Asia Cup 2025: ಏಷ್ಯಾಕಪ್ ತಂಡಕ್ಕೆ ಆಯ್ಕೆಯಾದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಿಂಕು ಸಿಂಗ್

Updated on: Sep 04, 2025 | 5:40 PM

Rinku Singh's Asia Cup Selection: ಏಷ್ಯಾಕಪ್ 2025 ಕ್ಕೆ ರಿಂಕು ಸಿಂಗ್ ಅವರ ಆಯ್ಕೆಯು ಅನೇಕರನ್ನು ಆಶ್ಚರ್ಯಗೊಳಿಸಿದೆ. ಆದಾಗ್ಯೂ ಕಳೆದ ವರ್ಷದ ನಿರಾಶಾದಾಯಕ ಪ್ರದರ್ಶನದ ನಂತರವೂ ಆಯ್ಕೆ ಮಾಡಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ರಿಂಕು ಸಿಂಗ್ ಹೇಳಿದ್ದಾರೆ. ಅವರು ತಮ್ಮ ಬಹುಮುಖ ಪ್ರತಿಭೆ ಮತ್ತು ಪಂದ್ಯದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಉಲ್ಲೇಖಿಸಿದ್ದಾರೆ.

1 / 6
2025 ರ ಏಷ್ಯಾಕಪ್​ಗಾಗಿ ಪ್ರಸ್ತುತ ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಟೀಂ ಇಂಡಿಯಾ ಕೂಡ ಸೇರಿದೆ. ತಂಡ ಪ್ರಕಟವಾದ ಬಳಿಕ ಕೆಲವರು ಈ ತಂಡದಲ್ಲಿ ಇನ್ನು ಕೆಲವರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಹೊಂದಿದ್ದರೆ, ಇನ್ನು ಕೆಲವರು, ತಂಡಕ್ಕೆ ಆಯ್ಕೆಯಾದವರಲ್ಲಿ ಕೆಲವರನ್ನು ಆಯ್ಕೆ ಮಾಡಬಾರದಿಂತು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹವರಲ್ಲಿ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಿಂಕು ಸಿಂಗ್ ಕೂಡ ಒಬ್ಬರು.

2 / 6
ವಾಸ್ತವವಾಗಿ ಕಳೆದೊಂದು ವರ್ಷದಲ್ಲಿ ಟಿ20 ಪಂದ್ಯಗಳಲ್ಲಿ ರಿಂಕು ಸಿಂಗ್ ಅವರ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಇದು ಸಾಲದೆಂಬಂತೆ ಐಪಿಎಲ್​ನಲ್ಲೂ ರಿಂಕು ಸಪ್ಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ರಿಂಕು ಎಷ್ಯಾಕಪ್ ತಂಡದಲ್ಲಿ ಆಯ್ಕೆಯಾಗುವುದು ಅನುಮಾನ ಎನ್ನಲಾಗಿತ್ತು. ಆದಾಗ್ಯೂ ಆಯ್ಕೆ ಮಂಡಳಿ ಅವರಿಗೆ ಅವಕಾಶ ನೀಡಿದೆ. ಮಂಡಳಿಯ ಈ ನಿರ್ಧಾರ ಸ್ವತಃ ರಿಂಕು ಅವರಿಗೆ ಆಶ್ಚರ್ಯವನ್ನುಂಟು ಮಾಡಿದೆ.

3 / 6
ರಿಂಕು ಸಿಂಗ್ ಪ್ರಸ್ತುತ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ವೇಳೆ ರೆವ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಅವರು, ‘ಏಷ್ಯಾಕಪ್ ತಂಡದಲ್ಲಿ ನನ್ನ ಹೆಸರನ್ನು ನೋಡಿ ನನಗೆ ಸ್ಫೂರ್ತಿ ಸಿಕ್ಕಿತು. ಕಳೆದ ವರ್ಷ ನನ್ನ ಪ್ರದರ್ಶನ ಚೆನ್ನಾಗಿರಲಿಲ್ಲ. ಹೀಗಾಗಿ ಬಹುಶಃ ನನ್ನನ್ನು ತಂಡದಿಂದ ಕೈಬಿಡಬಹುದೆಂದು ಭಾವಿಸಿದ್ದೆ. ಆದರೆ ಆಯ್ಕೆದಾರರು ನನ್ನ ಮೇಲೆ ನಂಬಿಕೆ ಇರಿಸಿ ಆಯ್ಕೆ ಮಾಡಿದ್ದಾರೆ, ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

4 / 6
ಪಂದ್ಯದಲ್ಲಿ ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯವು ನನ್ನಲ್ಲಿರುವ ಕಾರಣ, ಆಯ್ಕೆದಾರರು ನನ್ನನ್ನು ಪರಿಗಣಿಸಿರಬಹುದು. ಆಯ್ಕೆ ಸಮಿತಿಯು ಪ್ರಸ್ತುತ ಬಹು ಕೌಶಲ್ಯಪೂರ್ಣ ಆಟಗಾರರಿಗೆ ಆದ್ಯತೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್ ಮಾಡುವುದು ಕೂಡ ಬಹಳ ಮುಖ್ಯ. ಆಯ್ಕೆದಾರರು ಕೂಡ ಈ ಎರಡು ಆಯ್ಕೆ ಇರುವ ಆಟಗಾರರ ಮೇಲೆ ಹೆಚ್ಚು ಗಮನ ಹರಿಸುತ್ತಾರೆ.

5 / 6
ಇನ್ನು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿದ ರಿಂಕು, ಮೇಲಿನ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ನನಗಿದೆ. ಆದರೆ ತನಗೆ ಯಾವುದೇ ಪಾತ್ರವನ್ನು ನೀಡಿದರೂ ನಿರ್ವಹಿಸಲು ಸಿದ್ಧ. ನಾನು 2023 ರಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೆ. ಆದರೆ ನನಗೆ ಏಳು ಮತ್ತು ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಇಷ್ಟವಿಲ್ಲ.

6 / 6
ಆದರೆ ಅದು ತಂಡದ ಅಗತ್ಯ, ಆದ್ದರಿಂದ ನೀವು ಆ ಪಾತ್ರದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಬೇಕು. ನಾನು ಭಾರತ ತಂಡದ ಪರ ಇದುವರೆಗೆ 33 ಟಿ20 ಪಂದ್ಯಗಳನ್ನು ಆಡಿದ್ದೇನೆ ಮತ್ತು ನಾನು 3 ಅರ್ಧಶತಕಗಳನ್ನು ಗಳಿಸಿದ್ದೇನೆ. ನಾನು ಫಿನಿಷರ್ ಪಾತ್ರದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದೇನೆ ಎಂದಿದ್ದಾರೆ.

Published On - 7:49 pm, Sat, 23 August 25