IND vs AUS Test: ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ದಿಢೀರ್ ಸ್ಥಳಾಂತರ: ಬಿಸಿಸಿಐಯಿಂದ ಮಹತ್ವದ ನಿರ್ಧಾರ ಪ್ರಕಟ
India vs Australia 3rd Test: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮಾರ್ಚ್ 1 ರಿಂದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಮೂರನೇ ಟೆಸ್ಟ್ ಶುರುವಾಗಬೇಕಿತ್ತು. ಆದರೆ, ಪಿಚ್ ಸಂಪೂರ್ಣ ಸಜ್ಜಾದ ಕಾರಣ ಪಂದ್ಯ ಆಡಲು ಯೋಗ್ಯವಾಗಿಲ್ಲ.
1 / 7
ಬಾರ್ಡರ್ - ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಪಂದ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಥಳಾಂತರಿಸಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಇಂಡೋ- ಆಸೀಸ್ ಮೂರನೇ ಟೆಸ್ಟ್ ಅನ್ನು ಬೇರೆಡೆ ಆಡಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ.
2 / 7
ಮಾರ್ಚ್ 1 ರಿಂದ 5ರ ವರೆಗೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಮೂರನೇ ಟೆಸ್ಟ್ ಆಯೋಜನೆಯಾಗಿತ್ತು. ಆದರೆ, ಪಿಚ್ ಸಂಪೂರ್ಣ ಸಜ್ಜಾದ ಕಾರಣ ಅಂತರರಾಷ್ಟ್ರೀಯ ಪಂದ್ಯ ಆಡಲು ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ.
3 / 7
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಅನ್ನು ಇತ್ತೀಚೆಗಷ್ಟೆ ನೂತನವಾಗಿ ನವೀಕರಣಗೊಳಿಸಲಾಗಿತ್ತು. ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಕ್ರೀಡಾಂಗಣವನ್ನು ವಿಶೇಷವಾಗಿ ಸರಿಪಡಿಸಲಾಗುತ್ತಿದೆ. ಆದರೆ, ನಿರಂತರ ಮಳೆ ಸುರಿಯುತ್ತಿರುವ ಕಾರಣ ಕಾಮಗಾರಿ ವಿಳಂಬವಾಗಿದೆ.
4 / 7
ಪಿಚ್ ಸರಿಪಡಿಸುವ ಕೆಲಸ ನಡೆಯುತ್ತಿರುವುದರಿಂದ ಇಲ್ಲಿ ರಣಜಿ ಸೇರಿದಂತೆ ಯಾವುದೇ ಪಂದ್ಯವನ್ನು ಆಯೋಜಿಸಿಲ್ಲ. ಸದ್ಯ ಬಿಸಿಸಿಐನ ವಿಶೇಷ ಅಧಿಕಾರಿಗಳು ಧರ್ಮಶಾಲಗೆ ತೆರಳಿ ಪಿಚ್ ಪರಿಶೀಲನೆ ನಡೆಸಿದ್ದು ಅಂತರರಾಷ್ಟ್ರೀಯ ಪಂದ್ಯ ನಡೆಯಲು ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.
5 / 7
''ದುರದೃಷ್ಟವಶಾತ್, ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ಧರ್ಮಶಾಲಾದಿಂದ ಸ್ಥಳಾಂತರಿಸಬೇಕಾಗಿದೆ. 3ನೇ ಟೆಸ್ಟ್ ಪ್ರಾರಂಭವಾಗುವ ಹೊತ್ತಿಗೆ ಕ್ರೀಡಾಂಗಣ ಸಿದ್ಧವಾಗುವುದು ಅನುಮಾನ. HPCA ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ ಔಟ್‌ಫೀಲ್ಡ್ ಅಂತರರಾಷ್ಟ್ರೀಯ ಪಂದ್ಯವಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ, ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಇದು ಅನರ್ಹವಾಗಿದೆ,'' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
6 / 7
ಹೀಗಾಗಿ ಭಾರತ-ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ತಿಳಿಸಿದೆ.
7 / 7
2017 ರಲ್ಲಿ ಇದೇ ಧರ್ಮಶಾಲಾದಲ್ಲಿ ಭಾರತ- ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ನಡೆದಿತ್ತು. ಇದು ಇಲ್ಲಿದೆ ನಡೆದ ಕೊನೆಯ ಟೆಸ್ಟ್ ಪಂದ್ಯ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿಗೆ ಇಂಜುರಿ ಆಗಿದ್ದ ಕಾರಣ ಅಜಿಂಕ್ಯಾ ರಹಾನೆ ನಾಯಕನಾಗಿದ್ದರು. ರವೀಂದ್ರ ಜಡೇಜಾ ಆಲ್ರೌಂಡರ್ ಪ್ರದರ್ಶನ ತೋರಿ ತಂಡದ ಗೆಲುವಿಗೆ ಕಾರಣರಾಗಿದ್ದರು.
Published On - 10:36 am, Mon, 13 February 23