Asia Cup 2023 Schedule: ಭಾರತ- ಪಾಕ್ ಪಂದ್ಯದ್ದೇ ಚಿಂತೆ; ಏಷ್ಯಾಕಪ್ ವೇಳಾಪಟ್ಟಿ ವಿಳಂಬವಾಗಲು ಕಾರಣ ಬಹಿರಂಗ
Asia Cup 2023 Schedule: ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಆಯೋಜನೆಗೆ ಎಲ್ಲಾ ತಂಡಗಳೂ ಒಪ್ಪಿಗೆ ಸೂಚಿಸಿವೆ. ಆದರೂ ಏಷ್ಯಾಕಪ್ ವೇಳಾಪಟ್ಟಿಯನ್ನು ಪ್ರಕಟಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಹಿಂದೇಟು ಹಾಕುತ್ತಿದೆ.
1 / 6
ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಎಲ್ಲಿ ನಡೆಯಬೇಕು ಎಂಬ ಗೊಂದಲ ಕೊನೆಗೂ ನಿವಾರಣೆ ಆಗಿ ವಾರಗಳೇ ಕಳೆದಿವೆ. ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಆಯೋಜನೆಗೆ ಎಲ್ಲಾ ತಂಡಗಳೂ ಒಪ್ಪಿಗೆ ಸೂಚಿಸಿವೆ. ಆದರೂ ಏಷ್ಯಾಕಪ್ ವೇಳಾಪಟ್ಟಿಯನ್ನು ಪ್ರಕಟಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಹಿಂದೇಟು ಹಾಕುತ್ತಿದೆ.
2 / 6
ಇನ್ಸೈಡ್ಸ್ಪೋರ್ಟ್ ವರದಿ ಪ್ರಕಾರ ಈ ವಾರ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಏಷ್ಯಾಕಪ್ 2023 ರ ವೇಳಾಪಟ್ಟಿಯ ಸಮಯ ಹಾಗೂ ಸ್ಥಳಗಳ ಬಗ್ಗೆಗಿರುವ ಗೊಂದಲದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಶ್ರೀಲಂಕಾ ಕ್ರಿಕೆಟ್ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ವರದಿ ಮಾಡಿದೆ.
3 / 6
ಈಗ ಲಭ್ಯವಿರುವ ಮಾಹಿತಿ ಪ್ರಕಾರ ಪಂದ್ಯಗಳನ್ನು ಲಾಹೋರ್ ಮತ್ತು ದಂಬುಲ್ಲಾದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಕೊಲಂಬೊದಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಮಾನ್ಸೂನ್ ಕಾರಣದಿಂದಾಗಿ ಸ್ಥಳ ಬದಲಿಸಲು ಚಿಂತಿಸಲಾಗಿದೆ. ಹೀಗಾಗಿ ಈ ಬಗ್ಗೆ ಒಂದು ಅಂತಿಮ ನಿರ್ಧಾರಕ್ಕೆ ಬರುವ ಸಲುವಾಗಿ ವೇಳಾಪಟ್ಟಿ ಘೋಷಣೆ ತಡವಾಗುತ್ತಿದೆ ಎಂದು ವರದಿಯಾಗಿದೆ.
4 / 6
ಅಲ್ಲದೆ ಶ್ರೀಲಂಕಾದಲ್ಲಿ ನಡೆಯಲ್ಲಿರುವ ಪಂದ್ಯಗಳ ಸ್ಥಳಗಳ ಕುರಿತು ಈ ವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಾರದೊಳಗೆ ವೇಳಾಪಟ್ಟಿ ಹೊರಬೀಳಲಿದೆ ಎಂದು ಸಿಸಿಐ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ .
5 / 6
ಈ ಹಿಂದೆ ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು, ಆದರೆ ಉಭಯ ತಂಡಗಳ ಈ ಹೈವೋಲ್ಟೇಜ್ ಕದನಕ್ಕೆ ಮಳೆಯು ಸಮಸ್ಯೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಪಂದ್ಯವನ್ನು ದಂಬುಲ್ಲಾದಲ್ಲಿ ನಡೆಸುವ ಸಾಧ್ಯತೆಗಳಿವೆ.
6 / 6
ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ಮೊದಲ ನಾಲ್ಕು ಪಂದ್ಯಗಳನ್ನು ಆಯೋಜಿಸುತ್ತದೆ. ಪಂದ್ಯಾವಳಿಯ ಮೊದಲು ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡಲು ನಿರ್ಧರಿಸಲಾಗಿದೆ. ಆ ಬಳಿಕ ಎಲ್ಲಾ ತಂಡಗಳು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿವೆ.