ ಹೆಸರಿನಲ್ಲಿ. ಇಂಗ್ಲೆಂಡ್ ಆಟಗಾರ ಮೈಕೆಲ್ ಅರ್ಥಟನ್ ಅವರನ್ನು ಒಟ್ಟು 19 ಬಾರಿ ಔಟ್ ಮಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.