Updated on: Aug 27, 2022 | 1:55 PM
ಏಷ್ಯಾಕಪ್ನ ಮೊದಲ ಪಂದ್ಯವೇ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತುಂಬಾ ವಿಶೇಷ ಪಂದ್ಯ. ಅಂದರೆ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿದರೆ ಟಿ20 ಕ್ರಿಕೆಟ್ನಲ್ಲಿ 100 ಪಂದ್ಯವಾಡಿದ ವಿಶೇಷ ದಾಖಲೆಯೊಂದು ಕಿಂಗ್ ಕೊಹ್ಲಿ ಪಾಲಾಗಲಿದೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ಕೊಹ್ಲಿ ಪಾಲಿನ ವಿಶೇಷ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿಲ್ಲ ಎಂಬುದು. ಅಂದರೆ....
ವಿರಾಟ್ ಕೊಹ್ಲಿ 100ನೇ ಪಂದ್ಯ ಅಥವಾ 100ನೇ ಇನ್ನಿಂಗ್ಸ್ ಆಡಿದಾಗಲೆಲ್ಲಾ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ ಕಿಂಗ್ ಕೊಹ್ಲಿಯ 100ನೇ ಟೆಸ್ಟ್ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 53 ರನ್‌ಗಳ ಜಯ ಸಾಧಿಸಿತ್ತು.
ಇನ್ನು ಕೊಹ್ಲಿಯ 100ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಇನಿಂಗ್ಸ್ ಹಾಗೂ 222 ರನ್ಗಳಿಂದ ಬಗ್ಗು ಬಡಿದಿತ್ತು. ಅಂದರೆ ವಿರಾಟ್ ಕೊಹ್ಲಿ ಪಾಲಿನ ವಿಶೇಷ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು.
ವಿರಾಟ್ ಕೊಹ್ಲಿ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 100ನೇ ಏಕದಿನ ಇನ್ನಿಂಗ್ಸ್ ಆಡಿದ್ದರು. ಈ ವೇಳೆಯೂ ಟೀಮ್ ಇಂಡಿಯಾ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು.
2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 100ನೇ ಏಕದಿನ ಪಂದ್ಯವಾಡಿದ್ದರು. ಈ ವೇಳೆ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 5 ರನ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದೀಗ ವಿರಾಟ್ ಕೊಹ್ಲಿ ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ 100ನೇ ಟಿ20 ಪಂದ್ಯವಾಡಲು ಸಜ್ಜಾಗಿ ನಿಂತಿದ್ದಾರೆ.
ಈ ಹಿಂದಿನ ಅಂಕಿ ಅಂಶಗಳಂತೆ ವಿರಾಟ್ ಕೊಹ್ಲಿ ಪಾಲಿನ ವಿಶೇಷ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಲಿದೆಯಾ ಕಾದು ನೋಡಬೇಕಿದೆ.