- Kannada News Photo gallery Cricket photos Year Ender 2022 kohli to Mithali these are the players who Quit Captaincy in 2022
Year Ender 2022: 2022ರಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿದ 6 ಕ್ರಿಕೆಟಿಗರಿವರು
Year Ender 2022: 2022ರಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆಗಳಾಗಿದ್ವು. ಕೊಹ್ಲಿಯೂ ಸೇರಿದಂತೆ ಪ್ರಮುಖ ಸ್ಟಾರ್ ಕ್ರಿಕೆಟರ್ಸ್, ಕ್ಯಾಪ್ಟನ್ಸಿಯಿಂದ ಕೆಳಗಿಳಿದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಅಂತಹವರ ಪಟ್ಟಿ ಇಲ್ಲಿದೆ.
Updated on:Dec 31, 2022 | 4:28 PM

2022ರಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆಗಳಾಗಿದ್ವು. ಕೊಹ್ಲಿಯೂ ಸೇರಿದಂತೆ ಪ್ರಮುಖ ಸ್ಟಾರ್ ಕ್ರಿಕೆಟರ್ಸ್, ಕ್ಯಾಪ್ಟನ್ಸಿಯಿಂದ ಕೆಳಗಿಳಿದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಹಾಗಾದ್ರೆ, 2022ರಲ್ಲಿ ಕ್ಯಾಪ್ಟನ್ಸಿ ತೊರೆದ ಸ್ಟಾರ್ಗಳ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ? ಸಣ್ಣ ಇಣುಕುನೋಟ ಹರಿಸೋಣ ಬನ್ನಿ.

ವಿರಾಟ್ ಕೊಹ್ಲಿ, ಭಾರತ: 2021ರ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ನಾಯಕತ್ವ ವಹಿಸಿದ್ದ ಕಿಂಗ್ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿದಿದ್ರು. ಮುಂದೆ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲಾಯ್ತು. ಬಳಿಕ, ಟೆಸ್ಟ್ ನಾಯಕತ್ವ ಮಾತ್ರ ಉಳಿಸಿಕೊಂಡಿದ್ದ ಕೊಹ್ಲಿ, 2022ರ ಜನವರಿ 15ರಂದು ಟೆಸ್ಟ್ ನಾಯಕತ್ವಕ್ಕೂ ಗುಡ್ಬೈ ಹೇಳಿ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಿದ್ರು.

ಕೇನ್ ವಿಲಿಯಮ್ಸನ್, ನ್ಯೂಜಿಲೆಂಡ್: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯಂತೆ ಬೆಸ್ಟ್ ನಾಯಕನಾಗಿ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಗುರುತಿಸಿಕೊಂಡಿದ್ರು. ಆದ್ರೆ, ಬ್ಯಾಟಿಂಗ್ ವೈಫಲ್ಯದಿಂದ ಬೇಸತ್ತು ವಿಲಿಯಮ್ಸನ್, ಕಳೆದ ಡಿಸೆಂಬರ್ 15ಂದು ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟುಕೊಟ್ಟಿದ್ರು.

ಜೋ ರೂಟ್, ಇಂಗ್ಲೆಂಡ್: ಇಂಗ್ಲೆಂಡ್ ತಂಡದಲ್ಲಿ ಟೆಸ್ಟ್ ಸ್ಪೆಷಾಲಿಸ್ಟ್ ಅಂತ ಕರೆಸಿಕೊಂಡವರು ಜೋ ರೂಟ್. ಆದ್ರೆ, ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಯಾವಾಗ ಇಂಗ್ಲೆಂಡ್ 4-0ಯಿಂದ ಹೀನಾಯವಾಗಿ ಸೋತಿತೋ, ಅದರ ಬೆನ್ನಲ್ಲೇ, ಅಂದ್ರೆ ಏಪ್ರಿಲ್ 15ರಂದು ರೂಟ್ ಟೆಸ್ಟ್ ನಾಯಕತ್ವಕ್ಕೆ ಬೈ ಅಂದುಬಿಟ್ರು.

ಇಯಾನ್ ಮಾರ್ಗನ್, ಇಂಗ್ಲೆಂಡ್: ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ, ಇಯಾನ್ ಮಾರ್ಗನ್ ಈಚಿನ ದಿನಗಳಲ್ಲಿ ಫಾರ್ಮ್ನ ಸಮಸ್ಯೆಯಿಂದ ಬಳಲುತ್ತಿದ್ರು. ಹೀಗಾಗಿ ಜೂನ್ 28ರಂದು ಮಾರ್ಗನ್, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ರು. ಈ ಮೂಲಕ ಮಾರ್ಗನ್ ವೈಟ್ಬಾಲ್ ಕ್ರಿಕೆಟ್ ನಾಯಕತ್ವವನ್ನೂ ಕೊನೆಗೊಳಿಸಿದ್ರು.

ಆ್ಯರನ್ ಫಿಂಚ್, ಆಸ್ಟ್ರೇಲಿಯಾ: ಸ್ಫೋಟಕ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಆ್ಯರನ್ ಫಿಂಚ್, ಸೆಪ್ಟೆಂಬರ್ 10ರಂದು ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ರು. ಹೀಗಾಗಿ ಫಿಂಚ್, ಏಕದಿನ ನಾಯಕತ್ವಕ್ಕೆ ಅಂತ್ಯಹಾಡಬೇಕಾಯ್ತು. ಆದ್ರೆ, ಫಿಂಚ್ ಸದ್ಯ ಆಸೀಸ್ ಟಿ20 ತಂಡದ ನಾಯಕತ್ವ ಮುಂದುವರೆಸಿದ್ದಾರೆ.

ಮಿಥಾಲಿ ರಾಜ್, ಭಾರತ: ಭಾರತೀಯ ವನಿತಾ ಏಕದಿನ ಮತ್ತು ಟೆಸ್ಟ್ ತಂಡವನ್ನು ಮುನ್ನಡೆಸ್ತಿದ್ದ ಮಿಥಾಲಿ ರಾಜ್, ಜೂನ್ 8ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ರು. ಹೀಗಾಗಿ ಭಾರತೀಯ ತಂಡದ ನಾಯಕತ್ವವೀಗ ಹರ್ಮನ್ಪ್ರೀತ್ ಕೌರ್ನ ಹೆಗಲಿಗೇರಿದೆ.
Published On - 4:28 pm, Sat, 31 December 22




