U-19 Asia Cup 2024: ಭಾರತ, ಪಾಕ್ ಸೇರಿದಂತೆ ಸೆಮಿಫೈನಲ್ಗೇರಿದ 4 ತಂಡಗಳು
U-19 Asia Cup 2024 Semifinals: ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್‌ಗೆ 4 ತಂಡಗಳು ಎಂಟ್ರಿಕೊಟ್ಟಿವೆ. ಗುಂಪು ಎಯಿಂದ ಪಾಕಿಸ್ತಾನ ಮತ್ತು ಭಾರತ, ಗುಂಪು ಬಿಯಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಅರ್ಹತೆ ಪಡೆದಿವೆ. ಡಿಸೆಂಬರ್ 6 ರಂದು ಪಾಕಿಸ್ತಾನ vs ಬಾಂಗ್ಲಾದೇಶ ಮತ್ತು ಭಾರತ vs ಶ್ರೀಲಂಕಾ ನಡುವೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ವಿಜೇತ ತಂಡಗಳು ಡಿಸೆಂಬರ್ 8 ರಂದು ಫೈನಲ್ ಪಂದ್ಯ ಆಡಲಿವೆ.
1 / 7
ದುಬೈನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾಕಪ್ ಅಂತಿಮ ಹಂತಕ್ಕೆ ಬಂದು ತಲುಪಿದೆ. ನವೆಂಬರ್ 29 ರಿಂದ ಆರಂಭವಾದ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಈ ಎಲ್ಲಾ ತಂಡಗಳು ಸೆಮಿಫೈನಲ್ ತಲುಪಲು ತೀವ್ರ ಪ್ರಯತ್ನ ನಡೆಸಿದವು. ಆದರೆ ಅಂತಿಮವಾಗಿ ನಾಲ್ಕು ತಂಡಗಳು ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
2 / 7
ಆ ಪ್ರಕಾರ, ಪಾಕಿಸ್ತಾನವು ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿದರೆ, ಟೀಂ ಇಂಡಿಯಾ ಆತಿಥೇಯ ಯುಎಇಯನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಇನ್ನೊಂದು ಗುಂಪಿನಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.
3 / 7
ಗ್ರೂಪ್-ಎಯಲ್ಲಿ ಪಾಕಿಸ್ತಾನ ತಂಡ ಬಲಿಷ್ಠ ಪ್ರದರ್ಶನ ನೀಡಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಭಾರತವನ್ನು 43 ರನ್‌ಗಳಿಂದ ಸೋಲಿಸಿತು. ಇದಾದ ಬಳಿಕ ಯುಎಇಯನ್ನು 69 ರನ್‌ಗಳಿಂದ ಸೋಲಿಸಿತ್ತು. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಜಪಾನ್ ತಂಡವನ್ನು 180 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲನೆ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
4 / 7
ಈ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿತ್ತು. ಆದರೆ ಆ ಬಳಿಕ ಜಪಾನ್ ಮತ್ತು ಯುಎಇ ತಂಡಗಳನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಮತ್ತೊಂದೆಡೆ, ಬಿ ಗುಂಪಿನಲ್ಲಿ, ಶ್ರೀಲಂಕಾ ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಬಾಂಗ್ಲಾದೇಶ ತನ್ನ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಪ್ರವೇಶಿಸಿದೆ.
5 / 7
ಎ ಗುಂಪಿನಿಂದ ಪಾಕಿಸ್ತಾನ ಮತ್ತು ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದರೆ, ಶ್ರೀಲಂಕಾ ಮತ್ತು ಬಾಂಗ್ಲಾದೇಶವು ಬಿ ಗುಂಪಿನಿಂದ ಅರ್ಹತೆ ಪಡೆದಿವೆ. ಮೊದಲ ಸೆಮಿಫೈನಲ್ ಪಂದ್ಯ ‘ಎ’ ಗುಂಪಿನ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಡಿಸೆಂಬರ್ 6ರಂದು ದುಬೈನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ಡಿಸೆಂಬರ್ 6 ರಂದು ಶಾಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
6 / 7
ಈ ಎರಡೂ ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ. ಎರಡೂ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಆರಂಭವಾಗಲಿವೆ. ಸೆಮಿಫೈನಲ್‌ನಲ್ಲಿ ಗೆದ್ದ ತಂಡಗಳು ಫೈನಲ್‌ಗೆ ತಲುಪುತ್ತವೆ. ಅಂತಿಮ ಪಂದ್ಯ ಡಿಸೆಂಬರ್ 8 ರಂದು ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
7 / 7
ಭಾರತ ಮತ್ತು ಪಾಕಿಸ್ತಾನ ಎರಡೂ ಸೆಮಿಫೈನಲ್ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಮೂಲಕ ಟೂರ್ನಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾದ್ದಂತ್ತಾಗುತ್ತದೆ.