- Kannada News Photo gallery Cricket photos ipl 2023 Auction players who can get less but can be very effective
IPL 2023 Auction: ಮಿನಿ ಹರಾಜಿನಲ್ಲಿ ಈ ಆಟಗಾರರಿಗೆ ಹೆಚ್ಚು ಹಣ ಸಿಗುವುದು ಅನುಮಾನ
Updated on: Dec 12, 2022 | 1:57 PM

16ನೇ ಆವೃತ್ತಿಯ ಐಪಿಎಲ್ನ ಮಿನಿ ಹರಾಜು 23 ರಂದು ಕೊಚ್ಚಿಯಲ್ಲಿ ನಡೆಯಲಿದ್ದು ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಯಾವ ಆಟಗಾರನ ಮೇಲೆ ಎಷ್ಟು ಹಣವನ್ನು ಹೂಡಿಕೆ ಮಾಡಬೇಕೆಂದು ಫ್ರಾಂಚೈಸಿಗಳು ತಮ್ಮ ಸಿದ್ಧತೆಗಳನ್ನು ಮಾಡಿಕೊಂಡಿವೆ. ಆದರೆ ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ಹಲವು ಆಟಗಾರರು ಹರಾಜಾಗದೆ ಉಳಿಯಬಹುದು. ಇನ್ನು ಕೆಲವು ಆಟಗಾರರು ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದರೂ ಇವರಿಗೆ ಪಂದ್ಯದ ಮೇಲೆ ಪರಿಣಾಮ ಬೀರಬಹುವ ಸಾಮರ್ಥ್ಯ ಹೊಂದಿದ್ದಾರೆ.

ತಮ್ಮ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ಇಟ್ಟುಕೊಂಡಿರುವ ಆಟಗಾರರಲ್ಲಿ ಅಜಿಂಕ್ಯ ರಹಾನೆ ಕೂಡ ಇದ್ದಾರೆ. ರಹಾನೆ ಕಳೆದ ಸೀಸನ್ನಲ್ಲಿ ಕೋಲ್ಕತಾ ಪರ ಆಡಿದ್ದರು. ಕಳೆದ ವರ್ಷ ಕೋಲ್ಕತಾ ಅವರಿಗೆ ಒಂದು ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಈ ಬಾರಿ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಹೆಚ್ಚು ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗದ ರಹಾನೆಗೆ ಈ ಬಾರಿ ಹೆಚ್ಚು ಹಣ ಸಿಗದೇ ಇರಬಹುದು. ಆದರೆ ರಹಾನೆಗೆ ಏಕಾಂಗಿಯಾಗಿ ಪಂದ್ಯವನ್ನು ಬದಲಿಸುವ ಸಾಮರ್ಥ್ಯವಿದೆ.

ತನ್ನ ಮೂಲ ಬೆಲೆಯನ್ನು 50 ಲಕ್ಷಕ್ಕೆ ನಿಗದಿಪಡಿಸಿರುವ ಮಾಯಾಂಕ್ ಮಾರ್ಕಂಡೆಗೂ ಹೆಚ್ಚು ಬೇಡಿಕೆ ಇಲ್ಲ. 2018 ರಲ್ಲಿ ಮುಂಬೈ ಪರ ತನ್ನ ಸಾಮರ್ಥ್ಯ ತೋರಿದ್ದ ಮಾಯಾಂಕ್ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಮಿಂಚಿದ್ದರು. ಆ ನಂತರ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ತನ್ನ ಮ್ಯಾಜಿಕ್ ಸ್ಪಿನ್ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಚಾಣಕ್ಷತೆ ಮಾಯಾಂಕ್ಗೆ ಇದೆ.

ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿದ್ದ ಸಂದೀಪ್ ವಾರಿಯರ್ ಈ ಬಾರಿ ತನ್ನ ಮೂಲ ಬೆಲೆಯನ್ನು 50 ಲಕ್ಷಕ್ಕೆ ನಿಗದಿಪಡಿಸಿದ್ದಾರೆ. ಇದುವರೆಗೆ ಬೌಲಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ವಾರಿಯರ್ಗೆ ಅವಶ್ಯಕ ಸಂದರ್ಭಗಳಿಗೆ ರನ್ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯವಿದೆ.

ಕಳೆದ ಬಾರಿಯೂ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿದ್ದ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ರನ್ನು ಖರೀದಿಸಲು ಯಾರು ಮುಂದೆ ಬರಲಿಲ್ಲ. ಈ ಬಾರಿ ತಮ್ಮ ಮೂಲ ಬೆಲೆಯನ್ನು ಒಂದು ಕೋಟಿಗೆ ನಿಗದಿಪಡಿಸಿರುವ ರೆಹಮಾನ್ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಮುಂದಾಗಬಹುದು. ಏಕೆಂದರೆ ಅಫ್ಘಾನ್ ಪರ ರೆಹಮಾನ್ ತನ್ನ ಸ್ಪಿನ್ ಮ್ಯಾಜಿಕ್ನಿಂದ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದಿಂದ ಗೇಟ್ಪಾಸ್ ಪಡೆದುಕೊಂಡಿರುವ ರಾಸಿ ವ್ಯಾನ್ ಡೆರ್ ಡಸ್ಸೆನ್ ತನ್ನ ಮೂಲ ಬೆಲೆಯನ್ನು 2 ಕೋಟಿಗೆ ಇರಿಸಿಕೊಂಡಿದ್ದಾರೆ. ವಾಸ್ತವವಾಗಿ ಈ ಆಫ್ರಿಕನ್ ಆಟಗಾರ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿದ್ದು, ಕ್ರೀಸ್ನಲ್ಲಿ ಕಚ್ಚಿ ನಿಂತರೆ ರನ್ ಮಳೆ ಹರಿಸುವ ಕಲೆ ಈ ಆಟಗಾರನಿಗೆ ತಿಳಿದಿದೆ.



















