ಭಾರತೀಯ ಚುನಾವಣಾ ಆಯೋಗದ (ಇಸಿಐ) ಇತ್ತೀಚಿನ ಅಪ್‌ಡೇಟ್ ಪ್ರಕಾರ, ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ ಮಧ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಏಪ್ರಿಲ್ 16 ರ ತಾತ್ಕಾಲಿಕ ದಿನಾಂಕದೊಂದಿಗೆ ಅಧಿಸೂಚನೆಯನ್ನು ಕಳುಹಿಸಿದ್ದಾರೆ. ಅಂದರೆ ಏಪ್ರಿಲ್-ಮೇ ನಡುವೆ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನಬಹುದು.