BBL 2023: ವಾರಗಳ ಹಿಂದೆ 15 ರನ್ಗೆ ಆಲೌಟ್: ಇದೀಗ ಗರಿಷ್ಠ ಸ್ಕೋರ್ಗಳಿಸಿ ಹೊಸ ದಾಖಲೆ..!
TV9 Web | Updated By: ಝಾಹಿರ್ ಯೂಸುಫ್
Updated on:
Dec 31, 2022 | 9:30 PM
BBL 2023: ಈ ಪಂದ್ಯದಲ್ಲಿ ಟಾಸ್ ಗೆದ್ದ ಹರಿಕೇನ್ಸ್ ತಂಡದ ನಾಯಕ ಮ್ಯಾಥ್ಯೂ ವೇಡ್ ಬೌಲಿಂಗ್ ಆಯ್ದುಕೊಂಡರು. ಆದರೆ ಹೊಬಾರ್ಟ್ ತಂಡದ ಲೆಕ್ಕಚಾರಗಳನ್ನು ಸಿಡ್ನಿ ಥಂಡರ್ಸ್ ಆರಂಭಿಕರು ಬದಲಿಸಿದ್ದರು.
1 / 5
ಡಿಸೆಂಬರ್ 15 ರಂದು ಬಿಗ್ ಬ್ಯಾಷ್ ಲೀಗ್ನಲ್ಲಿ ನಡೆದ 5ನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ವಿರುದ್ಧ ಸಿಡ್ನಿ ಥಂಡರ್ ತಂಡ ಕೇವಲ 15 ರನ್ಗೆ ಆಲೌಟ್ ಆಗಿ ಅತ್ಯಂತ ಕಳಪೆ ದಾಖಲೆ ಬರೆದಿತ್ತು. ಆದರೀಗ ವಾರಗಳ ಅಂತರದಲ್ಲೇ ಅದೇ ತಂಡ ಗರಿಷ್ಠ ಸ್ಕೋರ್ ಬಾರಿಸಿ ಇತಿಹಾಸ ನಿರ್ಮಿಸಿರುವುದು ವಿಶೇಷ.
2 / 5
ಹೌದು, ಬಿಗ್ ಬ್ಯಾಷ್ ಲೀಗ್ನಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟಾದ ಸಿಡ್ನಿ ಥಂಡರ್ ತಂಡವು ಇದೀಗ ಪ್ರಸಕ್ತನ ಲೀಗ್ನಲ್ಲಿ ಅತ್ಯಧಿಕ ರನ್ ಬಾರಿಸಿದ ತಂಡ ಎನಿಸಿಕೊಂಡಿದೆ. ಶನಿವಾರ ನಡೆದ ಲೀಗ್ನ 22ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಹೊಬಾರ್ಟ್ ಹರಿಕೇನ್ಸ್ ತಂಡಗಳು ಮುಖಾಮುಖಿಯಾಗಿತ್ತು.
3 / 5
ಈ ಪಂದ್ಯದಲ್ಲಿ ಟಾಸ್ ಗೆದ್ದ ಹರಿಕೇನ್ಸ್ ತಂಡದ ನಾಯಕ ಮ್ಯಾಥ್ಯೂ ವೇಡ್ ಬೌಲಿಂಗ್ ಆಯ್ದುಕೊಂಡರು. ಆದರೆ ಹೊಬಾರ್ಟ್ ತಂಡದ ಲೆಕ್ಕಚಾರಗಳನ್ನು ಸಿಡ್ನಿ ಥಂಡರ್ ಆರಂಭಿಕರು ಬದಲಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಥ್ಯೂ ಗಿಲ್ಕ್ಸ್ 16 ಎಸೆತಗಳಲ್ಲಿ 33 ರನ್ ಬಾರಿಸಿದರೆ, ಅಲೆಕ್ಸ್ ಹೇಲ್ಸ್ 45 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 77 ರನ್ ಸಿಡಿಸಿದರು. ಆ ಬಳಿಕ ಬಂದ ಒಲಿವರ್ ಡೇವಿಸ್ 32 ಎಸೆತಗಳಲ್ಲಿ 5 ಸಿಕ್ಸ್ ಹಾಗೂ ಫೋರ್ನೊಂದಿಗೆ 65 ರನ್ ಚಚ್ಚಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಸಿಡ್ನಿ ಥಂಡರ್ ತಂಡವು 6 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿತು.
4 / 5
ವಿಶೇಷ ಎಂದರೆ ಇದು ಬಿಗ್ ಬ್ಯಾಷ್ ಲೀಗ್ 2022 ರಲ್ಲಿ ಮೂಡಿ ಬಂದಿರುವ ಗರಿಷ್ಠ ಸ್ಕೋರ್. ಹಾಗೆಯೇ ಬಿಬಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಬಾರಿಸಿದ ಮೂರನೇ ತಂಡ ಎನಿಸಿಕೊಂಡಿದೆ. ಈ ಮೂಲಕ ಒಂದೇ ಸೀಸನ್ನಲ್ಲಿ ಅತ್ಯಲ್ಪ ಹಾಗೂ ಗರಿಷ್ಠ ಸ್ಕೋರ್ ಬಾರಿಸಿದ ವಿಶೇಷ ದಾಖಲೆಯನ್ನು ಸಿಡ್ನಿ ಥಂಡರ್ ತನ್ನದಾಗಿಸಿಕೊಂಡಿದೆ.
5 / 5
ಇನ್ನು ಈ ಪಂದ್ಯದಲ್ಲಿ ಸಿಡ್ನಿ ಥಂಡರ್ ನೀಡಿದ 229 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಹೊಬಾರ್ಟ್ ಹರಿಕೇನ್ಸ್ ಪರ ನಾಯಕ ಮ್ಯಾಥ್ಯೂ ವೇಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 30 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 2 ಫೋರ್ನೊಂದಿಗೆ ವೇಡ್ 67 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಹೊಬಾರ್ಟ್ ಹರಿಕೇನ್ಸ್ ತಂಡವು 17 ಓವರ್ಗಳಲ್ಲಿ 166 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಸಿಡ್ನಿ ಥಂಡರ್ ತಂಡವು 62 ರನ್ಗಳಿಂದ ಭರ್ಜರಿ ಜಯ ಸಾಧಿಸಿತು.