Virat Kohli vs Babar Azam: ವಿರಾಟ್ ಕೊಹ್ಲಿಗೆ ತಿರುಗೇಟು ನೀಡಿದ ಬಾಬರ್ ಆಝಂ

| Updated By: ಝಾಹಿರ್ ಯೂಸುಫ್

Updated on: Jun 12, 2023 | 10:54 PM

Virat Kohli vs Babar Azam: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಅಮೋಘ ಗೆಲುವಿನ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

1 / 6
ಲಂಡನ್​ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2 / 6
ಈ ಅಮೋಘ ಗೆಲುವಿನ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹೀಗೆ ಅಭಿನಂದನೆ ಸಲ್ಲಿಸಿದ ಪಟ್ಟಿಯಲ್ಲಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರಿದ್ದಾರೆ. ಆದರೆ ಇವೆಲ್ಲರ ನಡುವೆ ಎಲ್ಲರ ಗಮನ ಸೆಳೆದಿದ್ದು ಬಾಬರ್ ಆಝಂ ಅವರ ಅಭಿನಂದನೆ.

3 / 6
ಅತ್ತ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಚಾಂಪಿಯನ್ ​ಪಟ್ಟ ಅಲಂಕರಿಸುತ್ತಿದ್ದಂತೆ ಅಭಿನಂದನೆ ಸಲ್ಲಿಸಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್​ನಲ್ಲಿ ಅಭಿನಂದನೆಗಳು ಆಸ್ಟ್ರೇಲಿಯಾ...ಇದು ಅರ್ಹ ಗೆಲುವು ಎಂಬಾರ್ಥದಲ್ಲಿ ಬರೆದುಕೊಂಡಿದ್ದರು.

4 / 6
ವಿಶೇಷ ಎಂದರೆ ಇದಕ್ಕೂ ಮುನ್ನ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೋತಾಗ, ಇಂಗ್ಲೆಂಡ್ ತಂಡಕ್ಕೆ ಅಭಿನಂದನೆ ಸಲ್ಲಿಸಿ ವಿರಾಟ್ ಕೊಹ್ಲಿ ಕೂಡ ಇದೇ ಮಾದರಿಯಲ್ಲಿ ಪೋಸ್ಟ್ ಹಾಕಿದ್ದರು.

5 / 6
ಇದೀಗ ಕೊಹ್ಲಿ ಪೋಸ್ಟ್​ನ ಬರಹವನ್ನೇ ಉಲ್ಲೇಖಿಸಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಆಸ್ಟ್ರೇಲಿಯಾ ತಂಡವನ್ನು ಅಭಿನಂದಿಸಿದ್ದಾರೆ.

6 / 6
ಅಂದರೆ ಈ ಹಿಂದೆ ಪಾಕಿಸ್ತಾನ್ ವಿರುದ್ಧ ಇಂಗ್ಲೆಂಡ್ ಗೆದ್ದಾಗ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ ರೀತಿಯಲ್ಲೇ ಇದೀಗ ಟೀಮ್ ಇಂಡಿಯಾ ವಿರುದ್ಧದ ಆಸ್ಟ್ರೇಲಿಯಾ ಗೆಲುವಿಗೆ ಬಾಬರ್ ಆಝಂ ಅಭಿನಂದನೆ ಸಲ್ಲಿಸಿ ತಿರುಗೇಟು ನೀಡಿದ್ದಾರೆ.

Published On - 10:54 pm, Mon, 12 June 23