INDW vs AUSW: ಸೂಪರ್ ಓವರ್​ನಲ್ಲಿ ಗೆದ್ದ ಬಳಿಕ ತ್ರಿವರ್ಣ ಧ್ವಜ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ

India Women vs Australia Women: ಸೂಪರ್ ಓವರ್​ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ತ್ರಿವರ್ಣ ಧ್ವಜ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

TV9 Web
| Updated By: Vinay Bhat

Updated on:Dec 12, 2022 | 9:33 AM

ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಣ ಎರಡನೇ ಟಿ20 ಪಂದ್ಯ ರಣ ರೋಚಕವಾಗಿತ್ತು. ಉಭಯ ತಂಡಗಳು 20 ಓವರ್​ಗೆ 187 ರನ್ ಗಳಿಸಿದ ಪರಿಣಾಮ ಪಂದ್ಯ ಟೈ ಆಯಿತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು.

1 / 7
ಸೂಪರ್ ಓವರ್​ನಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಅದರಲ್ಲೂ ಸ್ಮೃತಿ ಮಂದಾನ ಕೇವಲ 3 ಎಸೆತಗಳಲ್ಲಿ 13 ರನ್ ಚಚ್ಚಿ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹರ್ಮನ್​ಪ್ರೀತ್ ಪಡೆ 1-1 ಅಂತರದ ಮುನ್ನಡೆ ಪಡೆದುಕೊಂಡಿದೆ.

2 / 7
ಸೂಪರ್ ಓವರ್​ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ತ್ರಿವರ್ಣ ಧ್ವಜ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

3 / 7
ಸೂಪರ್ ಓವರ್​ನಲ್ಲಿ ಮೊದಲು ಭಾರತ ಬ್ಯಾಟಿಂಗ್ ಮಾಡಿತು. ಸ್ಮೃತಿ ಮಂದಾನ ಮತ್ತು ರಿಚ್ಚಾ ಘೋಷ್ ಕಣಕ್ಕಿಳಿದರು. ಹೇದರ್ ಗ್ರಹಮ್ ಅವರ ಮೊದಲ ಎಸೆತದಲ್ಲೇ ಘೋಷ್ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು. ಆದರೆ, ಎರಡನೇ ಎಸೆತದಲ್ಲಿ ಔಟಾದರು. ಮೂರನೇ ಎಸೆತದಲ್ಲಿ ಕೌರ್ 1 ರನ್ ಗಳಿಸಿದರೆ, 4ನೇ ಎಸೆತದಲ್ಲಿ ಮಂದಾನ ಫೋರ್, 5ನೇ ಎಸೆತದಲ್ಲಿ ಸಿಕ್ಸ್ ಹಾಗೂ 6ನೇ ಎಸೆತದಲ್ಲಿ 3 ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಸೂಪರ್ ಓವರ್​ನಲ್ಲಿ ಗೆಲ್ಲಲು ಭಾರತ 21 ರನ್​ಗಳ ಟಾರ್ಗೆಟ್ ನೀಡಿತು.

4 / 7
ಭಾರತ ಪರ ರೇಣುಕಾ ಸಿಂಗ್ ಬೌಲಿಂಗ್ ಮಾಡಿದರು. ಅಲೆಸ್ಸಾ ಹೇಲೆ ಆಶ್ಲೆಗ್ ಗಾರ್ಡನರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಹೇಲೆ ಫೋರ್ ಬಾರಿಸಿದರು. ಎರಡನೇ ಎಸೆತದಲ್ಲಿ 1 ರನ್ ಗಳಿಸಿದರೆ, ಮೂರನೇ ಎಸೆತದಲ್ಲಿ ಗಾರ್ಡನರ್ ಔಟಾದರು. 4ನೇ ಎಸೆತದಲ್ಲಿ ಮೆಕ್​ಘ್ರತ್ 1 ರನ್ ಗಳಿಸಲಷ್ಟೇ ಶಕ್ತವಾದರು. 5ನೇ ಎಸೆತದಲ್ಲಿ ಫೋರ್ ಬಂತು. 6ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆಸ್ಟ್ರೇಲಿಯಾ 6 ಎಸೆತಗಳಲ್ಲಿ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿ ಸೋಲು ಕಂಡಿತು.

5 / 7
ಇದಕ್ಕೂ ಮುನ್ನ ಟಾಸ್ ಬ್ಯಾಟಿಂಗ್​ಗೆ ಬಂದ ಆಸ್ಟ್ರೇಲಿಯಾ ಪರ ಬೆತ್ ಮೋನೆ (ಆಜೇಯ 82) ಮತ್ತು ತಹಿಲಾ ಮೆಕ್​ಘ್ರಾತ್ (ಅಜೇಯ 70) ಭಾರತೀಯ ಬೌಲರ್​ಗಳನ್ನು ಕಾಡಿದರು. ಎಷ್ಟೇ ಹರಸಾಹಸ ಪಟ್ಟರೂ ಭಾರತೀಯ ಮಹಿಳೆಯರಿಗೆ ಇವರಿಬ್ಬರ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು.

6 / 7
ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಶಫಾಲಿ ವರ್ಮಾ (34), ಸ್ಮೃತಿ ಮಂದಾನ (79), ಹರ್ಮನ್​ಪ್ರೀತ್ ಕೌರ್ (21 ರನ್) ಹಾಗೂ ರಿಚ್ಚಾ ಘೋಷ್ 13 ಎಸೆತಗಳಲ್ಲಿ 26 ರನ್ ಸಿಡಿಸಿದ ಪರಿಣಾಮ ಭಾರತ ಕೂಡ 20 ಓವರ್​ಗೆ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ಆಡಿಸಬೇಕಾಯಿತು.

7 / 7

Published On - 9:33 am, Mon, 12 December 22

Follow us
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ

ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್

ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್

ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್

ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್

ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್

ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್

ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು

10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?