AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R Ashwin: ಸ್ಟೋಕ್ಸ್​ನ ಔಟ್ ಮಾಡಿ, ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಅಶ್ವಿನ್

India vs England 1st Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಯ ಮೂಲಕ ಕಪಿಲ್ ದೇವ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

TV9 Web
| Edited By: |

Updated on: Jan 27, 2024 | 3:29 PM

Share
ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ಕಟ್ಟಿಹಾಕಿದ ಭಾರತ ತಂಡವು 436 ರನ್​ ಬಾರಿಸಿ 190 ರನ್​ಗಳ ಮುನ್ನಡೆ ಸಾಧಿಸಿತು.

1 / 7
ಇದಾದ ಬಳಿಕ ಶುರುವಾದ ಇಂಗ್ಲೆಂಡ್ ತಂಡದ ದ್ವಿತೀಯ ಇನಿಂಗ್ಸ್​ನಲ್ಲೂ ಟೀಮ್ ಇಂಡಿಯಾ ಬೌಲರ್​ಗಳು ಪರಾಕ್ರಮ ಮೆರೆದರು. ಪರಿಣಾಮ 180 ರನ್​ಗಳಿಸುಷ್ಟರಲ್ಲಿ ಇಂಗ್ಲೆಂಡ್ ತಂಡವು ಅಗ್ರ ಕ್ರಮಾಂಕದ 5 ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಲ್ಲಿ ನಾಯಕ ಬೆನ್ ಸ್ಟೋಕ್ಸ್​ ಕೂಡ ಸೇರಿದ್ದರು.

2 / 7
ಮೊದಲ ಇನಿಂಗ್ಸ್​ನಲ್ಲಿ 70 ರನ್ ಬಾರಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಬೆನ್ ಸ್ಟೋಕ್ಸ್ (6) ಅವರನ್ನು ಈ ಬಾರಿ ಅಶ್ವಿನ್ ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಬೆನ್ ಸ್ಟೋಕ್ಸ್​ರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಹಿರಿಮೆ ರವಿಚಂದ್ರನ್ ಅಶ್ವಿನ್ ಪಾಲಾಯಿತು.

3 / 7
ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾದರು. ಅದು ಕೂಡ ಟೀಮ್ ಇಂಡಿಯಾ ಲೆಜೆಂಡ್ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

4 / 7
ಕಪಿಲ್ ದೇವ್ ಪಾಕಿಸ್ತಾನ್ ಆಟಗಾರ ಮುದಸ್ಸರ್ ನಝರ್ ಅವರನ್ನು ಒಟ್ಟು 12 ಬಾರಿ ಔಟ್ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ.

5 / 7
ಬೆನ್​ ಸ್ಟೋಕ್ಸ್​ಗೆ ಇದುವರೆಗೆ 624 ಎಸೆತಗಳನ್ನು ಎಸೆದಿರುವ ರವಿಚಂದ್ರನ್ ಅಶ್ವಿನ್ ಒಟ್ಟು 12 ಬಾರಿ ಔಟ್ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರನನ್ನು ಅತೀ ಹೆಚ್ಚು ಬಾರಿ ಔಟ್ ಭಾರತೀಯ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

6 / 7
ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಬ್ಯಾಟರ್​ನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ವಿಶ್ವ ದಾಖಲೆ ಇರುವುದು ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾಥ್ ಹೆಸರಿನಲ್ಲಿ. ಇಂಗ್ಲೆಂಡ್ ಆಟಗಾರ ಮೈಕೆಲ್ ಅರ್ಥಟನ್ ಅವರನ್ನು ಒಟ್ಟು 19 ಬಾರಿ ಔಟ್ ಮಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