ಬಾಬರ್ ಆಝಂ ಕಂಬ್ಯಾಕ್… ರೋಹಿತ್ ಶರ್ಮಾ ವಿಶ್ವ ದಾಖಲೆ ಉಡೀಸ್ ಖಚಿತ

Updated on: Aug 07, 2025 | 9:54 AM

Asia Cup 2025: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಶ್ರೀಲಂಕಾ, ಯುಎಇ, ಒಮಾನ್ ಹಾಗೂ ಹಾಂಗ್ ಕಾಂಗ್ ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿಯ ಮೂಲಕ ಬಾಬರ್ ಆಝಂ ಟಿ20 ಕ್ರಿಕೆಟ್​ಗೆ ಕಂಬ್ಯಾಕ್ ಮಾಡಲಿದ್ದಾರೆ.

1 / 5
ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ವೇಳೆ ಪಾಕ್ ತಂಡದ ಆರಂಭಿಕ ದಾಂಡಿಗ ಫಖರ್ ಝಮಾನ್ ಗಾಯಗೊಂಡಿದ್ದು, ಹೀಗಾಗಿ ಅವರು ಏಷ್ಯಾಕಪ್​ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

2 / 5
ಇತ್ತ ಫಖರ್ ಝಮಾನ್ ಏಷ್ಯಾಕಪ್​ನಿಂದ ಹೊರಗುಳಿದರೆ ಅವರ ಸ್ಥಾನದಲ್ಲಿ ಬಾಬರ್ ಆಝಂ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಈ ಹಿಂದೆ ಬಾಬರ್ ಪಾಕಿಸ್ತಾನ್ ಪರ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರನ್ನು ಟಿ20 ಕ್ರಿಕೆಟ್​ಗೆ ಪರಿಗಣಿಸಲಾಗುತ್ತಿಲ್ಲ. ಇದೀಗ ಅನುಭವಿ ಬ್ಯಾಟರ್ ಲೆಕ್ಕಾಚಾರದಲ್ಲಿ ಮತ್ತೆ ಬಾಬರ್​​ಗೆ ಮಣೆಹಾಕಲು ಪಿಸಿಬಿ ನಿರ್ಧರಿಸಿದೆ ಎಂದು ವರದಿಯಾಗಿದೆ.

3 / 5
ಬಾಬರ್ ಆಝಂ ಪಾಕಿಸ್ತಾನ್ ಪರ ಕೊನೆಯ ಬಾರಿ ಟಿ20 ಪಂದ್ಯವಾಡಿದ್ದು 2024 ರಲ್ಲಿ. ಇದಾದ ಬಳಿಕ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಇದೀಗ ಪ್ರಮುಖ ಟೂರ್ನಿಗೆ ಅನುಭವಿ ಆಟಗಾರರನ್ನು ಪರಿಗಣಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಹೀಗಾಗಿ ಒಂದು ವರ್ಷದ ಬಳಿಕ ಬಾಬರ್ ಆಝಂ ಕಂಬ್ಯಾಕ್ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ.

4 / 5
ಇತ್ತ ಬಾಬರ್ ಆಝಂ ರಿಎಂಟ್ರಿ ಕೊಟ್ಟರೆ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆ ಅಳಿಸಿ ಹೋಗುವುದು ಸಹ ಖಚಿತ. ಏಕೆಂದರೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಹಿಟ್​ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಪರ 151 ಟಿ20 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಒಟ್ಟು 4231 ರನ್​ ಗಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.

5 / 5
ಈ ದಾಖಲೆ ಮುರಿಯಲು ಬಾಬರ್ ಆಝಂಗೆ ಬೇಕಿರುವುದು ಕೇವಲ 8 ರನ್​ಗಳು ಮಾತ್ರ. ಪಾಕ್ ಪರ ಈವರೆಗೆ 121 ಟಿ20 ಇನಿಂಗ್ಸ್ ಆಡಿರುವ ಬಾಬರ್ ಒಟ್ಟು 2223 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಏಷ್ಯಾಕಪ್ ಮೂಲಕ ಟಿ20 ಕ್ರಿಕೆಟ್​ಗೆ ಮರಳಿದರೆ 8 ರನ್​ಗಳೊಂದಿಗೆ ರೋಹಿತ್ ಶರ್ಮಾ ಅವರ ದಾಖಲೆ ಮುರಿಯುವುದು ಖಚಿತ ಎನ್ನಬಹುದು.