ಗಬ್ಬೆದ್ದು ನಾರುತ್ತಿವೆ ಶೌಚಾಲಯಗಳು; ವಿಶ್ವಕಪ್ಗೂ ಮುನ್ನ 5 ಕ್ರೀಡಾಂಗಣಗಳ ರಿಪೇರಿಗೆ ಮುಂದಾದ ಬಿಸಿಸಿಐ
ICC ODI World Cup 2023: ಪ್ರೇಕ್ಷಕರ ದೂರಿನ ಮೇರೆಗೆ ನವೀಕರಣಕ್ಕಾಗಿ ಬಿಸಿಸಿಐ ಒಟ್ಟು ಐದು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿದ್ದು, ಈ 5 ಕ್ರೀಡಾಂಗಣಗಳ ನವೀಕರಣಕ್ಕೆ ಒಟ್ಟು 500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ.
1 / 8
ಈ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯವಹಿಸುತ್ತಿದೆ. ಅದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣವನ್ನು ನವೀಕರಿಸಲು ಬಯಸಿದೆ. ಪ್ರೇಕ್ಷಕರ ದೂರಿನ ಮೇರೆಗೆ ನವೀಕರಣಕ್ಕಾಗಿ ಬಿಸಿಸಿಐ ಒಟ್ಟು ಐದು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿದ್ದು, ಈ 5 ಕ್ರೀಡಾಂಗಣಗಳ ನವೀಕರಣಕ್ಕೆ ಒಟ್ಟು 500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ.
2 / 8
ಐದು ಕ್ರೀಡಾಂಗಣಗಳಲ್ಲಿ ಒಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ. ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗವಾಸ್ಕರ್ ಸರಣಿಯ ಸಂದರ್ಭದಲ್ಲಿ ಪ್ರೇಕ್ಷಕರು ಕ್ರೀಡಾಂಗಣದ ಕೊಳಕು ಶೌಚಾಲಯಗಳ ಬಗ್ಗೆ ದೂರಿದರು. ಇದಕ್ಕಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ದುರಸ್ಥಿತಿಗೆ ಬಿಸಿಸಿಐ 100 ಕೋಟಿ ರೂ. ಮೀಸಲಿಟ್ಟಿದೆ.
3 / 8
ಮುಂಬೈನ ವಾಂಖೆಡೆ ಸ್ಟೇಡಿಯಂ ಕೂಡ ತನ್ನ ಅನೈರ್ಮಲ್ಯ ಶೌಚಾಲಯಗಳಿಗೆ ಕುಖ್ಯಾತವಾಗಿದೆ. ಹೀಗಾಗಿ ಮಂಡಳಿಯಿಂದ ವಾಂಖೇಡ್‌ಗೆ 78 ಕೋಟಿ 82 ಲಕ್ಷ ರೂ. ಅನುದಾನ ನೀಡಲಾಗಿದೆ.
4 / 8
ಅಲ್ಲದೆ ಹೈದರಾಬಾದ್ನಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ ದುರಸ್ಥಿಗೆ 117 ಕೋಟಿ 17 ಲಕ್ಷ ರೂ. ಅನುದಾನ ನೀಡಲಾಗಿದೆ.
5 / 8
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಅಶುಚಿಯಾದ ಶೌಚಾಲಯಗಳ ಬಗ್ಗೆ ದೂರುಗಳ ಪಟ್ಟಿಯಲ್ಲಿ ಐಕಾನಿಕ್ ಈಡನ್ ಗಾರ್ಡನ್ಸ್ ಕೂಡ ಇದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದೂರುಗಳ ಆಧಾರದ ಮೇಲೆ ಬಿಸಿಸಿಐ, ಈಡನ್ ಗಾರ್ಡನ್ಸ್ ದುರಸ್ಥಿಗೆ 127.82 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.
6 / 8
ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣಕ್ಕೆ 79.46 ಕೋಟಿ ರೂ. ನೀಡುತ್ತಿದೆ.
7 / 8
ಐಸಿಸಿ ಏಕದಿನ ವಿಶ್ವಕಪ್‌ಗೆ ಒಟ್ಟು 12 ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ಮೇಲಿನ ಕ್ರೀಡಾಂಗಣಗಳ ಹೊರತಾಗಿ ಚೆನ್ನೈ, ಧರ್ಮಶಾಲಾ, ಗುವಾಹಟಿ, ಬೆಂಗಳೂರು, ಲಕ್ನೋ, ಇಂದೋರ್‌ನಲ್ಲಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲ್ಲಿವೆ.
8 / 8
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.
Published On - 4:02 pm, Fri, 14 April 23