ಟೆಸ್ಟ್ ಕ್ರಿಕೆಟ್ ಧೂಳೀಪಟ: ಮೊದಲ ದಿನವೇ 325 ರನ್ ಚಚ್ಚಿ ಡಿಕ್ಲೇರ್ ಘೋಷಿಸಿದ ಇಂಗ್ಲೆಂಡ್
TV9 Web | Updated By: ಝಾಹಿರ್ ಯೂಸುಫ್
Updated on:
Feb 16, 2023 | 4:59 PM
New Zealand vs England, 1st Test: ಬ್ರೆಂಡನ್ ಕಲಂ ಬ್ಯಾಟಿಂಗ್ ಬಗ್ಗೆ ಹೇಳಲೇಬೇಕಿಲ್ಲ. ಏಕದಿನ ಕ್ರಿಕೆಟ್ ಇರಲಿ, ಟೆಸ್ಟ್ ಇರಲಿ ಬಾಝ್ ಬ್ಯಾಟ್ ಬೀಸಿದ್ದು ಮಾತ್ರ ಟಿ20 ಮಾದರಿಯಲ್ಲಿ ಎಂಬುದು ವಿಶೇಷ.
1 / 8
ಟೆಸ್ಟ್ ಕ್ರಿಕೆಟ್ನಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ತಂಡವು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದೆ. ಅದು ಕೂಡ ಕೇವಲ 58.1 ಓವರ್ಗಳಲ್ಲಿ 325 ರನ್ ಬಾರಿಸುವ ಮೂಲಕ ಎಂಬುದೇ ವಿಶೇಷ. ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ತಂಡದ ನಾಯಕ ಟಿಮ್ ಸೌಥಿ ಬೌಲಿಂಗ್ ಆಯ್ದುಕೊಂಡಿದ್ದರು.
2 / 8
ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭಿಕ ಆಟಗಾರ ಝ್ಯಾಕ್ ಕ್ರಾವ್ಲಿ 4 ರನ್ಗಳಿಸಿ ಔಟಾದರೆ, ಮತ್ತೊಂದೆಡೆ ಡಕೆಟ್ 68 ಎಸೆತಗಳಲ್ಲಿ 14 ಫೋರ್ನೊಂದಿಗೆ 84 ರನ್ ಚಚ್ಚಿದರು. ಇನ್ನು 3ನೇ ಕ್ರಮಾಂಕದಲ್ಲಿ ಆಡಿದ ಒಲಿ ಪೋಪ್ ಕೂಡ 65 ಎಸೆತಗಳಲ್ಲಿ 42 ರನ್ ಬಾರಿಸಿದರು.
3 / 8
ಆ ಬಳಿಕ ಬಂದ ಜೋ ರೂಟ್ 14 ರನ್ ಬಾರಿಸಿ ನಿರ್ಗಮಿಸಿದರೆ, ಹ್ಯಾರಿ ಬ್ರೂಕ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ನ್ಯೂಜಿಲೆಂಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಬ್ರೂಕ್ 81 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 15 ಫೋರ್ನೊಂದಿಗೆ 89 ರನ್ ಬಾರಿಸಿದರು.
4 / 8
ಇದಾದ ಬಳಿಕ ಕಣಕ್ಕಿಳಿದ ಬೆನ್ ಸ್ಟೋಕ್ಸ್ (19), ಫೋಕ್ಸ್ (38) ಉತ್ತಮ ಕಾಣಿಕೆ ನೀಡಿದರು. ಪರಿಣಾಮ 55 ಓವರ್ಗಳಾಗುವಷ್ಟರಲ್ಲಿ ಇಂಗ್ಲೆಂಡ್ ತಂಡದ ಮೊತ್ತವು 300 ರ ಗಡಿದಾಟಿತು. 58.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 325 ರನ್ಗಳಿಸಿದ್ದ ವೇಳೆ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿದ್ದು ವಿಶೇಷ.
