Bangladesh Cricket: ಬಾಂಗ್ಲಾದೇಶ ಏಕದಿನ ತಂಡಕ್ಕೆ ನೂತನ ನಾಯಕನ ಆಯ್ಕೆ! ಆದರೆ..?

|

Updated on: Jul 07, 2023 | 2:34 PM

Bangladesh Cricket: ಬಾಂಗ್ಲಾದೇಶ ತಂಡ ಪ್ರಸ್ತುತ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿದ್ದು, ಉಳಿದಿರುವ ಪಂದ್ಯಗಳಲ್ಲಿ ಬಾಂಗ್ಲಾ ತಂಡವನ್ನು ಲಿಟ್ಟನ್ ದಾಸ್ ಮುನ್ನಡೆಸಲಿದ್ದಾರೆ.

1 / 7
ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ  ನಾಯಕ ತಮೀಮ್ ಇಕ್ಬಾಲ್ ತಮ್ಮ ನಾಯಕತ್ವಕ್ಕೆ ಗುರುವಾರ ಹಠಾತ್ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ತೆರವಾಗಿದ್ದ ಬಾಂಗ್ಲಾ ಏಕದಿನ ತಂಡದ ನೂತನ ನಾಯಕನಾಗಿ ಲಿಟ್ಟನ್ ದಾಸ್ ಅವರನ್ನು ಆಯ್ಕೆ ಮಾಡಿರುವುದಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ಘೋಷಿಸಿದೆ.

2 / 7
ಬಾಂಗ್ಲಾದೇಶ ತಂಡ ಪ್ರಸ್ತುತ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿದ್ದು, ಉಳಿದಿರುವ ಪಂದ್ಯಗಳಲ್ಲಿ ಬಾಂಗ್ಲಾ ತಂಡವನ್ನು ಲಿಟ್ಟನ್ ದಾಸ್ ಮುನ್ನಡೆಸಲಿದ್ದಾರೆ.

3 / 7
ಮೂಲಗಳ ಪ್ರಕಾರ, ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾ ತಂಡದ ನಾಯಕತ್ವವನ್ನು ಅನುಭವಿ ಆಲ್​ರೌಂಡರ್ ಶಕಿಬ್ ಅಲ್ ಹಸನ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಾಂಗ್ಲಾ ಕ್ರಿಕೆಟ್​ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

4 / 7
28 ವರ್ಷದ ಲಿಟ್ಟನ್ ಈಗಾಗಲೇ 180 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾ ಪರ ಕಣಕ್ಕಿಳಿದಿದ್ದಾರೆ. ಅಲ್ಲದೆ ಎಲ್ಲಾ ಮೂರು ಸ್ವರೂಪಗಳಲ್ಲಿ ಬಾಂಗ್ಲಾದೇಶದ ನಾಯಕತ್ವವನ್ನು ನಿರ್ವಹಿಸಿರುವ ಅನುಭವವೂ ಲಿಟ್ಟನ್​ಗಿದೆ. ಪ್ರಸ್ತುತ ಉಪನಾಯಕನಾಗಿರುವ ಲಿಟ್ಟನ್, ತಮೀಮ್ ಅನುಪಸ್ಥಿತಿಯಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ.

5 / 7
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಲಿಟ್ಟನ್ ಮುನ್ನಡೆಸಿದ್ದರು. ಅಲ್ಲದೆ ಲಿಟ್ಟನ್ ನಾಯಕತ್ವದಲ್ಲಿ ಬಾಂಗ್ಲಾ ತಂಡ ತವರಿನಲ್ಲಿ ಟೀಂ ಇಂಡಿಯಾವನ್ನು 2-1 ಅಂತರದಿಂದ ಮಣಿಸಿತ್ತು. ಹಾಗೆಯೇ ಗಾಯದ ಕಾರಣ ಶಕಿಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಕಳೆದ ತಿಂಗಳು ನಡೆದ ಏಕೈಕ ಟೆಸ್ಟ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಬಾಂಗ್ಲಾ ತಂಡವನ್ನು ಲಿಟ್ಟನ್ ಮುನ್ನಡೆಸಿದ್ದರು.

6 / 7
ಜುಲೈ 6 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸುವ ಮೂಲಕ ತಮೀಮ್ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ್ದರು. ಏಕದಿನ ವಿಶ್ವಕಪ್‌ಗೆ ಕೇವಲ ಮೂರು ತಿಂಗಳುಗಳು ಬಾಕಿ ಇರುವಾಗ ಬಾಂಗ್ಲಾದೇಶದ ಸಿದ್ಧತೆಗೆ ಇದು ದೊಡ್ಡ ಹೊಡೆತವಾಗಿದೆ. ಇದೀಗ ತಮೀಮ್ ಸ್ಥಾನಕ್ಕೆ ತಂಡವನ್ನು ಮುನ್ನಡೆಸಿದ ಎಲ್ಲಾ ಅನುಭವವನ್ನು ಹೊಂದಿರುವ ಶಕೀಬ್ ಆಯ್ಕೆಯಾಗುವ ಸಾಧ್ಯತೆಗಳಿವೆ.

7 / 7
ಆದರೆ, ಮುಂದಿನ ಕ್ರಮದ ಕುರಿತು ಚರ್ಚಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಗುರುವಾರ ಸಂಜೆ ತುರ್ತು ಸಭೆ ನಡೆಸಿದ್ದರು. ಸಭೆಯ ನಂತರ, ಅಫ್ಘಾನಿಸ್ತಾನ ವಿರುದ್ಧದ ಉಳಿದ ಏಕದಿನ ಪಂದ್ಯಗಳಿಗೆ ಲಿಟ್ಟನ್ ತಂಡದ ನಾಯಕತ್ವವನ್ನು ವಹಿಸುತ್ತಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಆದರೆ ತಮೀಮ್ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸಿದರು.