WTC Points Table: ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಕಾಂಗರೂಗಳಿಗೆ ನಂ.1 ಪಟ್ಟ; ಪಾಕ್ ಸೋತರಷ್ಟೇ ಭಾರತಕ್ಕೆ ಉಳಿಗಾಲ

| Updated By: ಪೃಥ್ವಿಶಂಕರ

Updated on: Dec 11, 2022 | 3:41 PM

WTC Points Table: 4ನೇ ಸ್ಥಾನದಲ್ಲಿ ಸದ್ಯ ಭಾರತವಿದ್ದು, ಫೈನಲ್​ಗೇರಲು ರೋಹಿತ್ ಪಡೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಇದುವರೆಗೆ 12 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ 6 ಗೆಲುವಿನೊಂದಿಗೆ 72 ಅಂಕ ಪಡೆದುಕೊಂಡಿದೆ.

1 / 9
ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ವಿರುದ್ಧ 419 ರನ್‌ಗಳ ಬೃಹತ್ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಿಗಿಗೊಳಿಸಿಕೊಂಡಿದೆ. ಸದ್ಯ 12 ಟೆಸ್ಟ್ ಪಂದ್ಯಗಳನ್ನಾಡಿರುವ ಕಾಂಗರೂಗಳು 8 ಗೆಲುವಿನೊಂದಿಗೆ 108 ಅಂಕಗಳನ್ನು ಸಂಪಾದಿಸಿ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇನ್ನುಳಿದಂತೆ ಯಾವ ತಂಡ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ವಿವರ ಇಲ್ಲಿದೆ.

2 / 9
ಆಸ್ಟ್ರೇಲಿಯಾ ಬಳಿಕ 10 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ಇದ್ದು, 6 ಗೆಲುವಿನೊಂದಿಗೆ 72 ಅಂಕ ಪಡೆದುಕೊಂಡು ಹರಿಣಗಳು 2ನೇ ಸ್ಥಾನದಲ್ಲಿದ್ದಾರೆ.

3 / 9
ಮೂರನೇ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 10 ಪಂದ್ಯಗಳನ್ನಾಡಿರುವ ಲಂಕಾ 5 ಗೆಲುವಿನೊಂದಿಗೆ 64 ಅಂಕ ಗಳಿಸಿದೆ.

4 / 9
4ನೇ ಸ್ಥಾನದಲ್ಲಿ ಸದ್ಯ ಭಾರತವಿದ್ದು, ಫೈನಲ್​ಗೇರಲು ರೋಹಿತ್ ಪಡೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಇದುವರೆಗೆ 12 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ 6 ಗೆಲುವಿನೊಂದಿಗೆ 72 ಅಂಕ ಪಡೆದುಕೊಂಡಿದೆ.

5 / 9
ಪಾಕಿಸ್ತಾನ 5ನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 56 ಅಂಕ ಪಡೆದುಕೊಂಡಿದೆ.

6 / 9
ಹಾಗೆಯೇ 6ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದ್ದು, 11ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 54 ಅಂಕ ಪಡೆದುಕೊಂಡಿದೆ

7 / 9
7ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಇದುವರೆಗೆ 20 ಪಂದ್ಯಗಳನ್ನಾಡಿದ್ದು, 8 ಗೆಲುವಿನೊಂದಿಗೆ 100 ಅಂಕ ಪಡೆದುಕೊಂಡಿದೆ.

8 / 9
ಚೊಚ್ಚಲ ಆವೃತ್ತಿಯ ಚಾಂಪಿಯನ್ ನ್ಯೂಜಿಲೆಂಡ್ ಪ್ರಸ್ತುತ 8ನೇ ಸ್ಥಾನದಲ್ಲಿದ್ದು, ಆಡಿರುವ 9 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 28 ಅಂಕ ಪಡೆದುಕೊಂಡಿದೆ.

9 / 9
ಈಗ ಟೀಂ ಇಂಡಿಯಾ ಫೈನಲ್ ಆಡಬೇಕೆಂದರೆ, ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲ್ಲುವುದರೊಂದಿಗೆ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಉಳಿದ ಪಂದ್ಯಗಳಲ್ಲಿ ಸೋಲಬೇಕಿದೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡುತ್ತಿರುವ ಪಾಕಿಸ್ತಾನ ಸರಣಿ ಸೋತರೆ ಭಾರತಕ್ಕೆ ಫೈನಲ್ ಹಾದಿ ಕೊಂಚ ಸುಗಮವಾಗಲಿದೆ.

Published On - 3:41 pm, Sun, 11 December 22