5 / 8
ಅಂದರೆ ಇಂಗ್ಲೆಂಡ್ ಬ್ಯಾಟರ್ಗಳು 350 ಎಸೆತಗಳನ್ನು ಎದುರಿಸಿ 3ನೇ ಸೆಷನ್ಗೂ ಮುನ್ನವೇ 325 ರನ್ ಕಲೆಹಾಕಿದ್ದರು. ಈ ಮೂಲಕ ಡಿಕ್ಲೇರ್ ಘೋಷಿಸಿ ಮೊದಲ ದಿನದಾಟದ ಅಂತ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಅತ್ತ 18 ಓವರ್ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 37 ರನ್ಗಳಿಸಿದೆ.
6 / 8
ಕಳೆದೊಂದು ವರ್ಷದಿಂದ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ. ಕ್ರಿಕೆಟ್ ಅಂಗಳದ ಹೊಡಿಬಡಿ ಆಟಗಾರನೆಂದೇ ಖ್ಯಾತರಾಗಿದ್ದ ಮೆಕಲಂ ಟೆಸ್ಟ್ ಕ್ರಿಕೆಟ್ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಲು ಅವಕಾಶ ನೀಡಿದ್ದಾರೆ. ಹೀಗಾಗಿಯೇ ಇದೀಗ ಟೆಸ್ಟ್ ಕ್ರಿಕೆಟ್ನ ಆಕ್ರಮಣಕಾರಿ ಆಟವನ್ನು ಬಾಝ್ಬಾಲ್ ಕ್ರಿಕೆಟ್ ಎಂದು ಕರೆಯಲಾಗುತ್ತಿದೆ.
7 / 8
ಏನಿದು ಬಾಝ್ಬಾಲ್? ಬ್ರೆಂಡನ್ ಮೆಕಲಂ ಅವರ ಅಡ್ಡಹೆಸರು ಬಾಝ್. ಕ್ರಿಕೆಟ್ ಅಂಗಳದಲ್ಲಿ ಬಾಝ್ ಎಂದೇ ಚಿರಪರಿಚಿತರಾಗಿರುವ ಮೆಕಲಂ ಅವರ ಆಕ್ರಮಣಕಾರಿ ವಿಧಾನವನ್ನು ಇದೀಗ ಬಾಝ್ಬಾಲ್ (BazBall) ಕ್ರಿಕೆಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಟಿ20 ಕ್ರಿಕೆಟ್ನ ಸ್ವರೂಪವನ್ನು ಬದಲಿಸಿದ್ದ ಖ್ಯಾತಿ ಕೂಡ ಮೆಕಲಂಗೆ ಸಲ್ಲುತ್ತದೆ. ಏಕೆಂದರೆ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದಾಗ ಮೆಕಲಂ ಸ್ಪಿನ್ನರ್ನಿಂದ ಮೊದಲ ಓವರ್ ಹಾಕಿಸಿದ್ದರು. ಇದಾದ ಬಳಿಕ ಇದೇ ತಂತ್ರಗಳನ್ನು ಉಳಿದ ತಂಡಗಳ ನಾಯಕರುಗಳ ಪ್ರಯೋಗಿಸಲಾರಂಭಿಸಿದ್ದರು. ಅಂದರೆ ಮೆಕಲಂ ಯಾವುದೇ ಪ್ರಯೋಗಕ್ಕೂ ಹಿಂದೇಟು ಹಾಕುತ್ತಿರಲಿಲ್ಲ.
8 / 8
ಇನ್ನು ಮೆಕಲಂ ಬ್ಯಾಟಿಂಗ್ ಬಗ್ಗೆ ಹೇಳಲೇಬೇಕಿಲ್ಲ. ಏಕದಿನ ಕ್ರಿಕೆಟ್ ಇರಲಿ, ಟೆಸ್ಟ್ ಇರಲಿ ಬಾಝ್ ಬ್ಯಾಟ್ ಬೀಸಿದ್ದು ಮಾತ್ರ ಟಿ20 ಮಾದರಿಯಲ್ಲಿ ಎಂಬುದು ವಿಶೇಷ. ಇದೀಗ ಇಂಗ್ಲೆಂಡ್ ತಂಡದ ಕೋಚ್ ಆಗಿ ನೇಮಕವಾಗುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ನಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ನ್ಯೂಜಿಲೆಂಡ್ ವಿರುದ್ಧ 58.2 ಓವರ್ಗಳಲ್ಲಿ ಇಂಗ್ಲೆಂಡ್ 325 ರನ್ ಬಾರಿಸಿರುವುದು.