- Kannada News Photo gallery Cricket photos Asia Cup 2023 Super 4 India match schedule India vs Pakistan match date, time and Where check here
ಏಷ್ಯಾಕಪ್ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?
Team India Super 4 Match Schedule: ಏಷ್ಯಾಕಪ್ನ ಸೂಪರ್ -4 ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ಸೆಪ್ಟೆಂಬರ್ 10 ರಂದು ಆಯೋಜನೆ ಮಾಡಲಾಗಿದ್ದು, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
Updated on:Sep 07, 2023 | 7:29 AM

ಏಷ್ಯಾಕಪ್ 2023 ಟೂರ್ನಿ ರೋದತ್ತ ತಲುಪುತ್ತಿದೆ. ಈಗಾಗಲೇ ಸೂಪರ್-4 ಹಂತದ ಪಂದ್ಯಗಳು ಆರಂಭವಾಗಿದೆ. ಸೆಪ್ಟೆಂಬರ್ 6 ರಂದು ನಡೆದ ಸೂಪರ್-4 ಸ್ಟೇಜ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವು ಕಾಣುವ ತನ್ನ ಫಾರ್ಮ್ ಮುಂದುವರೆಸಿತು.

ಭಾರತ ತಂಡ ಗುಂಪು ಹಂತದ ಪಂದ್ಯದಲ್ಲಿ ನೇಪಾಳ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 10 ವಿಕೆಟ್ಗಳ ಜಯ ಸಾಧಿಸಿದರೆ, ಇಂಡೋ-ಪಾಕ್ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಈ ಮೂಲಕ ಒಟ್ಟು 3 ಪಾಯಿಂಟ್ನೊಂದಿಗೆ ರೋಹಿತ್ ಶರ್ಮಾ ಪಡೆ ಸೂಪರ್-4ಗೆ ತೇರ್ಗಡೆ ಆಗಿತ್ತು.

ಸೂಪರ್ -4 ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ಸೆಪ್ಟೆಂಬರ್ 10 ರಂದು ಆಯೋಜನೆ ಮಾಡಲಾಗಿದ್ದು, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.

ಭಾರತಕ್ಕೆ ಶುಭಸುದ್ದಿ ಎಂದರೆ ಕೆಎಲ್ ರಾಹುಲ್ ತಂಡ ಸೇರಿಕೊಂಡಿರುವುದು. ಗುಂಪು ಹಂತದ ಪಂದ್ಯಗಳಿಗೆ ಅಲಭ್ಯರಾಗಿದ್ದ ರಾಹುಲ್ ಇದೀಗ ಸೂಪರ್-4 ಹಂತದ ಪಂದ್ಯಕ್ಕೆ ಸಜ್ಜಾಗುತ್ತಿದ್ದರೆ. ಈಗಾಗಲೇ ಕೊಲಂಬೊದಲ್ಲಿ ತಂಡ ಸೇರಿಕೊಂಡಿರುವ ಕೆಎಲ್ ಅಭ್ಯಾಸ ಕೂಡ ಶುರು ಮಾಡಿಕೊಂಡಿದ್ದಾರೆ.

ಕೆಎಲ್ ತಂಡ ಸೇರಿಕೊಂಡಿರುವ ಕಾರಣ ಟೀಮ್ ಇಂಡಿಯಾಕ್ಕೆ ಆಡುವ ಬಳಗದ್ದು ದೊಡ್ಡ ಚಿಂತೆಯಾಗಿದೆ. ಆರಂಭದ ಎರಡು ಪಂದ್ಯದಲ್ಲಿ ರಾಹುಲ್ ಸ್ಥಾನ ತುಂಬಿದ್ದ ಇಶಾನ್ ಕಿಶನ್ ಪಾಕ್ ವಿರುದ್ಧ ಬೊಂಬಾಟ್ ಪ್ರದರ್ಶನ ತೋರಿದ್ದರು. ಅತ್ತ ಶುಭ್ಮನ್ ಗಿಲ್ ಕೂಡ ನೇಪಳಾ ವಿರುದ್ಧ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ರಾಹುಲ್ಗೆ ಯಾರು ಜಾಗ ಮಾಡಿಕೊಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ಜಸ್ಪ್ರಿತ್ ಬುಮ್ರಾ ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬುಮ್ರಾ ಭಾರತಕ್ಕೆ ಮರಳಿದ್ದರು. ಸೋಮವಾರ ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ದಂಪತಿಗೆ ಗಂಡು ಮಗು ಜನಿಸಿದೆ. ಹೀಗಾಗಿ ಇವರು ಪಾಕ್ ವಿರುದ್ಧದ ಪಂದ್ಯದ ವೇಳೆ ತಂಡ ಸೇರಿಕೊಳ್ಳಲಿದ್ದಾರೆ.

ಭಾರತ-ಪಾಕ್ ಪಂದ್ಯ ನಡೆಯಲಿರುವ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಮತ್ತೊಂದೆಡೆ, ವೇಗದ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಯಶಸ್ಸು ಸಾಧಿಸುತ್ತಾರೆ. ಪಂದ್ಯದ ಮಧ್ಯದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಸಹಾಯ ಮಾಡಲಿದೆಯಷ್ಟೆ.
Published On - 7:27 am, Thu, 7 September 23




