Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2022: ಈ ವರ್ಷ 7 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

Year Ender 2022: ಸರಣಿಗಳಿಂದ ಸರಣಿಗೆ ಟೀಮ್ ಇಂಡಿಯಾ ನಾಯಕರುಗಳು ಬದಲಾಗಿರುವುದು ವಿಶೇಷ. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕ್ಯಾಪ್ಟನ್​ಗಳು ಯಾರೆಲ್ಲಾ ನೋಡೋಣ...

TV9 Web
| Updated By: ಝಾಹಿರ್ ಯೂಸುಫ್

Updated on: Dec 31, 2022 | 8:30 PM

ಒಂದು ತಂಡದಲ್ಲಿ 7 ನಾಯಕರುಗಳು ಇರುತ್ತಾರೆಯೇ? ಆದರೆ 2022ರ ಟೀಮ್ ಇಂಡಿಯಾದ ಸನ್ನಿವೇಶವನ್ನು ಗಮನಿಸಿದರೆ ಯಾಕೆ ಇರಬಾರದಾ ಎಂದು ಕೇಳಬಹುದಷ್ಟೇ. ಏಕೆಂದರೆ ಟೀಮ್ ಇಂಡಿಯಾ  2022 ರಲ್ಲಿ ಬರೋಬ್ಬರಿ 7 ನಾಯಕರುಗಳನ್ನು ಕಣಕ್ಕಳಿಸಿದೆ. ಅಂದರೆ ಟೀಮ್ ಇಂಡಿಯಾವನ್ನು ಒಂದು ವರ್ಷದೊಳಗೆ 7 ಕ್ಯಾಪ್ಟನ್​ಗಳು ಮುನ್ನಡೆಸಿದ್ದಾರೆ.

1 / 10
ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಇಂತಹದೊಂದು ಪರ್ವ ಶುರುವಾಗಿತ್ತು. ಏಕೆಂದರೆ ಕಿಂಗ್​ ಕೊಹ್ಲಿ ಇರುವವರೆಗೂ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಆಗಿರಲಿಲ್ಲ. ಆದರೆ ಆ ಬಳಿಕ ತಿಂಗಳುಗಳ ಅಂತರದಲ್ಲಿ, ಅಂದರೆ ಸರಣಿಗಳಿಂದ ಸರಣಿಗೆ ಟೀಮ್ ಇಂಡಿಯಾ ನಾಯಕರುಗಳು ಬದಲಾಗಿರುವುದು ವಿಶೇಷ. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕ್ಯಾಪ್ಟನ್​ಗಳು ಯಾರೆಲ್ಲಾ ನೋಡೋಣ...

2 / 10
1- ವಿರಾಟ್ ಕೊಹ್ಲಿ: ಕಳೆದ ವರ್ಷಾಂತ್ಯದವರೆಗೂ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯೊಂದಿಗೆ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

3 / 10
2- ರೋಹಿತ್ ಶರ್ಮಾ: ವಿರಾಟ್ ಕೊಹ್ಲಿಯ ರಾಜೀನಾಮೆ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಖಾಯಂ ನಾಯಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ಪ್ರಮುಖ ಸರಣಿಗಳಲ್ಲಿ ಹಿಟ್​ಮ್ಯಾನ್ ತಂಡವನ್ನು ಮುನ್ನಡೆಸಿದ್ದರು.

4 / 10
3- ಕೆಎಲ್ ರಾಹುಲ್: ವಿರಾಟ್ ಕೊಹ್ಲಿಯ ರಾಜೀನಾಮೆ ಬಳಿಕ ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣ ಅವರು ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಉಪನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಟೀಮ್ ಇಂಡಿಯಾ ನಾಯಕರಾಗಿ ಪದಾರ್ಪಣೆ ಮಾಡಿದ್ದರು.

5 / 10
4- ರಿಷಬ್ ಪಂತ್: ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಿದ್ದರು.

6 / 10
5- ಹಾರ್ದಿಕ್ ಪಾಂಡ್ಯ: ಭಾರತ ತಂಡವು ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕಾರಣ ಐರ್ಲೆಂಡ್​ಗೆ ಮೀಸಲು ಟೀಮ್ ಇಂಡಿಯಾವನ್ನು ಕಳುಹಿಸಲಾಗಿತ್ತು. ಎರಡು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು.

7 / 10
6- ಜಸ್​ಪ್ರೀತ್ ಬುಮ್ರಾ: ಇಂಗ್ಲೆಂಡ್ ವಿರುದ್ದ ನಡೆದ ಏಕೈಕ ಟೆಸ್ಟ್​ ಪಂದ್ಯದಿಂದ ಕೊರೋನಾ ಕಾರಣದಿಂದ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದರು. ಹೀಗಾಗಿ ಭಾರತ ತಂಡವನ್ನು ಜಸ್​ಪ್ರೀತ್ ಬುಮ್ರಾ ಮುನ್ನೆಡೆಸುತ್ತಿದ್ದರು.

8 / 10
7- ಶಿಖರ್ ಧವನ್: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಹೊರಗುಳಿದಿದ್ದರು. ಹೀಗಾಗಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಿದ್ದರು.

9 / 10
ಅಂದರೆ 2022 ರಲ್ಲಿ ಬಿಸಿಸಿಐ ಟೀಮ್ ಇಂಡಿಯಾ ಪರ ಒಟ್ಟು 7 ಕ್ಯಾಪ್ಟನ್​ಗಳನ್ನು ಕಣಕ್ಕಿಳಿಸಿ ಹೊಸ ದಾಖಲೆ ಬರೆದಿದೆ. ಇದಕ್ಕೂ ಮುನ್ನ 1959 ರಲ್ಲಿಯೂ ಭಾರತ ಟೆಸ್ಟ್​ ತಂಡವನ್ನು 5 ಆಟಗಾರರು ಮುನ್ನಡೆಸಿದ್ದರು. ಆದರೆ 2022 ರಲ್ಲಿ ಒಟ್ಟು 7 ಆಟಗಾರರು ಭಾರತ ತಂಡದ ನಾಯಕರಾಗಿ ಕಾಣಿಸಿಕೊಂಡಿರುವುದು ವಿಶೇಷ.

10 / 10
Follow us
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್

ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು

ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್

ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ

ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್

ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್

ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ

ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್

ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ

ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !