Asia cup 2025: ಅರ್ಧಶತಕ ನಡುವೆಯೂ ಬೇಡದ ದಾಖಲೆ ಬರೆದ ಸಂಜು ಸ್ಯಾಮ್ಸನ್

Updated on: Sep 19, 2025 | 10:44 PM

Sanju Samson's Slow Fifty: ಏಷ್ಯಾಕಪ್‌ನಲ್ಲಿ ಒಮಾನ್ ವಿರುದ್ಧ ಸಂಜು ಸ್ಯಾಮ್ಸನ್ ಅವರ 56 ರನ್‌ಗಳ ಇನ್ನಿಂಗ್ಸ್ ನಿಧಾನಗತಿಯದ್ದಾಗಿದ್ದು, ಟೀಕೆಗೆ ಗುರಿಯಾಗಿದೆ. 41 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದು ಇದು ಅವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ ಅತ್ಯಂತ ನಿಧಾನ ಅರ್ಧಶತಕ. ಆದರೂ, ಅವರು ಟಿ20 ಏಷ್ಯಾಕಪ್‌ನಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮತ್ತು ಅಂತರರಾಷ್ಟ್ರೀಯ ಟಿ20ಯಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ.

1 / 6
ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಏಷ್ಯಾಕಪ್‌ನಲ್ಲಿ ಒಮಾನ್ ವಿರುದ್ಧ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಆದರೆ ಇದರ ಹೊರತಾಗಿಯೂ, ಅವರು ಟೀಕೆಗೆ ಗುರಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಒಮಾನ್ ವಿರುದ್ಧ 56 ರನ್‌ಗಳ ಇನ್ನಿಂಗ್ಸ್ ಆಡಿದರು, ಆದರೆ ಅವರು ನಿಧಾನಗತಿಯ ಇನ್ನಿಂಗ್ಸ್ ಬೇಡದ ದಾಖಲೆಯನ್ನು ಸೃಷ್ಟಿಸಿದೆ.

2 / 6
ವಾಸ್ತವವಾಗಿ ಒಮಾನ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಮ್ಮ ಅರ್ಧಶತಕ ಪೂರೈಸಲು 41 ಎಸೆತಗಳನ್ನು ತೆಗೆದುಕೊಂಡರು ಇದು ಅವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ. ಅಂತಿಮವಾಗಿ ಸಂಜು 124.44 ರ ಸ್ಟ್ರೈಕ್ ರೇಟ್​ನಲ್ಲಿ 45 ಎಸೆತಗಳನ್ನು ಎದುರಿಸಿ ಒಟ್ಟು 56 ರನ್ ಬಾರಿಸಿದರು.

3 / 6
ಸಂಜು ಸ್ಯಾಮ್ಸನ್ ತಮ್ಮ ಅರ್ಧಶತಕದ ಇನ್ನಿಂಗ್ಸ್​ನಲ್ಲಿ ಮೂರು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಆದರೆ ಅಧಿಕ ಡಾಟ್ ಬಾಲ್‌ಗಳನ್ನು ಮಾಡಿದರು. ಕೇವಲ ಸಿಕ್ಸರ್‌ಗಳು ಮತ್ತು ಬೌಂಡರಿಗಳೊಂದಿಗೆ 30 ರನ್ ಬಾರಿಸಿದ ಸಂಜು 18 ಡಾಟ್ ಬಾಲ್‌ಗಳನ್ನು ಆಡಿದರು.

4 / 6
ಇದರ ಹೊರತಾಗಿಯೂ ಸಂಜು ಟಿ20 ಏಷ್ಯಾ ಕಪ್‌ನಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು ಎಂಬುದು ಗಮನಿಸಬೇಕಾದ ಸಂಗತಿ. ಇದು ಮಾತ್ರವಲ್ಲದೆ ಸಂಜು ಅಂತರರಾಷ್ಟ್ರೀಯ ಟಿ20ಯಲ್ಲಿ 50 ಸಿಕ್ಸರ್‌ಗಳ ಮೈಲಿಗಲ್ಲನ್ನು ದಾಟಿದರು. ಸಂಜು ಇದುವರೆಗೆ ಆಡಿರುವ 45 ಪಂದ್ಯಗಳ 39 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

5 / 6
ಪಂದ್ಯದ ಬಗ್ಗೆ ಹೇಳುವುದಾದರೆ, ಸಂಜು ಅವರ ಸ್ಟ್ರೈಕ್ ರೇಟ್ ಸಾಕಷ್ಟು ಕಡಿಮೆಯಿದ್ದರೂ, ಅಭಿಷೇಕ್ ಶರ್ಮಾ 253 ಸ್ಟ್ರೈಕ್ ರೇಟ್‌ನಲ್ಲಿ 38 ರನ್ ಗಳಿಸಿದರು. ಅಕ್ಷರ್ ಪಟೇಲ್ 200 ಸ್ಟ್ರೈಕ್ ರೇಟ್‌ನಲ್ಲಿ 26 ರನ್ ಗಳಿಸಿದರು. ತಿಲಕ್ ವರ್ಮಾ 161 ಸ್ಟ್ರೈಕ್ ರೇಟ್‌ನಲ್ಲಿ 29 ರನ್ ಗಳಿಸಿದರು.

6 / 6
ಶುಭ್​ಮನ್ ಗಿಲ್ ಓಮನ್ ವಿರುದ್ಧ ಕೇವಲ 5 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಒಂದು ರನ್ ಗಳಿಸಿದರು. ಶಿವಂ ದುಬೆ 5 ರನ್ ಗಳಿಸಿ ಔಟಾದರು. ಒಮಾನ್ ಬೌಲರ್‌ಗಳು ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಕೇವಲ 188 ರನ್‌ಗಳಿಗೆ ಸೀಮಿತಗೊಳಿಸಿದರು.